Shukradeshe news in kannada

ನಾನು ರೌಡಿ ಆಲ್ಲ ಚುನಾವಣೆಯಲ್ಲಿ ಅಪ ಪ್ರಚಾರ ಮಾಡಿ ಸೋಲಿಸಲು ಷಡ್ಯಂತ್ರ ಮಾಡಿದ್ದರು‌ ಆದರೆ ಕಾಂಗ್ರೆಸ್ ಬಂಜೆಯಲ್ಲ ಕಾಂಗ್ರೆಸ್ ತಾಯಿ‌ ಗರ್ಭದಲ್ಲಿ 51 ಸಾವಿರ ಮತಗಳಿಂದ ಜಯಗಳಿಸಿದ್ದೆನೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಎದುರಾಳಿಗಳಿಗೆ ಚಾಟಿ ಬೀಸಿದ್ದಾರೆ . ತಾಲ್ಲೂಕಿನ ಕೆಳಗೋಟೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೂತನವಾಗಿ ಆಯ್ಕೆಯಾದ ಶಾಸಕರಿಗೆ ಅಭಿನಂದನ ಕಾರ್ಯಕ್ರಮ ಏರ್ಪಡಿಸಲಾಗಿತ್ತು .ಕಾರ್ಯಕ್ರಮದಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಭಾಗವಹಿಸಿ ಗೌರವ ಆತಿಥ್ಯವನ್ನ ಸ್ವಿಕರಿಸಿ ನಂತರ ಕಾರ್ಯಕ್ರಮವನ್ನದ್ದೆಶಿಸಿ ಮಾತನಾಡಿದರು ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿಂದ ಸಂಪೂರ್ಣ ಬಹುಮತ ದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದು ನಾವು ಚುನಾವಣೆ ವೇಳೆಯಲ್ಲಿ ನೀಡಿದ ವಾಗ್ದನದಂತೆ ನುಡಿದಂತೆ ನಡೆಯುವುದು ನಿಶ್ಚಿತ .ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಕೊಂಡಿ ಕಳಚಿ ಬಿದ್ದಿದೆ. ಮುಂಬರುವ ದಿನಗಳಲ್ಲಿ ಮತ್ತೊಂದು ಇಂಜಿನ್ ಕಿತ್ತು ಎಸೆಯಲು ಜನರು ತಿರ್ಮಾನ ಮಾಡಲಿದ್ದಾರೆ. ಎಂದು ತೀಕ್ಷ್ಣವಾಗಿ ಭವಿಷ್ಯ ನುಡಿದರು. ಜೂನ್ 1 ರಂದು ಯಾವುದಾದರು ಶಾಲೆಯಲ್ಲಿ ಕಸ ಗುಡಿಸಿ ಗಂಟೆ ಬಾರಿಸಿ ನಂತರ ಶಾಸಕನಾಗಿ ಸೇವೆ ಆರಂಭಿಸುವೆ .
ಏಕೆಂದರೆ ನಾನು ಜವಾನನಾಗಿ ಸೇವೆ ಸಲ್ಲಿಸಿ ಇದೀಗ ಜನನಾಯಕನಾಗಿ ಆಯ್ಕೆಯಾಗಿರುವೆ. ಖಾಸಗಿ ವಿದ್ಯಾ ಮಂದಿರದಲ್ಲಿ ಜವಾನನಾಗಿ ಸುಮಾರು 33 ವರ್ಷಗಳ ಕಾಲ ಸೇವೆ ಮಾಡಿ ಕುಟುಂಬದ ನಿರ್ವಹಣೆಯ ಜೊತೆ ಜೊತೆಗೆ ಬದುಕು ಕಟ್ಟಿಕೊಂಡು ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಶಾಸಕನಾಗಿರುವೆ ನನ್ನ ಮೂಲ ವೃತ್ತಿ ಗೌರವದ ಸಂಕೇತವಾಗಿ ಜೂನ್ 1 ರಂದು ಶಾಲಾ ಕಾಲೇಜುಗಳು ಪ್ರಾರಂಭವಾಗುವ ಹಿನ್ನಲೆಯಲ್ಲಿ ಯಾವುದಾದರು ಶಾಲೆಯಲ್ಲಿ ಕಸಗೂಡಿಸಿ ಗಂಟೆ ಭಾರಿಸಿ ಕ್ಷೇತ್ರದ ಅಭಿವೃದ್ದಿ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುವೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಾವು ಮಾಡುವ ಕಾಯಕದ ಬಗ್ಗೆ ಕೀಳಿರಿಮೆ ಬೇಡ ಮೇಲು ಕೀಳು ಎಂಬ ಮನೋಭಾವಕ್ಕಿಂತ ಕಾಯಕ ನಿಷ್ಠೆ ಬಹುಮುಖ್ಯವಾಗಿದೆ. ನನ್ನ ಕರ್ತವ್ಯ ನಿಷ್ಠೆಯಿಂದ ನನ್ನ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ಕೋಡಿಸಿದರ ಫಲವಾಗಿ ಮಗ ಉನ್ನತ ಹುದ್ದೆ ಪಡೆದು ನಾನು ಶಾಸಕನಾಗಿರುವುದೇ ನಿಮ್ಮೆಲ್ಲರಿಗೆ ಸಾಕ್ಷಿಯಾಗಿದೆ.

ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧಿಕಾರವನ್ನು ಅನುಭವಿಸಿ ನಂತರ ಕಾಂಗ್ರೆಸ್ ಪಕ್ಷ ಬಂಜೆ ಎಂದು ತಿಳಿದು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಅವರು ಚುನಾವಣೆ ಪಕ್ಷೇತರರಾಗಿ ಸ್ವರ್ಧಿಸಿ ಪರಾಜಿತರಾಗಿ ಶೇ.90 ರಷ್ಟು ಕಾರ್ಯಕರ್ತರುನ್ನು ಬೀದಿಯಲ್ಲಿ ಬಿಟ್ಟು ಹೋದರು.ಕಾಂಗ್ರೆಸ್ ಮಡಿಲು ಸೇರಿದ ನನಗೆ ಕಾಂಗ್ರೆಸ್ ತಾಯಿ ಗರ್ಭದಲ್ಲಿರುವ 51000 ಮತಗಳಿಂದ ಕ್ಷೇತ್ರದ ಜನತೆಯ ಅಶಿರ್ವಾದಿಂದ ಶಾಸಕನಾಗಿ ಆಯ್ಕೆಯಾಗಿರುವೆ.

ನಾನು ರೌಡಿಯಲ್ಲ ಚುನಾವಣೆಯಲ್ಲಿ ಎದುರಾಳಿಗಳು ವಿರೋಧ ಪಕ್ಷದವರು ಅಪ ಪ್ರಚಾರ ಮಾಡಿ ಷಡ್ಯಂತ್ರ ಮಾಡಿದ್ದರು ಕೆಲವರು ಸುಖ ಸುಮ್ಮನೆ ರೌಡಿ ಎಂದು ಬಿಂಬಿಸಿದ್ದರು ಆದರೆ ನಾನೊಬ್ಬ ಅಹಿಂಸಾವಾದಿ ಎಲ್ಲರನ್ನು ವಿಶಾಲ ಹೃದಯದಿಂದ ಕಾಣುವೆ ಬಹುಜನರುನ್ನು ಸಹ ಪ್ರೀತಿಸುವೆ.ನಾನು ರೌಡಿಯಾದರೆ ಅದನ್ನು ಸಂಬಂಧಿಸಿದ ಇಲಾಖೆ ಪಟ್ಟ ಕಟ್ಟುವರು ಇವರು ಯಾರು ಎಂದು ವಾಗ್ದಾಳಿ ನಡೆಸಿದರು.

.ಕ್ಷೇತ್ರದಲ್ಲಿ ಮತಹಾಕಿದವರಿಗೆ ಮಾತ್ರವಲ್ಲ 193000 ಮತದಾರರಿಗೆ ನಾನು ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಗೊಳಿಸುವೆ ಧೈರ್ಯದಿಂದ ನನಗೆ ಸಹಕರಿಸಿ ಎಂದು ಮನವಿ ಮಾಡಿದರು.

