Editor by m rajappa vyasagondanahalli
By shukradeshe news Kannada | online news portal |Kannada news online July 8_7_2026 8 Wednesdays
ಅಪ್ಪರ್ ಭದ್ರಾ ನೀರು ಜಗಳೂರಿಗೆ ಬರುವ ಸಾದ್ಯತೆಯಿಲ್ಲ ಎಂದು ಪತ್ರಿಕೆ ಹೇಳಿಕೆ ನೀಡಿರುವ ಜೆ.ಡಿ ಎಸ್ ಮುಖಂಡ ಕಲ್ಲೇರುದ್ರೆಶ್ ರವರ ಆಧಾರ ರಹಿತ ಹೇಳಿಕೆ ಸರಿಯಲ್ಲ ಟೀಕೆಗೆ ಶಾಸಕ ಬಿ.ದೇವೇಂದ್ರಪ್ಪ ತಿರುಗೇಟು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜೆ.ಡಿ ಎಸ್ ಪಕ್ಷದ ಮುಖಂಡರಾದ ಕೆ.ಬಿ ಕಲ್ಲೇರುದ್ರೇಶ್ ರವರು ನನ್ನ ರಾಜಕೀಯ ಗುರುಗಳು ಅವರ ಸಲಹೇಗಳು ನಮ್ಮ ಕ್ಷೇತ್ರದ ಅಭಿವೃದ್ದಿಗೆ ಪೂರಕವಾಗಿದ್ದರೆ ನಾನು ಸ್ವಾಗತಿಸುತ್ತೆನೆ ಆದರೆ ಅವರ ದಿಕ್ಕು ತಪ್ಪಿಸುವ ಹೇಳಿಕೆ ಟೀಕೆ ಟಿಪ್ಪಣಿಗಳಿಗೆ ನಾನು ಸಹಿಸುವುದಿಲ್ಲ .ಅಪ್ಪರ್ ಭದ್ರಾ ಯೋಜನೆಡಿಯಲ್ಲಿ ಜಗಳೂರು ಬಾಗಕ್ಕೆ ನೀರು ಬರುವ ಸಾದ್ಯತೆ ಕಡಿಮೆ ಎಂದು ಆಧಾರ ರಹಿತ ಪತ್ರಿಕೆ ಹೇಳಿಕೆ ನೀಡಿದ ನಿಮಗೆ ಯಾವ ನೈತಿಕತೆಯಿದೆ.
ತಾವುಗಳು ಕೆಂದ್ರ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿರುವ ನೀವು ಸರ್ವಪಕ್ಷ ನಿಯೋಗ ತೆರಳಿ ಭದ್ರಾಮೇಲ್ದಂಡೆ ಯೋಜನೆ ಬಾಕಿಯಿರುವ 5 ಸಾವಿರ ಕೋಟಿ ಅನುದಾನ ತರುವ ಪ್ರಯತ್ನ ಮಾಡಲಿ ಕ್ಷೇತ್ರದ ಅಭಿವೃದ್ದಿಗೆ ನನ್ನ ಮೂರು ವರ್ಷದ ಅವಧಿಯಲ್ಲಿ ಒಂದು ಬಾರಿಯಾದರು ತಾವುಗಳು ಚರ್ಚೆ ಮಾಡದೆ ದೀಡಿರನೆ ಪತ್ರಿಕೆ ಹೇಳಿಕೆ ನೀಡಿದ ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನೆಸಿದರು . ಮೊದಲು ನಿಮ್ಮ ಅಳಿಯ ರುದ್ರೇಶ್ ನಿಗೆ ತಾಲ್ಲೂಕು ಆರೋಗ್ಯ ಇಲಾಖೆಯಲ್ಲಿ ಸರಿಯಾದ ರೀತಿ ಕರ್ತವ್ಯ ಮಾಡಲು ತಿಳಿಸಿ ಸರ್ಕಾರಿ ಹುದ್ದೆಯಲ್ಲಿದ್ದು ರಾಜಕೀಯ ಮಾಡುವ ನಿಮಗೆ ಯಾವ ನೈತಿಕತೆಯಿದೆ .ನನ್ನ ಮಗ ಎಂ.ಡಿ ಕಿರ್ತಿಕುಮಾರ್ ಸರ್ಕಾರಿ ನೌಕರಿಗೆ ರಾಜಿನಾಮಿ ನೀಡಿ ರಾಜಕೀಯಕ್ಕೆ ಪಾದರ್ಪಣೆ ಮಾಡಿ ಮಾದರಿಯಾಗಿದ್ದಾರೆ ತಾವುಗಳು ರಾಜಕೀಯ ಮಾಡಬಹುದು ಎಂದಿದ್ದಾರೆ.
