ಶಿವಮೊಗ್ಗ ವರದಿ ಇಂಪ್ಯಾಕ್ಟ್‌, ಜೈಲ್‌ ಸರ್ಕಲ್‌ನಲ್ಲಿ ಕಾಮಗಾರಿ ಶುರು, ಡಾ.ಅಂಬೇಡ್ಕರ್‌ ನಾಮಫಲಕ ಪುನರ್‌ ಸ್ಥಾಪನೆ

SHIMOGA : ಸ್ಮಾರ್ಟ್‌ ಸಿಟಿ (Smart City) ಯೋಜನೆಯ ಅಪೂರ್ಣ ಕಾಮಗಾರಿ, ಡಾ. ಅಂಬೇಡ್ಕರ್‌ ಅವರ ನಾಮಫಲಕವನ್ನು ಚರಂಡಿಗೆ ಹಾಕಿದ್ದ ಕುರಿತು ಶಿವಮೊಗ್ಗ ಲೈವ್.ಕಾಂ ಹಾಗೂ‌ ಶುಕ್ರದೆಸೆ ವೆಬ್ ಕಾಂ ನ್ಯೂಸ್ ವರದಿ ಬೆನ್ನಲ್ಲೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬೆಳಗ್ಗೆಯಿಂದಲೇ ಜೈಲ್‌ ವೃತ್ತದಲ್ಲಿ ಕಾಮಗಾರಿ ಆರಂಭವಾಗಿದೆ.

ಜೈಲ್‌ ಸರ್ಕಲ್‌ನ ಒಂದು ಬದಿಯಲ್ಲಿ ಸ್ಮಾರ್ಟ್‌ ಸಿಟಿ (Smart City) ಕಾಮಗಾರಿ ಅಪೂರ್ಣವಾಗಿತ್ತು. ಪೊಲೀಸ್‌ ಚೌಕಿ ನಿರ್ಮಿಸಿ ಅದರ ಪಕ್ಕದಲ್ಲಿ ರಸ್ತೆ ಮೇಲೆ ಜೆಲ್ಲಿ ಹಾಕಿ ಹಾಗೆ ಬಿಡಲಾಗಿತ್ತು. ಇದರಿಂದ ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸುತ್ತಿರುವ ಕುರಿತು ಶಿವಮೊಗ್ಗ ಲೈವ್.ಕಾಂ ಮೇ 16ರಂದು ಮಧ್ಯಾಹ್ನ ವರದಿ ಪ್ರಕಟಿಸಿತ್ತು.

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಇನ್ನು, ಇಲ್ಲಿ ಚರಂಡಿ ಕಾಮಗಾರಿಯು ಪೂರ್ಣವಾಗಿಲ್ಲ. ಡಾ. ಅಂಬೇಡ್ಕರ್‌ ವೃತ್ತದ ನಾಮಫಲಕವನ್ನೇ ಚರಂಡಿಗೆ ಸ್ಲ್ಯಾಬ್‌ ಮಾಡಲಾಗಿತ್ತು. ಈ ಕುರಿತು ಶಿವಮೊಗ್ಗ ಲೈವ್.ಕಾಂ ವರದಿಯಲ್ಲಿ ಪ್ರಸ್ತಾಪಿಸಿತ್ತು. ಹಾಗಾಗಿ ಸ್ಮಾರ್ಟ್‌ ಸಿಟಿ ಅಧಿಕಾರಿಗಳ ವಿರುದ್ಧ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ಇದನ್ನೂ ಓದಿ – ಜೈಲ್‌ ಸರ್ಕಲ್‌ನಲ್ಲಿ ಸ್ವಲ್ಪ ಯಾಮಾರಿದ್ರು ಬೈಕ್‌ ಸವಾರರಿಗೆ ಅಪಾಯ ಫಿಕ್ಸ್‌

ಕಾಮಗಾರಿ ಆರಂಭಿಸಿದ ಸ್ಮಾರ್ಟ್‌ ಸಿಟಿ

ವರದಿ ಬೆನ್ನಿಗೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಜೈಲ್‌ ವೃತ್ತಕ್ಕೆ ದೌಡಾಯಿಸಿದ್ದಾರೆ. ಕಾಮಗಾರಿ ಪುನಾರಂಭವಾಗಿದೆ. ಡಾ. ಅಂಬೇಡ್ಕರ್‌ ಅವರ ಹೆಸರಿನ ನಾಮಫಲಕವನ್ನು ಪುನರ್‌ ಸ್ಥಾಪಿಸಲಾಗಿದೆ. ರಸ್ತೆ ಬದಿಯಲ್ಲಿ ಅಪೂರ್ಣ ಕಾಮಗಾರಿಯನ್ನು ಮತ್ತೆ ಶುರು ಮಾಡಲಾಗಿದೆ.

ಕಿವುಡತನವೆ ಇದನ್ನೂ ಓದಿ – ಶಿವಮೊಗ್ಗದಲ್ಲಿ ಚರಂಡಿಗೆ ಸ್ಲ್ಯಾಬ್‌ ಬದಲು ಡಾ. ಅಂಬೇಡ್ಕರ್‌ ನಾಮಫಲಕದ ಹೊದಿಕೆ, ಕ್ರಮಕ್ಕೆ ಒತ್ತಾಯ ಮಾಡುತಿದ್ದಂತೆ ಕಾಮಗಾರಿ ಶುರುವು ಮಾಡಲಾಗಿದೆ ಎಂದು‌ ತಿಳಿದು ಬಂದಿದೆ.

Leave a Reply

Your email address will not be published. Required fields are marked *

You missed

error: Content is protected !!