By shukradeshe news online portal Kannada news editor m.rajappa vyasagondanahalli vishesha lekhan at maheshwrappa jagalure June 13_6_2026
ಜನರ ನಡುವಿನ ಜನನಾಯಕನಂತೆ ಮಿಂಚುವ ನಕ್ಷತ್ರ ಇತರರಿಗೆ ಮಾದರಿಯಾದ ಕಾಂಗ್ರೆಸ್ ಎಸ್ ಸಿ ಘಟಕದ ಅದ್ಯಕ್ಷರಾದ ಬಿ.ಮಹೇಶಣ್ಣ
ಯುವಕರಿಗೆ ದಾರಿದೀಪಾ
ನೊಂದವರ ಬಡವರ ಪಾಲಿನ ಆಶಾಕಿರಣ ಕಾಗ್ರೆಸ್ ಎಸ್ ಸಿ ಘಟಕದ ಅದ್ಯಕ್ಷರಾದ ಬಿ.ಮಹೇಶ್ವರಪ್ಪರ ಸೇವಾ ಕಾರ್ಯವೆ ಒಂದು ಕೈಗನ್ನಡಿ
ಜನರೊಳಗೊಬ್ಬ ಜನನಾಯಕ
ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನ್ನಿಸಿಕೊಳ್ಳುವ ವ್ಯಕ್ತಿತ್ವ ಕೆಲವರಿಗೆ ಮಾತ್ರ ಎನ್ನುವ ಹಾಗೆ ಜಗಳೂರು ತಾಲ್ಲೂಕು ಕೇಂದ್ರಲೊಬ್ಬ ನಿಸ್ವಾರ್ಥ ಸೇವೆಗೈಯ್ಯುತ್ತಿರುವ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಬಿ ಮಹೇಶ್ವರಪ್ಪ ಸಾಮಾಜಿಕ ಸೇವಾ ಕಾರ್ಯವೆ ಇತರರಿಗೆ ಮಾದರಿಯಾಗಿದೆ.
ಸಾಮಾಜಿಕ ಸೇವೆ ಎಂದರೆ ರಾಷ್ಟ್ರ ಮಟ್ಟದಲ್ಲಾದರು ಆಗಬಹುದು ರಾಜ್ಯ ಮಟ್ಟದಲ್ಲಾದರು ಆಗಬಹುದು ತಾಲ್ಲೂಕು ಕೇಂದ್ರದಲ್ಲಾದರು ಆಗಲಿ ನಮ್ಮ ಸುತ್ತಮುತ್ತ ನೆರೆಹೊರೆಯಲ್ಲಾದರು ಆಗಲಿ ನಿಸ್ವಾರ್ಥ ಸೇವೆ ಮಾಡುವುದು ಬಹುಮುಖ್ಯ
ಒಟ್ಟಾರೆ ಸೇವೆಗೆ ನಿಂತ ಮೇಲೆ ಸಾಮಾಜಿಕ ಕಳೆ ಕಳಿ ಬಹಳ ಮುಖ್ಯ ಅದರಂತೆಯೆ ಜನರ ನಡುವಿನಲೋಬ್ಬ ನಿವೃತ್ತ ಅಧಿಕಾರಿ ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಅದ್ಯಕ್ಷರಾಗಿ ಆಯ್ಕೆಯಾದ ಅಂದಿನಿಂದ ಮಹೇಶಣ್ಣ ಜಗಳೂರು ಕ್ಷೇತ್ರದಲ್ಲಿ ಜನರ ಸಮಸ್ಯೆಗಳ ಬಗ್ಗೆ ಆಲಿಸಿ ಸೇವೆಗೈಯ್ಯುತ್ತಿರುವುದು ನಿಜಕ್ಕೂ ಕೂಡ ಶ್ಲಾಘನೀಯವಾಗಿದೆ. ರಾಜ್ಯ ಮಟ್ಟಕ್ಕೆ ಎಲ್ಲರೂ ಸಾಧನೆ ಮಾಡುವುದು ಸಾಧ್ಯವಿಲ್ಲವಾದರೂ ಪ್ರತಿಯೊಬ್ಬರೂ ತಮ್ಮ ತಮ್ಮ ಯೋಗ್ಯತಾನುಸಾರ ಸಮಾಜ ಸೇವೆಯನ್ನು ಮಾಡಬಹುದು ಎಂದು ತೋರಿಸಿಕೊಟ್ಟ ನಿವೃತ್ತ ಅಧಿಕಾರಿಯೆ ಮಹೇಶಣ್ಣ ಕಾರ್ಯವೆ ‘ಜನಸೇವೆಯೇ ಜನಾರ್ಧನನ ಸೇವೆ’ ಎಂಬ ಗಾದೆಯಂತೆ ಸಮಾಜ ಸೇವೆಯು ದೇವರ ಪೂಜೆಗಿಂತ ಶ್ರೇಷ್ಠ ಎಂಬುದನ್ನು ಅವರಿಂದ ತಿಳಿಯಬೇಕಾಗಿದೆ…
