ಶುಕ್ರದೆಸೆ ನ್ಯೂಸ್:-

ನಮ್ಮ ಗೆಲುವಿಗೆ ಕಾರ್ಯಕರ್ತರ ಶ್ರಮ ಆಪಾರ ನಂಬಿದ ಪಕ್ಷದ ಕಾರ್ಯಕರ್ತರುನ್ನು ಕೈಬಿಡುವುದಿಲ್ಲ ಕ್ಷೇತ್ರದಲ್ಲಿ ಮತದಾರರಿಗೆ ಟ್ವೆಂಟಿ ಪೊರ್ ಇಂಟು
ಸೆವೆನ್‌ ಕರೆ ಮಾಡಿದರು ನಾನು ಸ್ವಂದಿಸಿ ಕೆಲಸ ಮಾಡವೆ ಶಾಸಕ ಬಿ ದೇವೆಂದ್ರಪ್ಪ ವಿಶ್ವಾಸ.

ಪಟ್ಟಣದಲ್ಲಿರುವ ತರಳಬಾಳು ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ. ಇಂದು ಏರ್ಪಡಿಸಲಾಗಿದ್ದ ನೂತನ ಶಾಸಕರಿಗೆ ಅಭಿನಂದನೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಭವ್ಯ ಸಮಾರಂಭದಲ್ಲಿ ಶಾಸಕರು‌ ಅಭಿನಂದನೆ ಸ್ವಿಕರಿಸಿ ಮಾತನಾಡಿದರು. 2018 ಸಾಲಿನಲ್ಲಿ ತಾಲ್ಲೂಕಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸಿದ ಸವಿ ನೆನಪಿನಗಾಗಿ ಈ ಬಾಗದ ರೈತರ ಬದುಕು ಅಸನಾಗಲು ಸಿರಿಗೆರೆ ಶ್ರೀಗಳು 57 ಕೆರೆ ತುಂಬಿಸುವ ಯೋಜನೆ ಜಾರಿಗೆ ತರಲು ನಮ್ಮ ಪಕ್ಷದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆ ಯೋಜನೆಗೆ ಚಾಲನೆ ನೀಡಿದರು.ಮಹತ್ವದ ಯೋಜನೆಗಳಿಗೆ ಚುರುಕು ಮುಟ್ಟಿಸಿ ಕ್ಷೇತ್ರದಲ್ಲಿ ಶಿಕ್ಷಣ .ಆರೋಗ್ಯ. ಕುಡಿಯುವ ನೀರು ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ .ತಿಂಗಳಿಗೊಂದು ಅಧ್ಯಾತ್ಮಿಕ ಸಭೆ ನಡೆಸುವ ಮೂಲಕ ಬುದ್ದ ಬಸವ ಅಂಬೇಡ್ಕರ್ ರಂತ ಮಹನೀಯರ ಆದರ್ಶಗಳನ್ನು ಪರಿಪಾಲಿಸಿ ಕ್ಷೇತ್ರವನ್ನ ಶಾಂತಿಯ ನೆಲೆಯನ್ನಾಗಿ ಮಾಡುವ ಚಿಂತನೆಯಿದೆ. ಕ್ಷೇತ್ರದಲ್ಲಿ ಈ‌ ಹಿಂದೆ ಮೈಸೂರು ಅರಸರ ಆಳ್ವಿಕೆಯಲ್ಲಿ ಮಂತ್ರಿಯಾಗಿ ಆಡಳಿತ ನಡೆಸಿರುವ ಇಮಾಮ್ ಸಾಹೇಬ್ ರು ಮತ್ತು ಬಿಮಪ್ಪನಾಯಕರು .ಜಿ ಎಚ್ ಅಶ್ವತ್ಥ ರೆಡ್ಡಿ ಚನ್ನಯ್ಯ ಒಡೆಯರಂತ ಮುತ್ಸದಿ ಮಾಣಿಕ್ಯಗಳು ಇಲ್ಲಿ ಆಡಳಿತ ನಡೆಸಿರುವ ಪುಣ್ಯದ ನೆಲದಲ್ಲಿ ನಾನು 51 ಸಾವಿರ ಮತಗಳಿಂದ ಮತದಾರರ ಅಶಿರ್ವಾದಿಂದ ನಾನು ಶಾಸಕನಾಗಿ ಕಳೆದ ದಿ ಮೆ 13 ರಂದು ಕಾರ್ಯಕರ್ತರ ಆಶಿರ್ವಾದ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿರುವಾಗ ಈ ಸಭೆಯಲ್ಲಿ ನನಗೆ ಏಕೆ ಅಭಿನಂದನೆ ನೀವುಗಳು ಮತ ಹಾಕಿರುವ ಅಶಿರ್ವಾದವೆ ನನಗೆ ಮಹಾ ಅಭಿನಂದನೆ ಎಂದು ಕಾರ್ಯಕರ್ತರುನ್ನು ಉದ್ದೇಶಿಸಿ ಅಭಿಮಾನಪೂರ್ವಕವಾಗಿ ಉರಿದುಂಬಿಸಿದರು.

