.ಹಂಬಲಿ ನೀಡಿದ ವಿಧ್ಯಾ ಸಂಸ್ಥೆಯಲ್ಲಿ ಕಸಗೂಡಿಸಿ ಶಾಲೆ ಗಂಟೆ ಹೊಡೆದು ಕ್ಷೇತ್ರದ ಆಡಳಿತ ಪ್ರಾರಂಭಿಸಿರುವ ನೂತನ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೆಂದ್ರಪ್ಪ
ಶುಕ್ರದೆಸೆ ನ್ಯೂಸ್:-
ಜಗಳೂರು ಪಟ್ಟಣದ ನಾಲಂದ ವಿದ್ಯಾ ಸಂಸ್ಥೆಯಲ್ಲಿ ಈ ಹಿಂದೆ ಜವಾನನಾಗಿ ಕಳೆದ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿರುವ ದೇವೆಂದ್ರಪ್ಪ ರವರು ವಿಧಾನಸೌಧದಲ್ಲಿ ಶಾಸಕನಾಗಿ ಪ್ರಮಾಣ ವಚನ ಸ್ವಿಕರಿಸುವ ಸಂದರ್ಭದಲ್ಲಿ ಅವರು ಸಂಕಲ್ಪ ಮಾಡಿಕೊಂಡಂತೆ ಕರ್ತವ್ಯ ಸಲ್ಲಿಸಿದ ಕರ್ಮಭೂಮಿ ನಾಲಂದ ಕಾಲೇಜಿನಲ್ಲಿ ತಾವೆ ಪರಕೆ ಹಿಡಿದು ಕಸಗೂಡಿಸಿ ಗಂಟೆ ಹೊಡೆದು ಟೇಬಲ್ ಕುರ್ಚಿ ಸ್ವಚ ಮಾಡಿ ನಂತರ ಮತ ಕ್ಷೇತ್ರದ ಆಡಳಿತ ಪ್ರಾರಂಭಿಸುವ ಚಿಂತನೆಯಂತೆ ಇಂದು ಗುರುವಾರ ಬೆಳಿಗ್ಗೆ ಸ್ವತ ಶಾಸಕರೆ ಕಾಲೇಜಿನಲ್ಲಿ ಶಾಲಾ ಕಾಲೇಜು ಕೊಠಡಿಗಳುನ್ನು ಬಾಗಿಲು ತೆರೆದು ಕಸಗೂಡಿಸಿ ಗಂಟೆ ಹೊಡೆದು ಮತ ಕ್ಷೇತ್ರದ ಆಡಳಿತ ಪ್ರಾರಂಭಿಸಿದ್ದಾರೆ .
. . ನಂತರ ಕಾಲೇಜು ಆಡಳಿತ ಮಂಡಳಿ ವತಿಯಿಂದ
ಏರ್ಪಡಿಸಲಾಗಿದ್ದ ಅಭಿನಂದನ ಸಮಾರಂಭದಲ್ಲಿ ಆತಿಥ್ಯವನ್ನು ಸ್ವಿಕರಿಸಿ ಸಭೆಯನ್ನುದ್ದೆಶಿಸಿ ಮಾತನಾಡಿದರು ನನ್ನ ಮೂಲ ವೃತ್ತಿ ಕಸ ಹೊಡೆಯುವ ಜವಾನನ ಕೆಲಸ ಮಾಡಿದಂತೆ ಕ್ಷೇತ್ರದ ಕಸಗೂಡಿಸಿ ಉತ್ತಮ ಆಡಳಿತ ನಡೆಸುವ ಮೂಲಕ ತಾಲ್ಲೂಕು ಅಭಿವೃದ್ಧಿಗೆ ಒತ್ತು ನೀಡುವ ಸಂಕಲ್ಪದಂತೆ ಇದೀಗ ಕಾಲೇಜಿನಲ್ಲಿ ನಾನು ಸೇವೆ ಸಲ್ಲಿಸಿದ ಕರ್ಮಭೂಮಿ ಮಡಿಲಲ್ಲಿ ಕರ್ತವ್ಯವೆ ದೇವರೆಂದು ಪರಿಪಾಲಿಸಿ ನನಗೆ ಮಾರ್ಗದರ್ಶನ ನೀಡಿ ನನಗೆ ಬದುಕು ಮತ್ತು ಅನ್ನ ಹಾಗೂ ಅಕ್ಷರ ನೀಡಿರುವ ನನ್ನ ನೆಚ್ಚಿನ ಗುರುಗಳಾದ ಡಾ ತಿಪ್ಪೇಸ್ವಾಮಿಯವರೆ ನನಗೆ ಸ್ಪೂರ್ತಿಯಾಗಿದ್ದರು ಎಂದು ವಿದ್ಯಾಗುರುಗಳನ್ನು ನೆನೆದು ಶಾಸಕರು ಭಾವುಕರಾದರು.