ಶ್ರೀಯುತರು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಪಟ್ಟಣದ ಹೊರವಲಯದಲ್ಲಿರುವ ಅಲೆಮಾರಿ ಅರೆ ಅಲೆಮಾರಿ ಕುಟುಂಬದವರು ಬದುಕುವ ಸ್ಥಿತಿಗತಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ಅಲೆಮಾರಿ ಅಭಿವೃದ್ದಿ ಜಂಟಿ ನಿರ್ದೇಶಕರಿಗೆ ಮತ್ತು ಕಳೆದ ವರ್ಷಗಳ ಹಿಂದೆ ಅಲೆಮಾರಿ ನಿಗಮ ಮಂಡಳಿ ಅದ್ಯಕ್ಷರು ಭೇಟಿ ನೀಡಿ ಅವರ ಸಮಸ್ಯೆಗಳಿಗೆ ಸ್ವಂದಿಸಿ ನಿವೇಶನ ಹಕ್ಕು ಪತ್ರ ವಿತರಣೆ ನೀಡುವಂತೆ ಸ್ಥಳಿಯ ಪಟ್ಟಣ ಪಂಚಾಯಿತಿಗೆ ಒತ್ತಡ ಹೇರಿ ಕ್ಷೇತ್ರದ ಶಾಸಕರು ಸ್ಥಳಿಯ ಆಡಳಿತ ಮಂಡಳಿ ಪಟ್ಟಣ ಪಂಚಾಯಿತಿ ಮೂಲಕ ಮೂಲಭೂತವಾಗಿ ಹಕ್ಕುಪತ್ರ ನೀಡಲು ಸಹಕಾರಿಯಾದ ಇವರನ್ನ ಸ್ಮರಿಸಬಹುದು. ಕಳೆದ ದಿನಗಳಲ್ಲಿ ಈ ಹಿಂದೆ ಅವರ ಜನ್ಮದಿನದ ಅಂಗವಾಗಿ ಗುಡಿಸಲು ಕಟ್ಟಿಕೊಂಡು ಜೀವಿಸುವಂತ ಅಲೆಮಾರಿಗಳಿಗೆ ಕುಟುಂಬದವರಿಗೆ ಪಾಟ್ ಕೊಡುವ ಮೂಲಕ ಜನ್ಮದಿನ ಆಚರಿಸಿಕೊಂಡ ಏಕೈಕ ವ್ಯಕ್ತಿ ಎಂದು ನಾವು ಹೇಳಲು ಹರ್ಷವಾಗುತ್ತಿದೆ.
ಒಟ್ಟಾರೆ ಸಮಾಜದಲ್ಲಿ ಶ್ರೀಮಂತ ವರ್ಗದ ಬಹುತೇಕರು ಹುಟ್ಟು ಹಬ್ಬವನ್ನ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಅವರ ಅವರ ಶೈಲಿಯಲ್ಲಿ ತಮ್ಮಗಳ ಹುಟ್ಟು ಹಬ್ಬವನ್ನ ಅತಿಯಾದ ವೈಭವಿಪೂರಿತವಾಗಿ ಆಚರಿಸಿಕೊಂಡು ದುಂದುವೆಚ್ಚ ಮಾಡಿ ಅದೆಷ್ಟು ಹಣವನ್ನ ವ್ಯಯಿಸುವ ಕಾಲಘಟ್ಟದಲ್ಲಿ ಇಲ್ಲೂಬ್ಬ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಪ್ರಸ್ತುತ ಜಗಳೂರು ಕಾಂಗ್ರೇಸ್ ಎಸ್ಸಿ ಘಟಕದ ತಾಲ್ಲೂಕು ಅದ್ಯಕ್ಷರಾದ ಬಿ.ಮಹೇಶ್ವರಪ್ಪರವರು ಶೋಷಿತ ಬಡ ವರ್ಗದ ಸಮುದಾಯಗಳ ನಡುವೆ ಜನ್ಮದಿನ ಆಚರಿಸಿಕೊಳ್ಳುವ ಬಡವರಿಗೆ ಹೃದಯ ಶ್ರೀಮಂತಿಕೆ ತೋರಿಸುವ ಸಂತೋಷಟ್ಟುಕೊಳ್ಳುವ ವ್ಯಕ್ತಿ ವ್ಯಕ್ತಿತ್ವ ಹೊಂದಿದ್ದಾರೆ ಎಂದರೆ ಅದ ಮಹೇಶಣ್ಣ ಎಂದರೆ ತಪ್ಪಾಗಲಾರದು ಈ ಬಾರಿಯು ಕೂಡ ಬಡವರ್ಗದ ಮದ್ಯ ಜನ್ಮ ಆಚಿರಿಸಿಕೊಳ್ಳಲಿದ್ದಾರೆ ಎಂಬುದು ನಮಗೆ ತಿಳಿದಿದೆ . ಅಷ್ಟೆ ಅಲ್ಲದೆ ಕಳೆದ ವರ್ಷಗಳ ಹಿಂದೆ ಬಂದಂತಹ ಮಹಾಮಾರಿ ಕೊವಿಡ್ ಸಂದರ್ಭದಲ್ಲಿ ಶ್ರೀಯತರು ಜೀವದ ಅಂಗು ತೊರೆದು ಯೋಧರಂತೆ ನೀಡಿದ ಸೇವೆಯನ್ನ ನಾವು ಸ್ಮರಿಸಬಹುದು.