Editor by m rajappa vyasagondanahalli Shukradeshe news online portal news Kannada June 27_6_2026

ವಿಜಯನಗರ ಜಿಲ್ಲೆ ಕೂಡ್ಲಿಗಿ


ಬಯಲು ಸೀಮೆಯ ಶಿಕ್ಷಣ ಕಾಶಿ ಕಾನಾಮಡುಗು, ನಿವೃತ್ತ ಶಿಕ್ಷಕ ಮಾಧವರೆಡ್ಡಿ, ಕಾನಾಮಡುಗು ಗುರುವಂದನಾ ಕಾರ್ಯಕ್ರಮದಲ್ಲಿ ಹೇಳಿಕೆ.


ಕೂಡ್ಲಿಗಿ- ತಾಲ್ಲೂಕಿನ ಕಾನಾಮಡುಗು ಇಲ್ಲಿನ ಮಣ್ಣಿನ ಕಣ ಕಣದಲ್ಲಿ ಶಿಕ್ಷಣ ತುಂಬಿದೆ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಿನಲ್ಲಿರುವ ಕಾನಾಮಡುಗು ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಿವೃತ್ತ ಶಿಕ್ಷಕ ಮಾಧವ ರೆಡ್ಡಿ ಹೇಳಿದರು ಅವರು ಕಾನಾಹೊಸಹಳ್ಳಿ ಸಮೀಪದ ಕಾನಾಮಡುಗು ಶರಣಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ 2003-04 ನೇ ಬ್ಯಾಚ್ ನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನ ಹಾಗೂ ಸ್ನೇಹ ಸಮ್ಮಿನಲದಲ್ಲಿ ಮಾತನಾಡಿ ಕಾನಾಮಡುಗು ನಲ್ಲಿ ಇರುವ ಶರಣಬಸವೇಶ್ವರ ದಾಸೋಹ ಮಠದಲ್ಲಿ ಸೇವೆ ಸಲ್ಲಿಸಿ ಓದಿ‌ ಇಂದು ಅತ್ಯುನ್ನತ ಉದ್ಯೆಯಲ್ಲಿ ಸಾಕಷ್ಟು ಜನರಿದ್ದಾರೆ ಮೊದಲು ಶರಣಬಸವೇಶ್ವರ ಶಾಲೆ ಪ್ರಾರಂಭ ಮಾಡಿದಾಗ ಈಗಿರುವ ಯಾವುದೇ ಸವಲತ್ತುಗಳು ಇರಲಿಲ್ಲ, ಶಿಕ್ಷಕರಿಗೂ ಕಷ್ಟ ವಿದ್ಯಾರ್ಥಿಗಳಿಗೂ ಕಷ್ಟ ಅಂತಹ ಸಂಧರ್ಬದಲ್ಲಿ ಮಠದಲ್ಲಿ ಇದ್ದು ಶಾಲೆಗೆ ಬರುವವರೇ ಹೆಚ್ಚಿದ್ದರು ಅಂದಿನ ವಿದ್ಯಾರ್ಥಿಗಳಿಗೆ ಕಲಿಯುವ ಆಸಕ್ತಿ ಇತ್ತು ಇಂತಹ ಶಾಲೆಯಲ್ಲಿ ಮೂರು ದಶಕಗಳ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸಿದ ತೃಪ್ತಿ ಇದೆ ಎಂದರು,ನಂತರ ಪ್ರಾಸ್ತಾವಿಕವಾಗಿ ಹಳೆಯ ವಿದ್ಯಾರ್ಥಿ ಶೈಲಜ ಮಾತನಾಡಿದರು,

ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಶರಣಬಸವೇಶ್ವರ ದಾಸೋಹ ಮಠದ ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿ ಮಾತನಾಡಿದರು ನಮ್ಮ ಶಾಲೆಯಲ್ಲಿ ಅಬ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ .ಇಂತ ಗುರುವಂದನ ಕಾರ್ಯಕ್ರಮದ ಮೂಲಕ ಈಗಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಎಂದರು ಸಮಾಜದಲ್ಲಿ ಸಂಸ್ಕಾರಯುತ ಬದುಕು ಕಟ್ಟಿಕೊಳ್ಳುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಇಂತ ವಿದ್ಯಾಸಂಸ್ಥೆಗಳು ಸಾಕ್ಷಿಯಾಗಿವೆ .ಎಂದು ವಿಶ್ವಾಸ ವ್ಯಕ್ತಪಡಿಸಿದರು.

, ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರುಗಳಾದ ಚಂದ್ರಪ್ಪ, ಹನುಮಂತಪ್ಪ, ಬಸವರಾಜ್, ವಿರುಪಾಕ್ಷಪ್ಪ, ಹಾಗೂ ಮುಖ್ಯ ಶಿಕ್ಷಕ, ಬೊಮ್ಮಣ್ಣ, ಸಹ ಶಿಕ್ಷಕರುಗಳಾದ ಆನಂದ್, ಭದ್ರಪ್ಪ, ಶರತ್, ಸಂತೋಷ, ಮಂಜುನಾಥ, ಹಾಗೂ ಅನುಪಮ, ವಿರೇಂದ್ರ, ಶರಣಪ್ಪ, ಕಾನಾಮಡುಗು ಸಂತೋಷ,ದಿನೇಶ, ಸೇರಿದಂತೆ ಹಳೆಯ ವಿದ್ಯಾರ್ಥಿಗಳಾದ ಗುರುರಾಜ್, ಪ್ರವೀಣ್,ನವೀನ, ವಿನಾಯಬಾಬು,ಸಂತೋಷ, ಶಿವು ಪೂಜಾರ್,ಜಯಕುಮಾರ,ವಿರೇಶ್,ಶೈಲಜಾ,ಸುಜಾತ, ಓಬಳೇಶ, ಹನುಮಂತು ಸೇರಿದಂತೆ ಇತರರಿದ್ದರು, ಇಪ್ಪತ್ತು ವರ್ಷಗಳ ನಂತರ ರಾಜ್ಯದ ನಾನಾ ಕಡೆಗಳಿಂದ ಬಂದ ವಿದ್ಯಾರ್ಥಿಗಳು ಬೆಳಗ್ಗೆ ಯಿಂದ ಒಬ್ಬರಿಗೊಬ್ಬರು ಮಾತನಾಡಿಸಿ ಪೋಟೊ ಕಕ್ಕಿಸಿಕೊಂಡರು ನಂತರ ಕಾರ್ಯಕ್ರಮ ಮುಗಿದ ನಂತರ ಅವರ ಊರುಗಳಿಗೆ ತೆರಳಯವಾಗ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಹೊಗುವು ದೃಶ್ಯ ಕಂಡುಬಂತು.

ಕಾನಾಹೊಸಹಳ್ಳಿ ಸಮೀಪದ ಕಾನಾಮಡುಗು ಶರಣಬಸವೇಶ್ವರ ಪ್ರೌಢಶಾಲಾ2003-4 ರ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಪೋಟೊ ತೆಗೆಸಿಕೊಂಡು ಸಂಭ್ರಮಿಸಿದರು

ವರದಿ ಶರಣೇಶ್ ಸಜ್ಜನ್

Leave a Reply

Your email address will not be published. Required fields are marked *

You missed

error: Content is protected !!