ಈ ಹಿಂದೆ ಪಕ್ಷದಲ್ಲಿದ್ದು ಅಧಿಕಾರ ಅನುಭವಿಸಿ ಪಕ್ಷ ಬಿಟ್ಟು ಹೋಗಿ ಪಕ್ಷಕ್ಕೆ ಮಹಾ ದ್ರೋಹ ವೇಸಗಿದ್ದಾರೆ.ಈಗ ಪುನ ಪಕ್ಷಕ್ಕೆ ಸೇರಲು ಹೊಂಚು ಹಾಕುವವರಿಗೆ ನಾನು ಪ್ರಶ್ನೆ ಮಾಡುತ್ತೆನೆ ಪಕ್ಷ ಬಿಟ್ಟು ಯಾಕೆ ಹೋಗಿದ್ರಿ? ಹೋಗುವುದು ನಿಮ್ಮಚ್ಚೆಯಾಗಿರಬಹುದು ಆದರೆ ಬರುವುದು ನಿಮ್ಮೆಚ್ಚೆಯಲ್ಲ ಕಾಂಗ್ರೆಸ್ ತನ್ನದೆಯಾದ ಸೈದ್ದಾಂತಿಕ ನೆಲೆಗಟ್ಟಿನ ಪಕ್ಷವಾಗಿದೆ. ಕಷ್ಟ ಕಾಲದಲ್ಲಿ ಕೈ ಹಿಡಿದು ನಡೆಸಿದವರು ನನ್ನ ಬೆನ್ನಿಗೆ ನಿಂತರು ನನ್ನ ಗೆಲುವಿಗೆ ಶ್ರಮಿಸಿದವರು ನಮ್ಮ ಆಪಾರ ಕಾರ್ಯಕರ್ತರ ಬಳಗವೆ ಇದೆ. ಆದರೆ ಕೊಲಾಂಬಗಳಂತೆ ಬರುವವರ ಬಗ್ಗೆ ಎಚ್ಚರ ವಹಿಸುವೆ ಎಂದು ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಈಗಾಗಲೇ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದ ಕೊಂಡಿ ಕಳಿಚಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಬಿಜೆಪಿ ಪಥನವಾಗಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟರು.

ಕೆಪಿಸಿಸಿ ಕಾರ್ಯಧರ್ಶಿ ಅಸಗೋಡು ಜಯಸಿಂಹ‌ ಮಾತನಾಡಿ ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಧರ್ಮ ಯುದ್ದದಲ್ಲಿ ಜಯಗಳಿಸಿದೆ ಅಧರ್ಮ ಅಳಿಸಿ ಶಾಸಕ ಚಿಕ್ಕಮ್ಮನಹಟ್ಟಿ ದೇವೆಂದ್ರಪ್ಪ ರವರ ಗೆಲುವಿನಿಂದ ಕ್ಷೇತ್ರ ಶಾಂತಿ ನೆಲೆಯಾಗಿದೆ.ಕ್ಷೇತ್ರದಲ್ಲಿ ನಾನು ನಾನು ಎನ್ನುವವರುನ್ನು ಮತದಾರರು ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಬಡ ಜನರಿಗೆ ಅತ್ಯಂತ ಸಹಕಾರಿಯಾಗಿವೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ರಾಜ್ಯ ನಾಯಕರಲ್ಲ ಅವರು ರಾಷ್ಟ್ರ ನಾಯಕರು ಮೋದಿಗೆ ಸವಾಲು ಹಾಕುವ ಏಕೈಕ ನಾಯಕ ಈ ರಾಜ್ಯದಲ್ಲಿ ಜನಿಸಿರುವುದೆ ಪುಣ್ಯ . 13 ಬಜೆಟ್ ಮಾಡಿರುವ ಸಿದ್ದರಾಮಯ್ಯಗೆ ಈ ಗ್ಯಾರಂಟಿ ಯಾವ ಲೆಕ್ಕ ಸಮರ್ಪಕವಾಗಿ 5 ಗ್ಯಾರಂಟಿ ಯೋಜನೆಗಳುನ್ನು ಜನರ ಮನೆ ಬಾಗಿಲಿಗೆ ತಲುಪಿಸುವರು .ಕಾಂಗ್ರೆಸ್ ಸರ್ವಜನಾಂಗದ ಪಕ್ಷವಾಗಿದ್ದು ಇಲ್ಲಿ ಮೇಲು ಕೀಳು ಭಾವನೆಯಿಲ್ಲ ಸಂವಿಧಾನ ರಾಷ್ಟ್ರದಲ್ಲಿ ನಾವೆಲ್ಲರು ಒಂದೆ ಎಂದರು.