ನಮ್ಮ ಕುಟುಂಬ ಮೂರು ತಲೆ ಮಾರಿನಿಂದ ತಿಪ್ಪೆಗುಂಡಿಯವರ ಮನೆತನಕ್ಕೆ ಅವಿನಾವಭಾವ ಸಂಬಂಧವಿದೆ.ವಿಧ್ಯಾಗುರುಗಳ ತೋಟದಲ್ಲಿ ನಮ್ಮ ತಂದೆ ತೋಟದ ಕೆಲಸಕ್ಕೆ ಹೋಗುವರು ನಾನು ಕೂಡ ವಿಧ್ಯಾರ್ಥಿಯಾಗಿದ್ದಾಗ ಅವರ ತೋಟಕ್ಕೆ ಕೂಲಿ ಕೆಲಸ ಮಾಡಿದ್ದೆನೆ ದೇವರು ಕಣ್ಣು ಬಿಟ್ಟರೆ ಸನ್ಮಾರ್ಗದ ದಾರಿ ಸಿಗಲಿದೆ ಎಂಬಂತೆ ವಿದ್ಯಾಗುರುಗಳು ಕಾಲೇಜಿನಲ್ಲಿ ಜವಾನ ಕೆಲಸಕ್ಕೆ ನನ್ನನ್ನು ಸೇರಿಸಿಕೊಂಡ ಪ್ರತಿಫಲದಿಂದ ನಾನು ಬದುಕು ರೂಪಿಸಿಕೊಂಡ ಹಿನ್ನಲೆಯಲ್ಲಿ ನನ್ನ ಮಕ್ಕಳು ಈ ವಿದ್ಯಾಸಂಸ್ಥೆಯಲ್ಲಿ ಉತ್ತಮ ವಿದ್ಯಾಬ್ಯಾಸ ಮಾಡುವ ಮೂಲಕ ಉನ್ನತ ಅಧಿಕಾರಿಯಾಗಿದ್ದಾರೆ. ನಾನು ಕೂಡ ಕ್ಷೇತ್ರದ ಮತದಾರರ ಅಶಿರ್ವಾದಿಂದ ಶಾಸಕನಾಗಿ ಆಯ್ಕೆಯಾಗಿದ್ದು ಆದರೆ ನನ್ನ ಹಿಂದಿನ ಪರಿಶ್ರಮ ಮರೆಯಲಾರೆ ..ನಾನು ಬಡ ವರ್ಗದಿಂದ ಬೆಳೆದವನು ತಾಲ್ಲೂಕಿನ ಬಡಜನರ ಬಗ್ಗೆ ಕಾಳಜಿಯಿದ್ದು ಸರ್ಕಾರದ ಯೋಜನೆಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಸೇವೆ ಮಾಡಲು ಬದ್ದವಾಗಿದ್ದೆನೆ.ಅಧಿಕಾರಿಗಳಿಗೆ ಚಾಟಿ ಬೀಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಒತ್ತು ನೀಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮರ ಭಾರತಿ ವಿದ್ಯಾ ಸಂಸ್ಥೆ ಗೌರವ ಕಾರ್ಯಧರ್ಶಿ ಮಧುಕುಮಾರ್ ಮಾತನಾಡಿ ನೂತನ ಶಾಸಕ ದೇವೆಂದ್ರಪ್ಪ ರವರು ಕೆಳ ವರ್ಗದ ಶೋಷಿತ ಜನಾಂಗದಲ್ಲಿ ಹುಟ್ಟಿದ ಇವರು ತಮ್ಮ ಜೀವನವನ್ನು ಕಟ್ಡಿಕೊಳ್ಳುವಲ್ಲಿ ಅವರ ಶ್ರಮವಿದೆ.ಅವರು ನಮ್ಮ ಕಾಲೇಜಿನಲ್ಲಿ ಜವಾನನಾಗಿದ್ದರು ಸಹ ನಮ್ಮ ತಂದೆಯವರಿಗೆ ಅಚ್ಚುಮೆಚ್ಚಿನ ಸ್ನೇಹ ಜೀವಿಯಾಗಿದ್ದರು ಈಗಿನ ಯುವ ವಿದ್ಯಾರ್ಥಿ ಸಮುದಾಯಕ್ಕೆ ಇವರೆ ಸ್ಪೂರ್ತಿ ಸೆಲೆಯಾಗಿದ್ದಾರೆ. ಶಾಸಕರು ಕ್ಷೇತ್ರದ ಪ್ರಮುಖ ಯೋಜನೆಗಳುನ್ನು ಸಮರ್ಪಕವಾಗಿ ಜಾರಿಗೋಳಿಸಿ ಜಗಳೂರು ಬರಪೀಡಿತ ಹಣೆಪಟ್ಟಿಯಿಂದ ಅಳಿಸುವಂತ ಸೇವೆ ನೀಡಲಿ ಎಂದು ಕಿವಿಮಾತು ಹೇಳಿದರು.
