ಶುಕ್ರದೆಸೆ ನ್ಯೂಸ್:-
ಜಗಳೂರು :ದೇಶ ಎಷ್ಟೆ ಅಭಿವೃದ್ಧಿ ಹೊಂದಿದರೂ ಸಹ ಸಾಮಾಜಿಕ ಅಸಮಾನತೆಗಳನ್ನ ಹೋಗಲಾಡಿಸಲು ಸಾದ್ಯವಾಗುತ್ತಿಲ್ಲ ಕಾನುನು ಕಟಳೆಗಳು ಇದ್ದರೂ ಸಹ ಅಲ್ಲಲ್ಲಿ ಇನ್ನೂ ಸಹ ದೌರ್ಜನ್ಯದಂತಹ ಪ್ರಕರಣಗಳು ಮುಂದುವರಿಯುತ್ತಿರುವುದು ವಿಷಾದನೀಯ ಎಂದು ಭಾರತೀಯ ಜನಕಲಾ ಸಂಘ ಸಮಿತಿ ಬೀದಿ ನಾಟಕ ಕಲಾ ತಂಡದ ಗೌರವಾಧ್ಯಕ್ಷ ಎಂ..ಓಬಪ್ಪ ಹೇಳಿದರು
ತಾಲ್ಲೂಕಿನ ಭರಮ ಸಮುದ್ರ ಗ್ರಾಮದಲ್ಲಿ ಜನ ಕಲಾ ತಂಡ ವತಿಯಿಂದ ಸಾಮಾಜಿಕ ಜಾಗೃತಿ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು
ದೇಶದಲ್ಲಿ ಬಡತನ.ಅಸ್ಪೃಶ್ಯತೆ ಸಾಮಾಜಿಕ ಅಸಮಾನತೆ ದೌರ್ಜನ್ಯ ಹಾಗು ಅನಾರೋಗ್ಯ ಅನಕ್ಷರತೆಯಂತಹ ಪ್ರಕರಣಗಳು ಕಂಡು ಬರುತ್ತಿವೆ .ಇವುಗಳನ್ನ ಕೊನೆಗಾಣಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಜಾಗೃತಿ ಮೂಡಿಸುತ್ತಿವೆ ಈ ನಿಟ್ಟಿನಲ್ಲಿ ಗ್ರಾಮೀಣ ಭಾಗವದಲ್ಲಿ ಜನರಿಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಜಿಲ್ಲಾಧ್ಯಾಂತ ಜನಕಲಾ ತಂಡದಿಂದ ಬೀದಿ ನಾಟಕ , ಜನಪದ ಹಾಡುಗಳಿಂದ ಜಾಗೃತಿಮೂಡಿಸುವ ಕಾರ್ಯ ಮಾಡಲಾಗುತ್ತಿದೆ
ಸಾರ್ವಜನಿಕ ಸ್ಥಳಗಳಲ್ಲಿ ಅಸಮಾನತೆ ಹಾಗು ಬಹಿಷ್ಕಾರ ದೌರ್ಜನ್ಯದಂತಹ ಪ್ರಕರಣಗಳು ಮಾಡಬಾರದು ಕಾನುನು ಅಡಿಯಲ್ಲಿ ಎಲ್ಲರೂ ಸಮಾನರು ಎಂದು ತಿಳಿಯಬೇಕು ಎಂದರು
ಗ್ರಾಮದ ಮುಖಂಡರು ಉಪನ್ಯಾಸಕರು ನಾಗಲಿಂಗಪ್ಪ ಮಾತನಾಡಿ ಸಾಮಾಜಿಕ ಅಸಮಾನತೆಗಳ ಪ್ರಕರಣಗಳನ್ನು ತಡೆಗಟ್ಟಲು ಕಾನುನು ಕಠಿಣವಾಗಿದ್ದರು ಸಹ ಅಲ್ಲಲ್ಲಿ ಕಂಡು ಬರುತ್ತಲೆ ಇವೆ ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಜನಕಲಾಸಂಘ ತಿಳುವಳಿಕೆ ಮೂಡಿಸುವ ಕೆಲಸಮಾಡುತ್ತಿವೆ ಈಗೆ ಎಲ್ಲಾ ಗ್ರಾಮದಲ್ಲಿ ನೆಡೆಯಲಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಜನಕಲಾ ಸಂಘದ ತಾಲ್ಲೂಕ್ ಸಂಘ ಸಂಚಾಲಕ ರೇವಣ್ಣ ನಾಯ್ಕ , ಬಡಪ್ಪ ದಾವಣಗೆರೆ ಹಿಪ್ಟಾ ಕಲಾವಿದರರಾದ ಐರಣಿ ಚಂದ್ರು , ಲೋಕಿಕೆರೆ ಪುರಂದರ , ಆವರಗೆರೆ ಬಾನಪ್ಪ , ಶೌಕತ್ ಆಲಿ , ಖಾದರ್ , ಮಹಾಂತೇಶ್ ಕುಕ್ಕವಾಡ , ಶ್ಯಾಗಲೇ ಶರಣಪ್ಪ , ಗ್ರಾ.ಪಂ.ಸದಸ್ಯರಾದ , ತಿಪ್ಪೇಸ್ವಾಮಿ , ಬಸವರಾಜ್ , ಕಿರಣ್ , ಹನುಮಕ್ಕ ಪೆದ್ದಣ್ಣ , ಲಕ್ಷ್ಮಿ ಮಹಾಂತೇಶ್ , ರೈತ ಸಂಘ ಕಾರ್ಯದರ್ಶಿ ಕುಮಾರ್ , ಪತ್ರಕರ್ತರ , ಮಹಾಂತೇಶ್ ಬ್ರಹ್ಮ , ವ್ಯಾಸಗೊಂಡನಹಳ್ಳಿ ರಾಜಪ್ಪ ಮಾನವ ಬಂದುತ್ವ ವೇದಿಕೆ ಸಂಚಾಲಕ ಧನ್ಯಕುಮಾರ್ ಮುಖಂಡ ದಿಬ್ಬದಹಳ್ಳಿ ಪಿ.ನೂರ್ ಅಹಮದ್ ಉಪನ್ಯಾಸಕ ಕಾಮಗೇನತಹಳ್ಳಿ ಎ.ಪಿ.ನಿಂಗಪ್ಪ ಸೇರಿದಂತೆ ಹಲವರು ಇದ್ದರು