ಕ್ಷೇತ್ರದಲ್ಲಿ ಕೆಪಿ ಪಾಲಯ್ಯ ಪಕ್ಷ ಸಿದ್ದಾಂತಕ್ಕೆ ಕೆಲಸ ಮಾಡಿ ಅತಿ ಹೆಚ್ಚು ಕಾರ್ಯಕರ್ತರ ಜನಸಾಮಾನ್ಯರ ಪ್ರಿತಿ ವಿಶ್ವಾಸ ಗಳಿಸಿದ್ದಾರೆ ರಾಜ್ಯದಲ್ಲಿ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜೋಡುತ್ತಿನಂತೆ ಜಗಳೂರು ಕ್ಷೇತ್ರದಲ್ಲಿ ಸಹ ಶಾಸಕ ದೇವೆಂದ್ರಪ್ಪ ಕೆಪಿ ಪಾಲಯ್ಯ ಜೋಡುತ್ತುಗಳು ಅವರ ಸಾರಥ್ಯದಲ್ಲಿ ಜಗಳೂರು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ತಿಳಿಸಿದ ಅವರು ಪಾಲಯ್ಯಗೆ ಸಿದ್ದರಾಮಯ್ಯರವರು ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ ಗೆ ಆಯ್ಕೆ ಮಾಡುವ ಸಂಭವವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತನಾಡಿ ನಮ್ಮ ಮುಂದೆ ಸಾಕಷ್ಟು ಸವಾಲುಗಳಿವೆ ಸಮಯ ಪ್ರಜ್ಞೆ ಅರಿತು ಸಮರ್ಥವಾಗಿ ಕ್ಷೇತ್ರದ ಮತದಾರರಿಗೆ ಅಗತ್ಯ ಸೇವೆ ನೀಡಲು ನಾವು ಸಜ್ಜಾಗಬೇಕಾಗಿದೆ‌.ಈ ಹಿಂದೆ ಇದ್ದಂತ ಪಕ್ಷದ ಪ್ರಮುಖರಾದ ಹೆಚ್ ಪಿ ರಾಜೇಶ್ ರವರು ಅಧಿಕಾರ ಲಾಲಸೆ ಪಡೆದು ಪಕ್ಷ ಬಿಟ್ಟು ಹೋದರು ಚುನಾವಣೆಯಲ್ಲಿ ನಮ್ಮ ಸೋಲು ಬಯಿಸಿ ಕೆಲವರು ಹಾಸ್ಯಾಸ್ಪದ ‌ಮಾಡಿದ್ದರು ಜೋಡೆತ್ತುಗಳು ಗೆಲುವು ಸಾದ್ಯವಿಲ್ಲ ಎಂದು ಬೀದಿಯಲ್ಲಿ ಮಾತಾಡಿದ ಜನತೆಗೆ ಇದೀಗ ಕಾಂಗ್ರೆಸ್ ಗೆದ್ದು ಉತ್ತರವಾಗಿದೆ.ನಮ್ಮ ಪಕ್ಷದ ಕಾರ್ಯಕರ್ತರು ಶಾಸಕರುನ್ನು ಬಳಕೆ ಮಾಡಿಕೊಂಡು ತಮ್ಮ ಗ್ರಾಮಗಳಿಗೆ ಅಭಿವೃದ್ಧಿ ಕೆಲಸ ಮಾಡುವಂತೆ ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಇದೆ ಸಂದರ್ಭದಲ್ಲಿ ನೂತನ ಶಾಸಕರಿಗೆ ಸಂವಿಧಾನ ಪೀಠಿಕೆಯುಳ್ಳ ವಸ್ತುವನ್ನ ಕೊಡುಗೆಯಾಗಿ ನೀಡಿ ಕಾರ್ಯಕರ್ತರು ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಉದಯಶಂಕರ್ ಒಡೆಯರ್. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಷಂಷೀರ್ ಆಹಮದ್ .ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್. ಅರೆಸಿಕೆರೆ ಬ್ಲಾಕ್ ಅದ್ಯಕ್ಷ ಕಂಬತ್ತಹಳ್ಳಿ ಮಂಜಣ್ಣ. ಮುಖಂಡರಾದ ವಾಲಿಬಾಲ್ ತಿಮ್ಮರೆಡ್ಡಿ.ಮುಖಂಡರಾದ ಜಯದೇವನಾಯ್ಕ್.ಕಾಂಗ್ರೆಸ್ ಜಿಲ್ಲಾ ಕಾರ್ಯಧರ್ಶಿ ಪಲ್ಲಾಗಟ್ಟೆ ಶೇಖರಪ್ಪ. ದಲಿತ ಮುಖಂಡ ಜಿ ಎಚ್ ಶಂಭುಲಿಂಗಪ್ಪ. ಮುಖಂಡರಾದ ಹೊಮಣ್ಣ.ಸಣ್ಣಸೂರಜ್ಜ. ತಿಪ್ಪೇಸ್ವಾಮಿ.ಅರಸಿಕೆರೆ ಬಾಗದ ಎರೆಬಳ್ಳಿ ಉಮಾಪತಿ .ಆಹಮದ್ ಆಲಿ ಪಪಂ ಸದಸ್ಯರಾದ ರವಿಕುಮಾರ್ ಶಕೀಲ್ ಆಹಮದ್.ರಮೇಶಣ್ಣ.ಮಹಿಳಾ ಕಾರ್ಯಕರ್ತೆರಾದ ಸಾವಿತ್ರಮ್ಮ .ಉಮಾದೇವಿ .ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!