ನಿವೃತ್ತ ಉಪನ್ಯಾಸಕರಾದ ಸುಭಾ಼ಷ್ ಚಂದ್ರಬೋಸ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ನಾಲಂದ ಕಾಲೇಜು ವಿದ್ಯಾಸಂಸ್ಥೆ ಈ ನಾಡಿಗೆ ಕೇವಲ ಡಾಕ್ಟರ್ ಇಂಜಿನಿಯರ್ ಗಳುನ್ನು ಕೊಡುಗೆ ನೀಡಿರುವುದಲ್ಲದೆ ಉತ್ತಮ ಬುದ್ದಿಜೀವಿ ರಾಜಕೀಯ ಜನಪ್ರತಿನಿಧಿಗಳನ್ನಾಗಿ ಕೊಡುಗೆ ನೀಡಿರುವ ಸಾಕ್ಷಿಯೆ ಶಾಸಕ ದೇವೆಂದ್ರಪ್ಪ ಎಂದು ಬಣ್ಣಿಸಿ ಅವರ ಸೇವಾ ಅವಧಿಯಲ್ಲಿ ನೀಡಿರುವ ಸೇವೆಯನ್ನ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಸಂತೋಷಕುಮಾರ್. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಷಂಷೀರ್ ಆಹಮದ್. ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್. ಕಾಲೇಜು ಅಡಳಿತಧಿಕಾರಿ ಶ್ವೇತಾ. ಪ್ರಾಂಶುಪಾಲರಾದ ತಿಪ್ಪೇಸ್ವಾಮಿ. ನಿವೃತ್ತ ಪ್ರಾಂಶುಪಾಲ ಎಲ್ ಎಂ ಪ್ರಭಾಕರ್.ಇತಿಹಾಸ ಉಪಾನ್ಯಾಸಕ ರಾಜಣ್ಣ.ನಿವೃತ್ತ ಸಿಪಿಐ ಕೃಷ್ಣಮೂರ್ತಿ.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ..ಕಾಂಗ್ರೆಸ್ ಪಕ್ಷದ ಮುಖಂಡ ಪ್ರಕಾಶ್ ರೆಡ್ಡಿ.ಮುಖಂಡರಾದ ಕೆಚ್ಚೆನಹಳ್ಳಿ ಶಿವಣ್ಣ. ಸಣ್ಣಸೂರಜ್ಜ.ದಲಿತ ಮುಖಂಡ ಜಿ ಎಚ್ ಶಂಭುಲಿಂಗಪ್ಪ. ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಮಾಳಮ್ಮನಹಳ್ಳಿ ವೆಂಕಟೇಶ್. ಸಾಹಿತಿ ಎರ್ರಿಸ್ವಾಮಿ. ಪಪಂ ಸದಸ್ಯರಾದ ರಮೇಶ್ ರೆಡ್ಡಿ.ಶಕೀಲ್ ಆಹಮದ್.ಲುಖ್ಮಾನ್ ಖಾನ್ ಸೇರಿದಂತೆ ಮುಂತಾದವರು ಹಾಜರಿದ್ದರು