ತಾವುಗಳು ಅಪ್ಪರ್ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ಜಾರಿಗೆ ತರಲಾಗಿದೆ ಎಂದು ಪದೇ ಪದೇ ಹೇಳಿ ಬಿಂಬಿಸುವ ನಿಮಗೆ ತಾಲ್ಲೂಕಿನ ಬಗ್ಗೆ ಯಾಕೆ ಕಾಳಜಿಯಿಲ್ಲ?
ಕ್ಷೇತ್ರದ ಅಭಿವೃದ್ದಿ ವಿಚಾರಕ್ಕೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
ಅಪ್ಪರ್ ಭದ್ರಾ ಯೋಜನೆಗೆ ಕೇವಲ ರಾಜ್ಯ ಸರ್ಕಾರದ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು ಕಳೆದ ಬಿಜೆಪಿ ಸರ್ಕಾರದ ಶಾಸಕರು ರಾಷ್ಟ್ರೀಯ ಜಲನೀತಿಗೆ ಸೇರಿದೆ ಎಂದು ಪಟಾಕಿ ಸಿಡಿಸಿ ಸಂಭ್ರಮಿಸಿದರು ಕೆಂದ್ರದಿಂದ ನಯ ಪೈಸೆ ಬಿಡುಗಡೆ ಮಾಡಿಲ್ಲ
ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು ಜೆಡಿಎಸ್ ಪಕ್ಷದ ಹೆಚ್ ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ. ಜಗಳೂರಿನ ಹಿತದೃಷ್ಟಿಯಿಂದ ಸರ್ವಪಕ್ಷ ನಿಯೋಗ ತೆರಳಿ ಅನುದಾನ ಬಿಡುಗಡೆ ಮಾಡಲು ಒತ್ತಡ ತರುವ ಪ್ರಯತ್ನ ಮಾಡಲಿ ಎಂದು ಮಾರ್ಮಿಕವಾಗಿ ಹೇಳಿದರು.
ಜಗಳೂರು ತಾಲ್ಲೂಕಿಗೆ ಈ ಬಾರಿ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ :57 ಕೆರೆ ತುಂಬಿಸುವ ಯೋಜನೆ ವರವಾಗಿದೆ ಈಗಾಗಲೇ ಮಲೆನಾಡು ಬಾಗದಲ್ಲಿ ಮಳೆ ಪ್ರಾರಂಭವಾಗಿರುವುದರಿಂದ ಒಳ ಹರಿವು ಹೆಚ್ಚಾಗಿ ಭದ್ರಾ ನೀರು ಹರಿಹರದ ದಿಟೂರು ಜಾಕವೆಲ್ ಮೂಲಕ ತಾಲ್ಲೂಕಿನ 17 ಕೆರೆಗಳಿಗೆ ಭದ್ರಾ ನೀರು ಬಿಡಲಾಗಿದೆ .ರೈತರ ಬಿತ್ತನೆ ಕಾರ್ಯಕ್ಕೆ ಸರಿಯಾದ ರೀತಿ ಮಳೆ ಇಲ್ಲದೆ ಕೆರೆ ತುಂಬಿಸುವ ಯೋಜನೆಯಿಂದ ಸಾರ್ಥಕವಾಗಿದ್ದು ನಮ್ಮ ಕಳೆದ ಸರ್ಕಾರಗಳ ರಾಜ್ಯದ ಮೂರು ಮುಖ್ಯಮಂತ್ರಿಗಳ ಪ್ರಯತ್ನ ಮತ್ತು ಸಿರಿಗೆರೆ ಶ್ರೀಗಳ ಸಹಕಾರದಿಂದ ನೀರಿಲ್ಲದೆ ಬಸವಳಿದ ತಾಲ್ಲೂಕಿಗೆ ಗಂಗೆ ಹರಿದಿದ್ದಾಳೆ ಒಟ್ಟು 17 ಕೆರೆಗಳಿಗೆ ನೀರು ಹರಿಸಲಾಗಿದ್ದು ಉಳಿದ 57 ಕೆರೆ ಗಳಿಗೆ ಒಂದು ತಿಂಗಳೊಳಗೆ ನೀರು ಬಿಡುವ ಚಿಂತನೆಯಿದೆ. ನೀರಾವರಿ ಅಧಿಕಾರಿಗಳ ಮಾಹಿತಿ ನೀಡಿದಂತೆ ನಮ್ಮ ಭದ್ರಾ ನೀರು ಪ್ರಸ್ತುದಲ್ಲಿ 46 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ಜಗಳೂರಿನ 57 ಕೆರೆಗಳಿಗೆ ನೀರು ತುಂಬಿಸಲು ಕೇವಲ 3 ಸಾವಿರ ಕ್ಯೂಸೆಕ್ಸ್ ಮಾತ್ರ ಅವಶ್ಯವಾಗಿದೆ .ಶೀಘ್ರದಲ್ಲಿ 57 ಕೆರೆಗಳಿಗೂ ನೀರು ಬಿಡುವ ಮೂಲಕ ಈ ಬಾಗದಲ್ಲಿ ಮಳೆ ಕೊರತೆಯಿರುವ ಸಂದರ್ಭದಲ್ಲಿ ರೈತರ ಆಶಾಭಾವನೆಗೆ ತಕ್ಕ ವರವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು..
