ಶಿಕ್ಷಕರು ಭವಿಷ್ಯ ರೂಪಿಸುವ ಶಿಲ್ಪಿಗಳು:ಶಾಸಕ ಬಿ.ದೆವೇಂದ್ರಪ್ಪ ಬಣ್ಣನೆ.

ಜಗಳೂರು ಸುದ್ದಿ:ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು ಎಂದು ಶಾಸಕ ಬಿ.ದೆವೇಂದ್ರಪ್ಪ ಬಣ್ಣಿಸಿದರು.

ಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ, ಪಠ್ಯ ಪುಸ್ತಕ ವಿತರಿಸಿ ನಂತರ ಮಾತನಾಡಿದರು.

ವಿದ್ಯಾಭ್ಯಾಸದ ಹಂತದಲ್ಲಿ ವಿದ್ಯಾರ್ಥಿಗಳು ಉತ್ತಮ ಅಭ್ಯಾಸಮಾಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು.ನಾನು ನನ್ನ ಮಕ್ಕಳು ಇದೇ ಸರಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿ ಐಎಎಸ್ ಅಧಿಕಾರಿ,ಬಿಎಸ್ ಸಿ ನರ್ಸಿಂಗ್,ನಾನೊಬ್ಬ ಶಾಸಕನಾಗಿರುವುದು ಸಾಕ್ಷಿಯಾಗಿದೆ ಎಂದರು.

ಶಿಕ್ಷಣಪಡೆಯಲು ಬಡತನಶಾಪವಲ್ಲ ಶ್ರದ್ದೆ ನಿಷ್ಠೆ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ.ಶಿಕ್ಷಣ ಪಡೆದವರ ಜೀವನ ಶೈಲಿ ಸಮಾಜದಲ್ಲಿ ಮಾದರಿಯಾಗಿರುತ್ತದೆ.
ಬಡತನದಲ್ಲಿ ಜನಿಸಿದ ನಾನು ಸಮವಸ್ತ್ರ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ,ಇಂದು ಘನ ಸರಕಾರ ಉಚಿತ ವಾಗಿ ಸೌಲಭ್ಯ ಕಲ್ಪಿಸಿದೆ ಸದುಪಯೋಗಪಡೆದುಕೊಳ್ಳಬೇಕು.ಪೋಷಕರು ಮಕ್ಕಳ ಶಿಕ್ಷಣಕ್ಕೆ ಒತ್ತುನೀಡಬೇಕು ಎಂದು ಕಿವಿಮಾತು ಹೇಳಿದರು.

ಸಂದರ್ಭದಲ್ಲಿ ಬಿಇಓ ಉಮಾದೇವಿ,ಉಪಪ್ರಾಂಶುಪಾಲ ಡಿಡಿ ಹಾಲಪ್ಪ,ಪ್ರಾಂಶುಪಾಲ ಜಗದೀಶ್,ಉಪನ್ಯಾಸಕ ಮಂಜುನಾಥ್ ರೆಡ್ಡಿ,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಕಲ್ಲೇಶ್ ರಾಜ್ ಪಟೇಲ್,ಪ್ರಕಾಶ್ ರೆಡ್ಡಿ,ಕೆಳಗೋಟೆ ಅಹಮ್ಮದ್ ಅಲಿ ,ತಿಪ್ಪೇಸ್ವಾಮಿ,ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!