ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸೇವಾದಳದ ನೂತನ ಜಿಲ್ಲಾಧ್ಯಕ್ಷರಾಗಿ ಶಿವಕುಮಾರ್ .ಡಿ ಆಯ್ಕೆ .ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜನರವರ ಸೂಚನೆ ಮೇರೆಗೆ ಆಯ್ಕೆ ಮಾಡಿ ಆದೇಶಿಸಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಪಕ್ಷ ಸಂಘಟನೆ ಸೇವೆಯನ್ನ ಪರಿಗಣಿಸಿದ ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ರಾಷ್ಟ್ರೀಯ ಅಧ್ಯಕ್ಷರಾದ ಲಾಲ್ ಜಿ ದೇಸಾಯಿ ಆದೇಶದ ಮೇರೆಗೆ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ರಾಜ್ಯಾಧ್ಯಕ್ಷರಾದ ರಾಮಚಂದ್ರ ಎಂ ಇವರ ಸೂಚನೆ ಮೇರೆಗೆ ಮತ್ತು ದಾವಣಗೆರೆ ಮಾಜಿ ಸಚಿವರು ಹಿರಿಯರು ಶಾಸಕರಾಗಿರುವಂತ ಶಾಮನೂರ್ ಶಿವಶಂಕರಪ್ಪಜಿರವರು ಮತ್ತು ಜಿಲ್ಲಾ ಮಂತ್ರಿಗಳಾದ ಎಸ್ ಎಸ್ ಮಲ್ಲಿಕಾರ್ಜುನ್ ರವರು ಹಾಗೂ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರ ಇವರುಗಳ ಆದೇಶದ ಮೇರೆಗೆ ಶಿವಕುಮಾರ್ ಡಿ ಇವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಹಾಗೂ ಮಹಿಳಾ ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಲಾಲ್ ಜಿ ದೇಸಾಯಿ ರವರು ಮತ್ತು ರಾಜ್ಯಾಧ್ಯಕ್ಷರಾದ ರಾಮಚಂದ್ರ ಎಂ ರವರು ಮತ್ತು ಮಹಿಳಾ ಕಾಂಗ್ರೇಸ್ ಸೇವಾದಳದ ರಾಜ್ಯಾಧ್ಯಕ್ಷೆ ಗಿರೀಜಾ ಹೂಗಾರ್ ರವರ ಆದೇಶ ಮೇರೆಗೆ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಬಂದಿರುವ ಅರಸಿಕೆರೆ ಉಮಾರವರ ಸೇವೆಯನ್ನ ಪರಿಗಣಿಸಿ ನಗರ ಮತ್ತು ಗ್ರಾಮೀಣ ಬಾಗಗಳಲ್ಲಿ ಮಹಿಳಾ ಸಂಘಟನೆಯಲ್ಲಿ ಸದಾ ಗುರುತಿಸಿಕೊಂಡಿರುವ ಉಮಾತೋಟಪ್ಪ ಇವರನ್ನು ಸಹ ಇದೆ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾಂಗ್ರೇಸ್ ಸೇವಾದಳದ ರಾಜ್ಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶಿಸಿ ಈ ದಿನದಿಂದಲ್ಲೆ ಪಕ್ಷ ಸಂಘನೆಯಲ್ಲಿ ತೊಡಗಿ ಕಾಂಗ್ರೇಸ್ ಪಕ್ಷದ ಏಳ್ಗಿಗೆ ಶ್ರಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಕಾರ್ಜನ ರವರು ಶುಭಾ ಹಾರೈಸಿ ಪ್ರೊತ್ಸಾಹಿಸಿದರು.
ನೂತನ ಕಾಂಗ್ರೇಸ್ ಸೇವಾದಳದ ಜಿಲ್ಲಾಧ್ಯಕ್ಷ ಶಿವಕುಮಾರ್ ಹಾಗೂ ಮಹಿಳಾ ಕಾಂಗ್ರೇಸ್ ಸೇವಾದಳದ ರಾಜ್ಯ ಉಪಾಧ್ಯಕ್ಷೆ ಉಮಾತೋಟಪ್ಪರವರು ದಾವಣಗೆರೆ ನಗರದಲ್ಲಿರುವ ಎಸ್ ಎಸ್ ಮನೆಗೆ ತೆರಳಿ ಶಾಲು ಹಾರ ಹಾಕಿ ಸನ್ಮಾನಿಸಿ ಹೃದಯಪೂರ್ವಕ ಕೃತಜ್ಘತೆ ಸಲ್ಲಿಸಿದರು ಈ ಸಂದರ್ಭದಲ್ಲಿ ಮುಖಂಡ ಕಣ್ಣಾಳ್ ಅಂಜಿನಪ್ಪ ಸೇರಿದಂತೆ ಮುಂತಾದ ಮುಖಂಡರುಗಳು ಹಾಜುರಿದ್ದರು.