ಶುಕ್ರದೆಸೆ ನ್ಯೂಸ್:- ಬೇಸಿಗೆ ರಜಾ ಮುಗಿಸಿ ಶಾಲೆ ಕಡೆಗೆ ಮುಖಮಾಡಿದ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ಗ್ರಾಮಸ್ಥರಿಂದ ಸಂಭ್ರಮದ ಸ್ವಾಗತ
ಬೇಸಿಗೆ ರಜೆಯ ದಿನಗಳನ್ನು ಖುಷಿಯಿಂದ ಕಳೆದು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ ಚಿಣ್ಣರಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದರು.
:
:- ಬೇಸಿಗೆ ರಜಾ ಮುಗಿಸಿ ಶಾಲೆ ಕಡೆಗೆ ಮುಖಮಾಡುವಂತೆ ಗ್ರಾಮದಲ್ಲಿ ಶಿಕ್ಷಕರಿಂದ ಜಾಗೃತಿ ದಾಖಲಾತಿ ಆಂದೋಲನ ಅಭಿಯಾನ ನಡೆಸಿ ಶಾಲಾ ಪ್ರಾರಂಭತ್ಸೋವ ಸಂಭ್ರಮದ ಸಡಗರದಿಂದ ಟೇಪ್ ಕತ್ತರಿಸಿ ಶಾಲೆ ಪ್ರಾರಂಭಿಸಲಾಯಿತು.
ಮಕ್ಕಳ ಬರುವಿಕೆಗಾಗಿ ಶೃಂಗಾರಗೊಂಡ ವ್ಯಾಸಗೊಂಡನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲಾ ಅಂಗಳದಲ್ಲೊಂದು ಸಂಭ್ರಮ ಶಾಲಾ ಮಕ್ಕಳು ಶೃಂಗಾರಗೊಂಡು ನಗು ನಗುತಾ ಶಾಲೆ ಕಡೆಗೆ ಮುಖ ಮಾಡಿ ಬಂದ ಮುದ್ದು ಬಾಲಕಿಯರು ಸ್ಯಾರಿ ಉಡುಗೆ ಧರಿಸಿ ನಮ್ಮ ನಡೆ ಶಾಲೆ ಕಡೆ ಎಂಬ ವಾಖ್ಯದೊಂದಿಗೆ ಶಾಲೆಯತ್ತ ತೆರಳಿದ ಮಕ್ಕಳು. ಇನ್ನು ಬಾಲಕರು ತಮ್ಮಗಳ ಸ್ವಂತದ ಪುಟ್ಟ ಪುಟ್ಟ ಸೈಕಲ್ ಗಳೊಂದಿಗೆ ಶೃಂಗಾರಗೊಂಡು ಜಾಗೃತಿ ಜಾಥದಲ್ಲಿ ಭಾಗವಹಿಸಿ ಮಕ್ಕಳುನ್ನು ಶಾಲೆಗೆ ಕರೆತರಲು ಸಾಥ ನೀಡಿದರೆ ಇನ್ನುಳಿದ ಶಾಲಾ ಮಕ್ಕಳು ಬ್ಯಾನರ್ ಹಿಡಿದು ಸಾಲಾಗಿ ಜಾಥದಲ್ಲಿ ಭಾಗವಹಿಸಿ ಗಮನ ಸೆಳೆದರು.
.
ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಚೌಡೇಶಿ. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಗ್ರಾಪಂ ಸದಸ್ಯ ನಾಗರಾಜ್. ಶುಕ್ರದೆಸೆ ಪತ್ರಿಕೆ ಸಂಪಾದಕ ವ್ಯಾಸಗೊಂಡನಹಳ್ಳಿ ರಾಜಪ್ಪ .ಸಹಶಿಕ್ಷಕಿ ನಾಗಮ್ಮ.ಮಂಜುನಾಥ ಗ್ರಾಮಸ್ಥರು ಸೇರಿದಂತೆ ಹಾಜರಿದ್ದರು.
Show quoted text