Editor by m rajappa vyasagondanahalli Shukradeshe news online portal news Kannada June 28_6_2026

ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಲಾಗದ್ದ ದಾವಣಗೆರೆ ಜಿಲ್ಲಾ ಸಮಿತಿ ಸಭೆಯನ್ನ ಪಟ್ಟಣದ ಜಾಮಿಯಾ ಶಾದಿ ಮಹಲ್ ನಲ್ಲಿ‌ ನಡೆದ ಸಭೆಯಲ್ಲಿ ಚರ್ಚಿಸಿ ನಡೆಸಲಾಯಿತು.


ಈ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ್ ರೆಡ್ಡಿ ಮಾತನಾಡಿದರು ಸರ್ಕಾರ ಈಗಾಗಲೇ ಕೋಳಿ ಸಾಕಾಣಿಕೆ ವೆಚ್ಚ 10 ರೂಪಾಯಿ ನಿಗದಿ ಮಾಡಿ ಅನುಮೋದನೆ ನೀಡಿದೆ ಇದನ್ನು ಜಾರಿ ಮಾಡಲು ಪಶು ಸಂಗೋಪನೆ ಇಲಾಖೆಯ ಆಯುಕ್ತರಿಗೆ ಜವಾಬ್ದಾರಿ ವಹಿಸಿದ್ದರು ಸಹ ಕಂಪನಿಯವರು ನೀಯಮವನ್ನ ಪಾಲನೆ ಮಾಡುತ್ತಿಲ್ಲ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕಿಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು .


ಕಂಪನಿಯವರು ಶೀಘ್ರವಾಗಿ ಸರ್ಕಾರದ ನಿರ್ಧಾರವನ್ನು ಪಾಲಿಸುವಂತೆ ಒತ್ತಾಯಿಸಿದರು ರೈತರಿಗೆ ಕನಿಷ್ಠ ರೂ.10 ನೀಡಬೇಕು ಮತ್ತು 2021 ರಿಂದ 24-05-2026 ಇಲ್ಲಿಯವರೆಗೆ ಸರ್ಕಾರದ ನಿರ್ಧಾರದಂತೆ ಆರು ರೂಪಾಯಿ 20 ಪೈಸೆ ಕನಿಷ್ಠ ನೀಡಬೇಕಾಗಿತ್ತು ಕಂಪನಿಗಳು ರೈತರನ್ನು ವಂಚನೆ ಮಾಡಿ ಕಡಿಮೆ ನೀಡಿರುವ ರೈತರಿಗೆ ಮರಳಿ ನೀಡಬೇಕೆಂದು ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.


ಸರ್ಕಾರದ ಆದೇಶವನ್ನ ಕಂಪನಿಗಳು ಸರಿಯಾದ ರೀತಿಯಲ್ಲಿ ನಡೆದುಕೊಳ್ಳದೆ ಇದ್ದರೆ ಕಂಪೆನಿಗಳು ಎಸಗುತ್ತಿರುವ ಅನ್ಯಾಯವನ್ನ

ಮೋಸವನ್ನ ಸರ್ಕಾರದ ಗಮನಕ್ಕೆ ತಂದು

ಕಂಪೆನಿಗಳ ವಿರುದ್ಧ ರಾಜ್ಯದಂತ ಹೋರಾಟ ಮಾಡ ಲಾಗುವುದು ಎಂದು ಎಚ್ಚರಿಕೆ ನೀಡಿದರು

ಹಾಗೂ ದಾವಣಗೆರೆ ಜಿಲ್ಲೆಯ 200 ಕ್ಕೂ ಹೆಚ್ಚು ರೈತರು ಸಭೆಯಲ್ಲಿ ಪಾಲ್ಗೊಂಡು ಕಂಪನಿಗಳು ರೈತರಿಗೂ ಯಾವ ರೀತಿ ಮೋಸ ಮಾಡುತ್ತಿದ್ದಾರೆ ಎಂದು ವಿವರವಾಗಿ ಚರ್ಚಿಸಲಾಯಿತು ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಮೊಹಮ್ಮದ್ ಸಾದಿಕುಲ್ಲ, ರಾಜ್ಯ ಸಹಕಾರದರ್ಶಿ ಸೈಯದ ನೂರ (ಸದ್ದಾಂ), ಉಪಾಧ್ಯಕ್ಷರುಗಳು ಪ್ರಕಾಶ್ ರೆಡ್ಡಿ, ಶ್ರೀನಿವಾಸ್ ನಾಯ್ಡು, ಮುಕುಂದ, ಧನ್ಯ ಕುಮಾರ್, ಲಕ್ಷ್ಮಿಕಾಂತ್, ಅಬ್ದುಲ್ ಅಜೀಜ್, ರಹಮತ್ ಉಲ್ಲಾ ಹಾಗೂ ವಿಜಯನಗರ ರಾಣೆಬೆನ್ನೂರು ಹರಿಹರ ಭರಮ್ಸಾಗರ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಎಲ್ಲಾ ರೈತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You missed

error: Content is protected !!