ವಿಶೇಷ ಲೇಖನ
ಜನಸಾಗರದ ಮದ್ಯ ಜನ್ಮದಿನ ಆಚರಿಸಿಕೊಂಡ ಪ್ರಬುದ್ದ ರಾಜಕಾರಣಿ ಕೆ.ಪಿ ಪಾಲಯ್ಯ ಮುಂದಿನ ವಿಧಾನಸಬಾ ಚುನಾವಣೆಗೆ ಸ್ವರ್ಧಿಸುವ ವದಂತಿ
Editor by m.rajappa vyasagondanahalli
By shukradeshe news online portal news Kannada jagalure vishesha lekhan k.p palaya kpcc leader in karanataka.
ಕರ್ನಾಟಕದಲ್ಲಿ ಮುಂಬರುವ ೨೦೨೮ರ ವಿಧಾನಸಭಾ ಚುನಾವಣೆಗೆ (2028 ಕೆ.ಪಿ. ಪಾಲಯ್ಯ ಅವರು ಸ್ಪರ್ಧಿಸುವ ವದಂತಿಗಳು ಈಗಾಗಲೆ ಕ್ಷೇತ್ರದ ಸಾರ್ವಜನಿಕ ವಲಯದಲ್ಲಿ ಸುದ್ದಿಯಾಗುತ್ತಿದೆ. ಪ್ರಸ್ತುತ ಸ್ಪಷ್ಟ ರಾಜಕೀಯ ಬೆಳವಣಿಗೆಗಳು ನಾವು ಗಮನಿಸಿದರೆ ಈಗಾಗಲೆ ಅಬ್ಬರದ ಪ್ರಚಾರದ ಮೂಲಕ ಕೆಪಿಸಿಸಿ ಎಸ್.ಟಿ (ST) ಘಟಕದ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಜಿಪಂ ಸದಸ್ಯರಾದ ಕೆ.ಪಿ ಪಾಲಯ್ಯ ರವರ ಅಭಿಮಾನಿ ಬಳಗದ ವತಿಯಿಂದ ಇತ್ತಿಚಿಗೆ ಬಾರಿ ಜಸ್ತೋಮದೊಂದಿಗೆ ರೋಡ್ ಶೋ ಮೂಲಕ ಪಟ್ಟಣದ ಗುರುಭವನದಲ್ಲಿ ಅದ್ದೂರಿ ಜನ್ಮದಿನದ ಆಚರಣೆ ಒಂದು ರಾಜಕೀಯ ತಿರುವಿನ ಚರ್ಚೆಗೆ ಕಾರಣವಾಗಿದೆ.
ಈ ಒಂದು ಹುಟ್ಟು ಸಂಭ್ರಮಕ್ಕೆ ರಾಜ್ಯದಲ್ಲಿಯೇ ರಾಜಕೀಯ ಭವಿಷ್ಯ ನುಡಿಯುವ ಜಗಳೂರು ನೆಲದ ಮಣ್ಣಿನ ಮಗ ಅಸಗೋಡು ಜಯಸಿಂಹಣ್ಣರವರು ಮನಸ್ಸು ಮಾಡಿದರೆ ಜಯ ಸಿಗಲಿದೆ .ಜಗಳೂರು ಕ್ಷೇತ್ರದ ಎಂದರೆ ಅಸಗೋಡು ಜಯಸಿಂಹಣ್ಣ ಕಾಂಗ್ರೆಸ್ ಪಕ್ಷದಲ್ಲಿ ಒಂದು ಗಟ್ಟಿತನ ವ್ಯಕ್ತಿತ್ವದ ನಾಯಕ ರಾಜ್ಯದಲ್ಲಿ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ನಾಯಕರ ಕೃಪಾ ಅಶಿರ್ವಾದ ಇದ್ದರೆ ಪಾಲಣ್ಣರವರಿಗೆ ಮುಂಬರುವ ವಿಧಾನಸಭಾ ಟಿಕಿಟ್ ಸಿಗುವ ನಿರೀಕ್ಷೆಯಿದೆ ಎಂದು ಜಗಳೂರು ಕ್ಷೇತ್ರದ ಕೆಲ ಅಂಗಡಿ ಮುಗ್ಗಟುಗಳು ಸೇರಿದಂತೆ ಗ್ರಾಮಿಣ ಪ್ರದೇಶ ಜನರ ಬಾಯಿಯಲ್ಲಿ ಸುದ್ದಿಯಾಗುತ್ತಿದ್ದು ಪ್ರಚಲಿತವಾಗಿ ಚರ್ಚೆಯಾಗುತ್ತಿದೆ. ಒಬ್ಬ ಸಕ್ರಿಯ ರಾಜಕಾರಣಿ ಸದಾ ಜನರ ಮದ್ಯೆ ಇದ್ದು ಗ್ರಾಮೀಣ ಬಾಗದ ಪ್ರತಿ ಗ್ರಾಮಗಳಲ್ಲಿಯು ಸಹ ಒಡನಾಟ ಹೊಂದಿ ಹಬ್ಬ ಹರಿದಿನಗಳು ಮದುವೆ ಇನ್ನಿತರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರ ಕಷ್ಠ ಸುಖಗಳಲ್ಲಿ ಬಾಗಿಯಾಗುವ ವ್ಯಕ್ತಿತ್ವ ಹೊಂದಿರುವ ಕೆ.ಪಿ ಪಾಲಯ್ಯ ಒಬ್ಬ ವ್ಯಕ್ತಿಯಲ್ಲ ಕ್ಷೇತ್ರದಲ್ಲಿ ಅವರೊಬ್ಬ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯಾಗಿದ್ದಾರೆ .ಪಕ್ಷ ನಿಷ್ಠೆ ಪ್ರಮಾಣಿಕತೆ ಸುದೀರ್ಘ ಕಾಂಗ್ರೆಸ್ ಪಕ್ಷದಲ್ಲಿ ತನ್ನದೆಯಾದ ವರ್ಚಸ್ಸುನ್ನು ಗಳಿಸಿರುವುದಕ್ಕೆ ಕಳೆದ ವಿಧಾನಸಬಾ ಚುನಾವಣೆಗಳೆ ಸಾಕ್ಷಿಯಾಗಿವೆ.
ಶ್ರೀಯುತರು ಜಗಳೂರು ಕ್ಷೇತ್ರದಲ್ಲಿ ಮೊಟ್ಟಮೊದಲಿನದಾಗಿ ಸಾಮಾಜಿಕ ಸಂಘಟನೆ ಮೂಲಕ ಗುರುತಿಸಿಕೊಂಡು ನಿರಂತರ ಸೇವೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಕಟ್ಟಾಳು ರಾಜ್ಯ ನಾಯಕರ ವಿಶ್ವಾಸಿಯಾಗಿ ಈಗಾಗಲೇ ರಾಜ್ಯಾದ್ಯಂತ ಪ್ರತಿ ಕ್ಷೇತ್ರದಲ್ಲೂ ಗುರುತಿಸಿಕೊಂಡು ಇವರಿಗೆ ನೀಡಿದ ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾದ್ಯಕ್ಷರ ಸ್ಥಾನವನ್ನ ಸಮರ್ಥವಾಗಿ ಕಾರ್ಯಭಾರ ಕರ್ತವ್ಯದ ಮೂಲಕ ಉತ್ತಮ ಕೆಪಿಸಿಸಿ ಸಂಘಟನೆಗೆ ಶ್ರಮಿಸಿದ್ದಾರೆ. ಅದಲ್ಲದೆ
ರಾಜ್ಯ ನಾಯಕರು ಸಚಿವರಾದ ಸತೀಶ್ ಜಾರಕಿಹೊಳಿ ಸೆರಿದಂತೆ ಸಿ ಎಲ್ ಪಿ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ .ಕೆಪಿಸಿಸಿ ರಾಜ್ಯ ವಕ್ತಾರರು ಅಸಗೋಡು ಜಯಸಿಂಹರಂತ ರಾಜ್ಯ ನಾಯಕರುಗಳ ಅಶಿರ್ವಾದಿಂದ ಮುಂಬರುವ ವಿಧಾನಸಭಾ ಚುನಾವಣೆ ಟಿಕಿಟ್ ಲಭಿಸುವುದೆ ಎಂಬ ರಾಜಕೀಯ ಲೆಕ್ಕಾಚಾರ ಹಾಕುವ ಜನಸಾಮಾನ್ಯರು ಅವರ ಅಭಿಮಾನಿಗಳ ಪಡೆಸಾಲೆಯಲ್ಲಿ ಕೇಳಿ ಬರಲಿದೆ.
