ಶುಕ್ರದೆಸೆ ನ್ಯೂಸ್:-
ಹಳೆ ಪಪಂ ಇಲಾಖೆಯನ್ನೆ ನೂತನ ಶಾಸಕರ ಸಂಪರ್ಕ ಕಛೇರಿಯಾಗಿ ಇಂದು ಲೋಕಾರ್ಪಣೆ .ಇತಿಹಾಸವಿರುವ ಕಟ್ಟಡವನ್ನ ನಂದನವನವನ್ನಾಗಿ ಮಾಡಿ ಜನರ ಆವಾಲು ಸ್ವಿಕರಿಸಿ ಜನಸೇವೆಗೆ ಸಿದ್ದತೆ ಶಾಸಕ ಬಿ ದೇವೆಂದ್ರಪ್ಪ ಭರವಸೆ
ನೂತನ ಶಾಸಕರ ಕಛೇರಿಯನ್ನು ಶಾಸಕರು ಹಾಗೂ ಕೆಪಿಸಿಸಿ ಕಾರ್ಯಧರ್ಶಿ ಅಸಗೋಡು ಜಯ ಸಿಂಹ ಸೇರಿದಂತೆ ಪಕ್ಷದ ಗಣ್ಯರು ಟೇಪ್ ಕತ್ತರಿಸುವ ಮೂಲಕ ಕಛೇರಿಗೆ ಚಾಲನೆ ನೀಡಿದರು . ಈ ವೇಳೆ ಕಾಂಗ್ರೆಸ್ ಪಕ್ಷದ ಗಣ್ಯರು ಕಛೇರಿ ಉದ್ಗಾಟನೆಯಲ್ಲಿ ಭಾಗವಹಿಸಿ ಪೂಜಾ ಕೈಂಕಾರ್ಯದಲ್ಲಿ ತೊಡಗಿ ಶುಭಾ ಹಾರೈಸಿದರು.
ನಂತರ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು ಈ ಹಿಂದೆ ಕಳೆದ ಆಡಳಿತ ಅವಧಿಯಲ್ಲಿ ಈ ಕಟ್ಟಡವನ್ನ ಪಾಳು ಬಿಡಲಾಗಿತ್ತು ಇಲ್ಲಿ ಸಂಚಾರಿಸುವ ಜನರು ಮೂಗು ಮುಚ್ಚಿಕೊಂಡು ಒಡಾಡುತ್ತಿದ್ದರು ಇದನ್ನು ಕಂಡ ನಾವು ನಮ್ಮ ಶಾಸಕರ ಕಛೇರಿಗೆ ಉಪಯೋಗಿಸಿಕೊಂಡರೆ ಕ್ಷೇತ್ರದ ಮತದಾರರಿಗೆ ಹೃದಯ ಬಾಗದಲ್ಲಿ ಅತ್ತಿರವಾಗುವ ಹಿತದೃಷ್ಟಿಯಿಂದ ಸಂಪರ್ಕ ಕಛೇರಿ ತೆರೆಲು ತಿರ್ಮಾನ ಮಾಡಿದಂತೆ ಇದೀಗ ಕಚೇರಿ ಮದುವಣಗಿತ್ತೆಯಂತೆ ಸಜ್ಜುಗೊಂಡಿದೆ.
ಇಲ್ಲಿ ನಾವು ಸಿಬ್ಬಂಧಿಯನ್ನು ನೇಮಿಸಿ ಸಮಾಜದಲ್ಲಿರುವ ಆಶಕ್ತರ ಬಡವರು ನಮ್ಮ ಮನೆಗೆ ಬರಲು 30 ರೂಗಳ ಆಟೊ ಚಾರ್ಜ್ ಹೊರೆಯನ್ನ ತಪ್ಪಿಸಲು ಈ ಕಛೇರಿಯಿಂದಲೆ ಜನರ ಸಮಸ್ಯೆಗಳಿಗೆ ನಮ್ಮ ಕಛೇರಿಯಲ್ಲಿ ಬೇಟಿಯಾಬಹುದು .ಈ ಕಛೇರಿ ಸಾರ್ವಜನಿಕ ಸಂಪರಗಕಕ್ಕೆ ಹೃದಯ ಬಾಗದಲ್ಲಿ ಸೂಕ್ತವಾಗಿದೆ ಮುಂದಿನ ದಿನಗಳಲ್ಲಿ ಇದು ಮಿನಿ ವಿಧಾನಸೌದವಾಗಲಿದೆ.ಸರ್ಕಾರದ ಕೆಲಸ ದೇವರ ಕೆಲಸ ಎಂದು ವ್ಯಾಖ್ಯಾನ ಮೂಲಕ ಎಲ್ಲಾ ಸಮಾಜದ ಬಡವರು ಇಲ್ಲಿ ಸಂಪರ್ಕದ ಮೂಲಕ ಅಗತ್ಯ ಸೇವೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ನೂತನ ಕಛೇರಿಯಲ್ಲಿ ಬುದ್ದ ಬಸವ ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನಂತರ ಪಟ್ಟಣದ ಮುಖ್ಯರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ತೆರಳಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ನೂತನ ಶಾಸಕರು .ಹಾಗೂ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿದರು.ಈ ವೇಳೆ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ನೀಲಿ ಟವಲ್ ಹಾಕಿಕೊಂಡು ಶಾಸಕರುನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಅಸಗೋಡು ಜಯಸಿಂಹ. ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ. ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್.ಬ್ಲಾಕ್ ಅಧ್ಯಕ್ಷ ಷಂಷೀರ್ ಆಹಮದ್. ಅರಸಿಕೆರೆ ಬ್ಲಾಕ್ ಅಧ್ಯಕ್ಷ ಮಂಜಣ್ಣ.ಮಾಜಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪಿ ಎಸ್ ಸುರೇಶ್ ಗೌಡ್ರು.ವಾಲಿಬಾಲ್ ತಿಮ್ಮರೆಡ್ಡಿ.ಮುಖಂಡ ತಿಪ್ಪೇಸ್ವಾಮಿ. ದಲಿತ ಮುಖಂಡ ಜಿ ಎಚ್ ಶಂಭುಲಿಂಗಪ್ಪ. ಮುಖಂಡ ಪಲ್ಲಾಗಟ್ಟೆ ಶೇಖರಪ್ಪ.ಕಾಂಗ್ರೆಸ್ ಕಾರ್ಮಿಕ ಸಂಘದ ಮುಖಂಡ ರುದ್ರೇಶ್.ಸೇರಿದಂತೆ ಆಪಾರ ಕಾರ್ಯಕರ್ತರು ಹಾಜರಿದ್ದರು.