15 ದಿನಗಳೊಳಗೆ ಅಭಿವೃದ್ದಿ ಕಾಮಗಾರಿಗಳನ್ನು   ಪೂರ್ಣಗೊಳಿಸಿ ನಿರ್ಲಕ್ಷ್ಯಸಿದರೆ ಎತ್ತಂಗಡಿ ಮಾಡುವೆ :ಶಾಸಕ ಎಸ್.ವಿ.ರಾಮಚಂದ್ರ ಎಚ್ಚರಿಕೆ

ಜಗಳೂರು ಸುದ್ದಿ:ನನ್ನ ಆಡಳಿತಾವಧಿಯಲ್ಲಿ ಕೈಗೊಂಡಿರುವ ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗಳನ್ನು 15 ದಿನದೊಳಗಾಗಿ ಪೂರ್ಣಗೊಳಿಸಬೇಕು ನಿರ್ಲಕ್ಷ್ಯ ವಹಿಸಿದರೆ ತಾಲೂಕಿನಿಂದ ಕೋಕ್ ನೀಡಲಾಗುವುದು ಎಂದು ಅನುಷ್ಠಾನ ಅಧಿಕಾರಿಗಳಿಗೆ  ಶಾಸಕ ಎಸ್.ವಿ.ರಾಮಚಂದ್ರ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು‌ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಭದ್ರಾಮೇಲ್ದಂಡೆ ಯೋಜನೆ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಹಾಗೂ ಸಚಿವರುಗಳು ಆಗಮಿಸುವದರಿಂದ ಕೈಗೊಂಡ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ,ಲೊಕಾರ್ಪಣೆಗೊಳ್ಳಬೇಕು ಎಂದು ಶಾಸಕ ಎಸ್ ವಿ ರಾಮಚಂದ್ರ.

ಇದು ಮಹತ್ವದ ಸಭೆಯಾಗಿದ್ದು.ಇಂದಿನ ತ್ರೈಮಾಸಿಕ ಸಭೆಗೆ ಕೆಲ ಅಧಿಕಾರಿಗಳು ಗೈರಾಗಿದ್ದು.ಪಿಡಿಓ ಗಳು ಆಗಮಿಸಿಲ್ಲ ಮತ್ತೊಂದು ಬಾರಿ ಕಡ್ಡಾಯವಾಗಿ ಅಧಿಕಾರಿಗಳನ್ನು ಸಭೆಗೆ ಕರೆಯುವಂತೆ ತಾ.ಪಂ ಇಓ ಗೆ ತರಾಟೆ ತೆಗೆದುಕೊಂಡರು.

ಅಧಿಕಾರಿಗಳಿಗೆ ರಾಜಕಾರಣ ಬೇಡ:ನನ್ನ ಆಡಳಿತಾವಧಿಯಲ್ಲಿ ಅಧಿಕಾರಿಗಳು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಉತ್ತಮ ಸಹಕಾರ ನೀಡಿದ್ದು.ತಮಗೆ ಚಿರ ಋಣಿಯಾಗಿರುವೆ.ಜನಪ್ರತಿನಿಧಿಗಳು ಇಲ್ಲದ ವೇಳೆ ಚುನಾವಣೆ ಮುಕ್ತಾಯದವರೆಗೆ ತಾವುಗಳು ಇದೇ ರೀತಿಯಲ್ಲಿ ಸಾರ್ವಜನಿಕರಿಗೆ,ಕೂಲಿಕಾರ್ಮಿಕ,ರೈತಾಪಿ ವರ್ಗಕ್ಕೆ  ಅಲೆದಾಡಿಸದೆ ಸೌಲಭ್ಯ ಕಲ್ಪಿಸಬೇಕು.ಅಲ್ಲದೆ ಚುನಾವಣೆಯಲ್ಲಿ ಯಾರೊಬ್ಬ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸದೆ ಶಾಂತಿಯುವ ಚುನಾವಣೆ ನಡೆಸಬೇಕು ಎಂದು ಸಲಹೆ ನೀಡಿದರು.

ಬರದನಾಡು ಮುಕ್ತವಾಗಲು ಸಂಕಲ್ಪ:ನನ್ನ ಆಡಳಿತಾವಧಿಯಲ್ಲಿ ಸಿರಿಗೆರೆ ಶ್ರೀಗಳ ಸಹಕಾರದಿಂದ ಹಾಗೂ ಬಿಜೆಪಿ ಪಕ್ಷದ ಆಡಳಿತಾವಧಿಯಲ್ಲಿ ಎರಡು ಮಹತ್ತರ ನೀರಾವರಿ ಯೋಜನೆಗಳು ಸಕಾರಗೊಂಡಿವೆ.164 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು.ಬರದನಾಡು ಮುಕ್ತ ನನ್ನ ಸಂಕಲ್ಪ ಎಂದರು.

ವಿವಿದ ಇಲಾಖೆಗಳಲ್ಲಿ ಎಸ್ ಇಪಿ ಟಿಎಸ್ ಪಿ ಅನುದಾನ ವಾಪಸ್ಸಾಗದಂತೆ ನೋಡಿಕೊಂಡು, ಮಾರ್ಚ್ 10 ರ ಒಳಗಾಗಿ ಸಂಪೂರ್ಣ ಬಳಕೆಮಾಡಿದ ವರದಿ ನೀಡಬೇಕು.ಅಲ್ಲದೆ ತಾಲೂಕಿನಲ್ಲಿ ಅಂಬೇಡ್ಕರ್ ಭವನಕಟ್ಟಡಗಳಿಗೆ ಕೇವಲ ಶೇ30 ರಷ್ಟು ಅನುದಾನ ಬಿಡುಗಡೆಯಾಗಿದೆ ಪೂರ್ಣ ಅನುದಾನ ಬಿಡುಗಡೆಗೆ ಶಾಸಕರ ಬಳಿ ಮನವಿ ಮಾಡಿದರು ಅಲ್ಲದೆ ವಿವಿಧ ಇಲಾಖೆಗಳ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ ತಿಳಿಸಿದರು.

ಸಂದರ್ಭದಲ್ಲಿ ತಾ.ಪಂ ಪ್ರಭಾರಿ ಇಓ ಚಂದ್ರಶೇಖರ್,ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ,ಲೊಕೋಪಯೋಗಿ ಇಲಾಖೆ ಎಇಇ ರುದ್ರಪ್ಪ,ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. 

Leave a Reply

Your email address will not be published. Required fields are marked *

You missed

error: Content is protected !!