ಜಗಳೂರು ತಾಲ್ಲೂಕಿನ 22 ಗ್ರಾಪಂ ಗಳಲ್ಲಿ ಬಾಕಿಯಿರುವ ವಿದ್ಯುತ್ ಬಿಲ್ ಪಾವತಿಸುವಂತೆ ಪತ್ರ ಬರೆದರು ಕ್ಯಾರೆ ಎನ್ನದ ಪಿಡಿಓ ಅಧಿಕಾರಿಗಳು ಬೇಜವಾಬ್ದರಿ ತೋರಿದ್ದಾರೆ ಎಂದು ಜಗಳೂರು ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಜೆ.ಮಲ್ಲಿಕಾರ್ಜನ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಜಗಳೂರು ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ಸಹ ಮೂಲಭೂತ ಸೌಕರ್ಯಗಳಲ್ಲೊಂದಾದ ವಿದ್ಯುತ್ ಬಹಳ ಬಹುಮುಖ್ಯವಾಗಿದೆ ಆ ನಿಟ್ಟಿನಲ್ಲಿ ಸರ್ಕಾರಿ ಆದೇಶದಂತೆ ಪ್ರತಿ ಇಲಾಖೆಗೂ ಜನ ವಸತಿ ಪ್ರದೇಶಗಳಿಗೂ ವಿದ್ಯುತ್ ನೀಡುವುದು ನಮ್ಮ ಕರ್ತವ್ಯವಾಗಿದೆ. ಸಮರ್ಪಕ ವಿದ್ಯುತ್ ನೀಡುತಾ ಬಂದಿರುವ ನಮಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತು ಸಿಬ್ಬಂಧಿಗಳು ನಮಗೆ ಕಟ್ಟಬೇಕಾದ ಪಂಚಾಯಿತಿ ವಿದ್ಯುತ್ ಬಿಲ್ ನೀಡದೆ ನಿರ್ಲಕ್ಷ್ಯೆ ಮಾಡಿರುವುದು ನಮ್ಮ ಇಲಾಖೆ ನಷ್ಠವಾಗುತ್ತಿದೆ. ಬಿಲ್ ಕಟ್ಟದೆ ನಿರ್ವಹಣೆ ಮಾಡುವುದೇ ಕಷ್ಠವಾಗಿದೆ ಮೇಲಿನ ಅಧಿಕಾರಿಗಳು ಬಾಕಿರುವ ಬಿಲ್ ಕಟ್ಟಿಸುವಂತೆ ಒತ್ತಡದ ಆದೇಶವಿದೆ. ಇದೀಗ ಪ್ರಸ್ತುತದಲ್ಲಿ ಪ್ರತಿ 22 ಗ್ರಾಮ ಪಂಚಾಯಿತಿಗಳಲ್ಲಿ ಬಾಕಿಯಿರುವ
89 ಲಕ್ಷ ರೂಗಳ ವಿದ್ಯುತ್ ಬಿಲ್ ಬಾಕಿಯಾಗಿ ಉಳುದುಕೊಂಡಿದೆ ನಾನು ಪ್ರತಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಬಿಲ್ ಕಟ್ಟುವಂತೆ ಮನವಿ ಮಾಡಿಕೊಂಡು ಪತ್ರ ಬರೆದರು ಕ್ಯಾರೆ ಎನ್ನುತ್ತಿಲ್ಲ ಎಂದು ತಮ್ಮ ಇಂಗಿತವನ್ನ ಶುಕ್ರದೆಸೆ ನ್ಯೂಸ್ ಮಿಡಿಯಾ ಮೂಲಕ ತಮ್ಮ ಅಸಮಧಾನ ಹೊರಹೊಕಿದ್ದಾರೆ.
