ಇಂದು ಹೊಳಲ್ಕೆರೆಯಲ್ಲಿ ಎಸ್.ಐ.ಆರ್. ಕಾರ್ಯಾಗಾರ
ಹೊಳಲ್ಕೆರೆ: ಪಟ್ಟಣದ ಶಾದಿ ಮಹಲ್ ಆವರಣದಲ್ಲಿ ಜೂನ್ 24, ಬುಧವಾರ ಮಧ್ಯಾಹ್ನ 1 ಗಂಟೆಗೆ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್.) ಕುರಿತ ಮಹತ್ವದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಕಾರ್ಯಾಗಾರದಲ್ಲಿ ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಎಚ್. ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯಕ್, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಕೆ. ತಾಜ್ ಪೀರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಣ್ಣ ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.
ಚುನಾವಣಾ ದೃಷ್ಟಿಯಿಂದ ಈ ಕಾರ್ಯಾಗಾರವು ಅತ್ಯಂತ ಪ್ರಮುಖವಾಗಿರುವುದರಿಂದ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಎಲ್ಲಾ 299 ಮತಗಟ್ಟೆ ಏಜೆಂಟರು (ಬಿಎಲ್‌ಎ-2) ಕಡ್ಡಾಯವಾಗಿ ತಪ್ಪದೆ ಭಾಗವಹಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಟಿ. ಹನುಮಂತಪ್ಪ ಮತ್ತು ಪ್ರಕಾಶ್ ಎಂ. ಅಳಗವಾಡಿ ತಿಳಿಸಿದ್ದಾರೆ.