ಒಟ್ಟಾರೆ ಕೆ.ಪಿ ಪಾಲಯ್ಯ ಎಂದರೆ ಈಗಿನ ಎಲ್ಲಾ ರಾಜಕಾರಣಿಗಿಂತ ಸೀನಿಯರ್ ಲಿಡರ್ ಪಾಲಯ್ಯ ಅದರೆ ಅವರಿಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಟಿಕಿಟ್ ಸಿಗದ ಕಾರಣ ಪಕ್ಷ ನಿಷ್ಠೆಗೆ ಕೆಲಸ ಮಾಡುವ ಜನನಾಯಕ ಜನರ ಮದ್ಯೆ ಉತ್ತಮ ಬಾಂದವ್ಯದ ವ್ಯಕ್ತಿತ್ವ ಹೊಂದಿರುವ ಜನಸೇವಕನಿಗೆ ಸಿಗಲಿದಿಯಾ? ಮುಂಬರುವ ವಿದಾನಸಭಾ ಕ್ಷೇತ್ರದ ಕಾಂಗ್ರೇಸ್ ಟಿಕಿಟ್ ಎಂದು ಜನರು ಮಾತನಾಡುವ ವದಂತಿಗಳು ಹಬ್ಬಿವೆ..
ಸುಮಾರು 35 ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಂತ ವ್ಯಕ್ತಿತ್ವ ರಾಜಕಾರಣಿ ಕೆ.ಪಿ ಪಾಲಣ್ಣ ಎಂದರೆ ಎಲ್ಲಾ ಜಾತಿ ಜನಾಂಗಕ್ಕೆ ಅಚ್ಚುಮೆಚ್ಚಿನ ರಾಜಕಾರಣಿ ಸಾಮಾಜಿಕ ಕಳಕಳಿ ನಾಯಕ ಎಂದರೆ ತಪ್ಪಾಗಲಾರದು ಮುಂದಿನ 2028 ಚುನಾವಣೆ ಅಭ್ಯರ್ಥಿಯಾಗುವ ನಿರೀಕ್ಷೆ ಬಾರಿ ಜನಸ್ತೋಮದೊಂದಿಗೆ ಹುಟ್ಟು ಹಬ್ಬ ಅಚರಿಸಿಕೊಂಡಿರುವುದೆ ಗ್ರಾಸವಾದ ಚರ್ಚೆಗೆ ಜಾರಣವಾಗಿದೆ.
ಪ್ರತಿ ಗ್ರಾಮದಿಂದ ಸರ್ವಜನಾಂಗದವರು ನನ್ನ ಹುಟ್ಟು ಹಬ್ಬಕ್ಕೆ ಪಕ್ಷ ಬೇದ ಮರೆತು ಆಗಮಿಸಿದ ಎಲ್ಲಾರಿಗೂ ತಮಗೆ ಆರೋಗ್ಯ ಬಾಗ್ಯ ಮೊದಲು ಆ ದೇವರು ಕರುಣಿಸಲಿ ನಿಮ್ಮ ಅರೋಗ್ಯ ಉತ್ತಮವಾಗಿದ್ದರೆ ನಮಗೆ ಹಾರೈಸುವ ಅಬಿಮಾನಿ ದೇವರುಗಳೆ ನನಗೆ ಶ್ರೀರಕ್ಷೆ ನಾನು ಜಗಳೂರು ಕ್ಷೇತ್ರದಲ್ಲಿ ಎಲ್ಲಾ ಎಂ ಎಲ್ ಎ ಗೆ ದುಡಿದಿರುವೆ ನನಗೆ ಈ ಬಾರಿ ಸಹಕರಿಸಿ ಎಂಬ ಮಾತಿನ ಮೂಲಕ ತನ್ನ ಇಂಗಿತವನ್ನ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಮನದಾಳದ ಮಾತಿನ ಮೂಲಕ ಹೊರಹಾಕಿದ್ದಾರೆ ಕೆ.ಪಿ.ಪಾಲಯ್ಯ
ಇಂತಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಸಂಪಾದಕ ಶುಕ್ರದೆಸೆ ನ್ಯೂಸ್ ಮೀಡಿಯಾ
