ಶುಕ್ರದೆಸೆ ನ್ಯೂಸ್:-
ಶುಕ್ರದೆಸೆ ನ್ಯೂಸ್:-
ತಾಲ್ಲೂಕಿನ ದೋಣಿಹಳ್ಳಿ ಗ್ರಾಮದಲ್ಲಿ ನೂರಾರು ಮಹಿಳಾ ಮಣಿಗಳಿಂದ ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿ ಹೆಚ್ ಪಿ ರಾಜೇಶ್ ಗೆ ಆರಥಿ ಎತ್ತಿ ಅದ್ದೂರಿ ಸ್ವಾಗತ . ನಾಳೆ ಪಕ್ಷೇತರ ಅಭ್ಯರ್ಥಿ ರೋಡ್ ಶೋ ಗೆ ಎಷ್ಟು ಜನ ಸೇರುವ ನಿರೀಕ್ಷೆ ಗೊತ್ತ ?. ಜಗಳೂರು ವಿಧಾನಸಭಾ ಕ್ಷೇತ್ರದ ಸ್ವಾಭಿಮಾನಿ ತೆಂಗಿನ ಮರದ ಗುರುತಿನ ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಚುನಾವಣ ಪ್ರಚಾರ ಕೇವಲ ಒಂದೆ ದಿನ ಬಾಕಿಯಿರುವ ಸಮಯದಲ್ಲಿ ತಾಲ್ಲೂಕಿನ ದೋಣಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಮತ ಬೇಟೆಯಾಡಲು ಹರಸಾಹಸ ಪಡುತ್ತಿದ್ದಾರೆ. ಇನ್ನೆನು ಪ್ರಚಾರ ಸಮಯ ಕೇವಲ ಒಂದು ದಿನ ಬಾಕಿಯಿದೆ ಸೋಮವಾರ ಸಂಜೆ 6 ಕ್ಕೆ ಮುಕ್ತವಾಗುವ ಹೊತ್ತಿನಲ್ಲಿ ಸಮಯ ಮಿತಿ ಮಿರಿ ಹೋಗುವ ಹೊತ್ತಿನಲ್ಲಿ ಸಹ ಪ್ರಚಾರಕ್ಕೆ ಹೋಗದೆಯಿರುವ ಗ್ರಾಮಗಳಲ್ಲಿ ಭೇಟಿ ನೀಡಿ ನನ್ನ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ವರ್ಧಿಸಿರುವ ನನಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಎಂದು ಕಾಲಿಗೆ ಗಂಟೆ ಕಟ್ಟಿಕೊಂಡವರಂತೆ ಮತದಾರರ ಬಳಿ ತೆರಳಿ ಸರ್ಕಸ್ ಮಾಡುವ ಮೂಲಕ ಮತ ಯಾಚನೆಗೆ ಮುಂದಾಗಿದ್ದಾರೆ. ಕೊನೆ ಗಳಿಗೆಯಲ್ಲೂ ಸಹ ಮಿಂಚಿನ ಓಟದಂತೆ ಬಿರುಸಿನ ಪ್ರಚಾರದಲ್ಲಿ ತೋಡಗಿರುವುದು ಕಂಡು ಬಂದಿತು. ಬೆಳಿಗ್ಗೆ ಸೋಮವಾರ ದಿ 8 ರಂದು ಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿ ರಾಜೇಶ್ ಪರವಾಗಿ ಕ್ಷೇತ್ರದ ಆಪಾರ ಸ್ವಾಭಿಮಾನಿ ಅಭಿಮಾನಿಗಳು ಬಳಗದವರಿಂದ ಅನೇಕ ಜನಸ್ತೋಮದೊಂದಿಗೆ ರೋಡ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನದ ಅಬ್ಬರದ ಪ್ರಚಾರದ
ಜರುಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂದರ್ಭದಲ್ಲಿ ಪತ್ರಕರ್ತರಾದ ದೋಣಿಹಳ್ಳಿ ಗುರುಮೂರ್ತಿ.ಮಾಜಿ ಗ್ರಾಪಂ ಅಧ್ಯಕ್ಷ ಗುರುಮೂರ್ತಿ ಮಂಜುನಾಥ ಸೇರಿದಂತೆ ಹಾಜರಿದ್ದರು.