17 ಬಾರಿ ಬಜೆಟ್ ಮಂಡನೆ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಹಕಾರದಿಂದ ನನ್ನ ಮೂರು ವರ್ಷದ ಸರ್ಕಾರದ ಆಡಳಿತಾವಧಿಯಲ್ಲಿ ಕ್ಷೇತ್ರಕ್ಕೆ ಒಟ್ಟು 676.76 ಕೋ. ರೂಗಳ ಅನುದಾನ ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿದ್ದು ಈಗಾಗಲೇ ಕ್ಷೇತ್ರದಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳೆ ಸಾಕ್ಷಿಯಾಗಿವೆ.
ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ.
180 ಕೋ ರೂ ಗಳಲ್ಲಿ ತಾಲ್ಲೂಕಿನ ಗೌರಿಪುರದ ಬಳಿ 220 .ಕೆಇಬಿ.ಸಭ್ ಸ್ಟೇಷನ್ ಆರಂಭ .
ಬಿಳಿಚೋಡು ಗ್ರಾಮದ ಸೇತುವೆ ನಿರ್ಮಾಣ ಸೇರಿದಂತೆ ತಾಲ್ಲೂಕಿನಲ್ಲಿ ಕಾರ್ಮಿಕ ಮಕ್ಕಳಿಗೆ ವಸತಿ ಶಾಲೆ ಆರಂಭ 2.ಕೋಟಿ ಕ್ರಿಡಾಂಗಾಣ ಅಭಿವೃದ್ದಿ. ಬಗ್ಗೆನಹಳ್ಳಿ ಬಳಿ 14 ಕೊಟಿ ರೂಗಳಲ್ಲಿ ಅಲ್ಪಸಂಖ್ಯಾತ ಮುರಾರ್ಜಿ ಶಾಲೆ ಕಾಮಗಾರಿ ಮತ್ತು ಕ್ಷೇತ್ರದಲ್ಲಿ ನಡೆಯುವ ರಸ್ತೆಗಳ ಅಭಿವೃದ್ದಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಇನ್ನು ಕೆಲ ಕಾಮಗಾರಿಗಳು ಮುಗಿಯುವ ಅಂತಕ್ಕೆ ತಲುಪಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಕೆ.ಪಿ.ಸಿ.ಸಿ ಎಸ್ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್ , ಕೆ.ಪಿ.ಸಿ.ಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಮುಖಂಡರಾದ ಬಿ.ಮಹೇಶ್ವರಪ್ಪ, ತಿಪ್ಪೇಸ್ವಾಮಿಗೌಡ್ರು,ವಾಲಿಬಾಲ್ ತಿಮ್ಮಾರೆಡ್ಡಿ, ಮಾಳಮ್ಮನಹಳ್ಳಿ ವೆಂಕಟೇಶ್, ಹನುಮಂತಪ್ಪ, ಅಜಾಮುಲ್ಲಾ, ಕೆಳಗೋಟೆ ಆಹಮದ್ ಆಲಿ ಚಂದ್ರಪ್ಪ ಸೇರಿದಂತೆ ಉಪಸ್ಥಿತರಿದ್ದರು.