“ಸಾರ್ವಜನಿಕರ ಅಹವಾಲು ಸ್ವೀಕರಿಸಲು ಪಟ್ಟಣದ ಹಳೆಯ ಪಟ್ಟಣ ಪಂಚಾಯಿತಿ ಕಛೇರಿಯನ್ನು ಜನಸಂಪರ್ಕ ಕೇಂದ್ರ ತೆರೆಯಲಾಗುವುದು.ಬಡ ವರ್ಗದ ಜನತೆಗೆ ಸಹಕಾರಿಯಾಗುವಂತೆ ಮುಕ್ತಿವಾಹನ,ಅಂಬ್ಯುಲೆನ್ಸ್ ಒದಗಿಸುವೆ ಎಂದು ತಿಳಿಸಿದರು

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತ ನಾಡಿ,ನಮ್ಮ ಪಕ್ಷದ ಆಡಳಿತಾವಧಿಯಲ್ಲಿ ತಾಲೂಕಿನಲ್ಲಿ ಅನೇಕ ಪ್ರಮುಖ ರಸ್ತೆಗಳ ನಿರ್ಮಾಣಕ್ಕೆ ನಾನು ಹೆಚ್ಚು ಒತ್ತಡ ತಂದಿರುವೆ. ಪುನಃ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಿದೆ.ಕಾರ್ಯ ಕರ್ತರು ಚಿಕ್ಕಪುಟ್ಟ ವೈಮನಸ್ಸುಗಳನ್ನು ತೊರೆದು ಕ್ಷೇತ್ರದಲ್ಲಿನ ಹಳ್ಳಿಗಳ ಸಮಗ್ರ ಅಭಿವೃದ್ದಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು

ಇದೇ ವೇಳೆ ಕೆಳಗೋಟೆ ಗ್ರಾಮದ ಗ್ರಾಮಸ್ಥರು ಪಟಾಕಿ ಸಿಡಿಸಿ ,ಕೇಕ್ ಕತ್ತರಿಸಿ ,ಶಾಸಕರನ್ನು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದರು.

ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ದೆವೇಂದ್ರಪ್ಪ ರವರಿಗೆ ಅತ್ಯಂತ ಬಹು ಮತಗಳನ್ನು ಚಲಾಯಿಸಿ ಗೆಲುವಿಗೆ ಸಾಕ್ಷಿಯಾಗಿ ರುವ ಕೆಳಗೋಟೆ ಗ್ರಾಮಸ್ಥರಿಗೆ ತುಂಬಾ ಹೃದಯ ಅಭಿನಂದನೆಗಳು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಸಿದ್ದತೆ ನಡೆಸಿದ್ದಾರೆ. ವಿರೋಧ ಪಕ್ಷಗಳ ಟೀಕೆಗಳಿಗೆ ಯಾರು ಕಿವಿಗೊಡಬೇಡಿ.ಲಿಖಿತ ಸಂವಿಧಾನದಡಿ ಯಲ್ಲಿ ಕಾಂಗ್ರೆಸ್ ಪಕ್ಷ ಬದ್ದವಾಗಿರುತ್ತದೆ.ಆಡಳಿತ ಪಕ್ಷದ ಬಗ್ಗೆ ಜನತೆಯ ವಿಶ್ವಾಸ ಮುಖ್ಯ ಸ್ವಷ್ಟನೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮದ್ ಆಲಿ ಪಲ್ಲಾಗಟ್ಟೆ ಶೇಖರಪ್ಪ,ಸಿ.ತಿಪ್ಪೇಸ್ವಾಮಿ,ಗ್ರಾ.ಪಂ ಮಾಜಿ ಅಧ್ಯಕ್ಷ ಗುರುಸ್ವಾಮಿ,ಪ.ಪಂ ಸದಸ್ಯರಾದ ರವಿಕುಮಾರ್,ಶಕೀಲ್ ಅಹ ಮ್ಮದ್,ಮುಖಂಡರಾದ ರುದ್ರೇಶ್,ನವೀನ್ ಕುಮಾರ್, ಅಜಯ್, ದಾದಪೀರ್,ತಿಪ್ಪೇಸ್ವಾಮಿ,ಕೃಷ್ಣಪ್ಪ,ಗೌಸ್ ಪೀರ್,ವಿಜಯ್ ,ಗುರುಸಿದ್ದನಗೌಡ,ವೀರಭದ್ರಪ್ಪ,ಶಫಿವುಲ್ಲಾ,ಅಹಮ್ಮದ್ ಅಲಿ, ಅಜಾಮುಲ್ಲಾ,ಗ್ರಾ.ಪಂ ಸದಸ್ಯರಾದ ಹರೀಶ್,ಮಂಜುನಾಥ್, ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!