Editor by m rajappa vyasagondanahalli
Shukradeshe news online portal news Kannada June 26_6_2026
ಜಗಳೂರು ತಾಲ್ಲೂಕಿನ ನಿಬಗೂರು ಗ್ರಾಮದಲ್ಲಿ ಸಂಭ್ರಮದಿಂದ ಸಡಗರದಿಂದ ಜರುಗಿದ ಮೊಹರಂ
ಜಗಳೂರು ತಾಲೂಕಿನ ನಿಬಗೂರು ಗ್ರಾಮದಲ್ಲಿ ಹಿಂದೂ ಮುಸ್ಲಿಂ ಗಳ ಭಾವೈಕ್ಯತೆ ಹಬ್ಬ ಮೊಹರಂ ಸಡಗರ ಸಂಭ್ರಮದಿಂದ ನಡೆಯಿತು. ಗ್ರಾಮಸ್ಥರು ಮರಗಳನ್ನು ಸಂಗ್ರಹಿಸಿ, ಮಸೀದಿಯ ಮುಂದಿನ ಅಳಾಯಿ ಕುಣಿಯಲ್ಲಿ ಜೋಡಿಸಿದರು. ರಾತ್ರಿ ಎಂಟೆ ಗಂಟೆ ಸುಮಾರಿಗೆ ಮುಂಜಾನೆಯಿಂದ ಒಂದೊತ್ತಿನ ಹರಕೆ ಹೊತ್ತ ಭಕ್ತರು ಪಾನಕವನ್ನು ಮೊಹರಂ ಗುಡಿಯ ಮುಂಭಾಗದ ಅಲಾಯಿ ಕುಣಿಗೆ ಸಮರ್ಪಿಸಿ ಹರಕೆ ತಿರಿಸಿದರು. ನಂತರ ಅಲಾಯಿ ಕುಣಿಯಲ್ಲಿ ಸಂಗ್ರಹಸಿದ್ದ ಕಟ್ಟಿಗೆಗೆ ಅಗ್ನಿ ಸ್ಪರ್ಶ ಮಾಡಿದರು. ರಾತ್ರಿಯೆಲ್ಲ ಕಟ್ಟಿಗೆ ದಹಿಸಿ ಮುಂಜಾನೆ ಮೂರರ ಸುಮಾರಿಗೆ ಕೆಂಡ ಸಿದ್ಧವಾಯಿತು.
ಮೊದಲಿಗೆ ದೇವರುಗಳನ್ನು ಹೊತ್ತ ಮುಸ್ಲಿಂ ಸಮುದಾಯದ ಪೂಜಾರಿಗಳು ದೇವಸ್ಥಾನದ ಆವರಣದಲ್ಲಿ ನೆರೆದ ಭಕ್ತ ಸಮೂಹಕ್ಕೆ ಹೇಳಿಕೆಗಳನ್ನು ನೀಡಿ ಆಶೀರ್ವಾದ ಮಾಡಿದರು. ಮುಂಜಾನೆ ಆರರಿಂದ ಗ್ರಾಮದ ಎಲ್ಲಾ ಬೀದಿಗಳಲ್ಲಿ ದೇವರು ಹೊತ್ತ ಯುವಕರು ಸಂಚರಿಸಿದರು. ಮನೆಯ ಅಂಗಳದಲ್ಲಿ ಬಂದ ದೇವರುಗಳನ್ನು ಜನ ಭಯ ಭಕ್ತಿ ಭಾವದಿಂದ ನಮಿಸಿ ಪೂಜಿಸಿದರು. ದೇವರನ್ನ ಹೊತ್ತವರು ಕೆಂಡ ಹಾಯ್ದು ಹರಕೆ ತೀರಿಸಿದರು. ಸಂಜೆಯಾಗುತ್ತಿದ್ದಂತೆ ಗ್ರಾಮದ ಯುವಕರು ಹಲಗೆ ತಪ್ಪಡೆಗಳನ್ನ ಹೊಡೆಯುತ್ತಾ, ಅಲಾಯಿ ಕುಣಿಯ ಸುತ್ತ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ದೇವರುಗಳನ್ನು ಹೊತ್ತ ಯುವಕರು ಜನರಿದ್ದಯೇ ಹೋಗಿ ಆಶೀರ್ವಾದಿಸಿದರು. ಕೊನೆಗೆ ಅಲಾಯಿ ಕುಣಿ ಮುಚ್ಚಿದ ಬಳಿಕ ದೇವರುಗಳನ್ನು ಮೂರು ಬಾರಿ ಪ್ರದಕ್ಷಿಣೆ ನಡೆಸಿ, ವಿಸರ್ಜಿಸಿದರು. ಇಲ್ಲಿಗೆ ಮೊಹರಂ ಹಬ್ಬ ಕೊನೆಗೊಂಡಿತು.
ತಾಲ್ಲೂಕಿನ ನಿಬಗೂರು ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಜರುಗಿದ ಮೊಹರಂ ಮಾಜಿ ಜಿಪಂ ಸದಸ್ಯರು ರಾಜ್ಯ ಕಾಂಗ್ರೆಸ್ ಮುಖಂಡ ಕೆಪಿ.ಪಾಲಯ್ಯ ಭಾಗಿಯಾಗಿದ್ದರು