ಇವರು ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸವೆ ಇವರ ಸಂಪತ್ತು ಎನ್ನುವ ರೀತಿ ಸದಾ ಜನರ ನಡುವಿನ ಜನನಾಯಕನಂತೆ ಮಿಂಚುವ ನಕ್ಷತ್ರ ಸದಾ ಅಸನ್ಮಖಿಯಾಗಿರುತ್ತಾರೆ . .ಇವರು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೊಟ್ಟಮೊದಲಿಗೆ ಸಾಮಾನ್ಯ ನೌಕರನಾಗಿ ಕೆಲಸಕ್ಕೆ ಸೇರುವ ಮೂಲಕ ಕರ್ತವ್ಯವೆ ದೇವರೆಂದು ಪ್ರಮಾಣಿಕ ಸೇವಾ ಕಾರ್ಯವೇ ಇವರನ್ನ ಉನ್ನತ ಮಟ್ಟಕ್ಕೆ ಕೊಂಡುಯ್ಯತಾ ಬಂದಿದೆ .ನಿತ್ಯ ಮಾಡುವ ಕರ್ತವ್ಯದಲ್ಲಿ ದೇವರನ್ನ ಕಂಡಂತ ಜನ್ನ ಮೆಚ್ಚುಗೆಯ ಅಧಿಕಾರಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಕ್ಷೇತ್ರದಲ್ಲಿ ವಿವಿಧ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿ ಜನರ ಕಷ್ಠ ಸುಖಗಳಿಗೆ ಸಹಾಯಸ್ತ ಚಾಚುವ ಮೂಲಕ ತನ್ನದೆಯಾದ ಸೇವಾ ಕಾರ್ಯಕ್ಕೆ ಕೈಗನ್ನಡಿಯಾಗಿದೆ ಇನ್ನು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪರವರ ವೈಚಾರಿಕತೆ ಅವರ ಶಿಸ್ತು ಬದ್ದತೆ ಆಡಳಿತ ನಡೆಸುತ್ತಿರುವ ಜನಪ್ರಿಯ ಶಾಸಕರ ಒಡನಾಡಿಯಾಗಿ ಕಾಂಗ್ರೇಸ್ ಪಾಳಯದಲ್ಲಿ ಗುರುತಿಸಿಕೊಂಡು ಪಕ್ಷದಲ್ಲಿ ಕಾಂಗ್ರೇಸ್ ಎಸ್ ಸಿ ಘಟಕದ ತಾಲ್ಲೂಕು ಅಧ್ಯಕ್ಷರಾಗಿ ನಿರಂತರ ಕಾಂಗ್ರೇಸ್ ಪಕ್ಷದ ಕಟ್ಟಾಳು ನಿಷ್ಠವಂತ ಕಾರ್ಯಕರ್ತನಾಗಿ ಇದೀಗ ಮುಂಬರುವ ಜಿಪಂ ಚುನಾವಣೆಗೆ ಸ್ವರ್ಧಿಸಲಿದ್ದಾರೆ ಎಂಬುದು ಈಗಾಗಲೇ ಕ್ಷೇತ್ರದಲ್ಲಿ ಸುದ್ದಿಯಾಗಿಯಾಗಿದ್ದಾರೆ.
ಜಗಳೂರು ಕ್ಷೇತ್ರದಲ್ಲಿ ನಾಲ್ಕು ಜಿಪಂ ಕ್ಷೇತ್ರಗಳಲ್ಲಿ ಯಾವುದಾದರು ಎಸ್ ಸಿ ಮೀಸಲು ಕ್ಷೇತ್ರ ಬಂದರೆ ಜಿಪಂ ಪ್ರಬಲ ಕ್ಯಾಂಡೇಟ್ ಆಗುವುದು ಖಚಿತ ಎಂಬುದು ಅಭಿಮಾನಿ ಬಳಗದಿಂದ ತಿಳಿದು ಬಂದಿದೆ.
ಒಟ್ಟಾರೆ ಕ್ಷೇತ್ರದಲ್ಲಿ ಒಂದಲ್ಲ ಒಂದು ಸೇವಾ ಕಾರ್ಯದಲ್ಲಿ ತೊಡಗಿರುವ ಮಹೇಶ್ವರಪ್ಪರವರು ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸ ಎಲ್ಲಾ ಜಾತಿಯ ಬಡವರ ಏಳ್ಗಿಗೆ ಶ್ರಮಿಸುವಂತ ಜನನಾಯಕರು ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಿಸಿಕೊಂಡರೆ ಉತ್ತಮ ಸೇವೆ ಮಾಡುವ ಲೀಡರ್ ಎಂಬ ಆಶಾಭಾವನೆಯಿದೆ
ಇಂತಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ
