ಸುದ್ದಿ ಜಗಳೂರು
ಜಗಳೂರು ತಾಲೂಕಿನ ಹಿರಿಯ ಹೋರಾಟಗಾರ ರೈತಪರ ಹೋರಾಟಗಳ ಹಿರಿಯ ಮುತ್ಸದ್ದಿ ತಾಲ್ಲೂಕಿನ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಪರಿಶ್ರಮದ ಹರಿಕಾರ ತಾಲೂಕಿನ ರೈತ ಸಂಘಟನೆಗಳ ಹಿರಿಯ ನಾಯಕ ನಿಷ್ಪಕ್ಷಪಾತ ಮತ್ತು ನೇರ ದಿಟ್ಟ ಹೋರಾಟಗಾರ ಸ್ನೇಹಜೀವಿ ಶ್ರೀಯುತ “ಗಡಿ ಮಾಕುಂಟೆ ಬಸವರಾಜಪ್ಪ”ನವರು ತಡರಾತ್ರಿಯಲ್ಲಿ ಸುಮಾರು 12 :50 ರಲ್ಲಿ ಉಸಿರಾಟದ ಸಮಸ್ಯೆಯಿಂದ ಕೊನೆಯುಸಿರಳೆದಿರುತ್ತಾರೆ
ಇವರ ಅಂತ್ಯ ಸಂಸ್ಕಾರವನ್ನ
ದಿನಾಂಕ:- 19 – 04- 2025 ರಂದು ಅವರ ಸ್ವಗ್ರಾಮವಾದ ಗಡಿ ಮಾಕುಂಟೆ ಶ್ರೀಯುತರ ಅಂತ್ಯಸಂಸ್ಕಾರ ಅವರ ತೋಟದ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಶ್ರೀಯುತರು ತಾಲ್ಲೂಕಿನಲ್ಲಿ ಯಾವುದೇ ಜನಪರ ರೈತಪರ ಹೋರಾಟಗಳಿದ್ದರು ಸಹ ಆ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದನ್ನ ನಾವು ಸ್ಮರಿಸಬಹುದು.ತಾಲ್ಲೂಕಿನ
ಎಲ್ಲಾ ಪ್ರಗತಿಪರ ಹೋರಾಟಗಾರರ ರಾಜಕಾರಣಿಗಳ ರೈತರ ಹಾಗೂ ಅಧಿಕಾರಿಗಳ ಮತ್ತು ಕುಟುಂಬದವರ ಬಂಧು ಬಳಗದವರನ್ನ ಬಿಟ್ಟು ಆಗಲಿದ್ದಾರೆ ಇವರ ಸಾವಿನ ಸುದ್ದಿ ಕೇಳಿ ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆ ಮುಖಂಡರುಗಳು ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಶ್ರೀಯುತ ಬಸವರಾಜಪ್ಪನವರು 2024 ಆಗಸ್ಟ್ 17 ರಂದು ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಸಮೀಪದ ಹುಲಿಕೆರೆ ಗ್ರಾಮದ ಆನಂದನರ್ಸರಿಯಲ್ಲಿ ನಡೆದ ‘ವಿಶ್ವ ಕನ್ನಡ ಸಾಹಿತ್ಯ ಪರಿಸರ ಸಮ್ಮೇಳನ’ದಲ್ಲಿ ‘ಶ್ರೀ ಸೊನ್ನಲಿಗೆ ಶ್ರೀ ಸಿದ್ದರಾಮೇಶ್ವರ ರಾಜ್ಯಪ್ರಶಸ್ತಿ’ ಪಡೆದು ರಾಜ್ಯ ಪ್ರಶಸ್ತಿ ಪುರಸ್ಕೃರಾಗಿದ್ದರು..
