ಶುಕ್ರದೆಸೆ ನ್ಯೂಸ್:-

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಲ್ದೂರು ಪ್ರೌಢಶಾಲಾ ಮಕ್ಕಳಿಗೆ ಪ್ರಾದೇಶಿಕ ವನ್ಯಜೀವಿ ಅರಣ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಯಿತು.

ವಿಶ್ವ ಪರಿಸರ ದಿನಚಾರಣೆ ಅಂಗವಾಗಿ ಆಲ್ದೂರು ವನ್ಯಜೀವಿ ಸಂರಕ್ಷಣಾ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಸ್ಯ ಸಂರಕ್ಷಣಾ ಮತ್ತು ಕಾಡಿನ ಪ್ರಾಣಿಸಂಕುಲಗಳ ಬಗ್ಗೆ ಅರಿವು ಮೂಡಿಸಲಾಯಿತು .
ವಿದ್ಯಾರ್ಥಿಗಳು ವಿದ್ಯಾರ್ಥಿ ಬಾಲ್ಯದಿಂದಲೆ ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು.
ಕಾರ್ಯಕ್ರಮದಲ್ಲಿ ಆಲ್ದೂರು ವನ್ಯ ಜೀವಿ ವಲಯ ಅರಣ್ಯ ಅಧಿಕಾರಿ ಎಮ್ ಆರ್ ಹರೀಶ್ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಪರಿಸರವನ್ನು ಉಳಿಸಿದರೆ ಮಾತ್ರ ಮನುಷ್ಯರಾದ ನಾವು ಉತ್ತಮ ಆರೋಗ್ಯವಾದ ಜೀವನ ನಡೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿ ಜೀವನದಿಂದಲೇ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಕನಿಷ್ಠ ಒಂದು ಗಿಡವನ್ನು ನೆಟ್ಟು ಬೆಳೆಸಿದರೆ ಪ್ರತಿಯೊಬ್ಬರಿಗೂ ಆಮ್ಲಜನಕ ಉತ್ಪತ್ತಿಯಾಗಿ ಸಾವಿರಾರು ಜನರಿಗೆ ಉತ್ತಮ ಗಾಳಿ ನೆರಳು ನೀಡುವಂತ ಗಿಡ ಮರಗಳಿಂದ ನಮ್ಮ ಬದುಕು ಅಸನಾಗುವುದು.ಆದ್ದರಿಂದ ಪರಿಸರ ಮಾನವನ ಒಂದು ಅವಿಭಾಜ್ಯ ಅಂಗವಾಗಿದೆ.ಸಸ್ಯ ಸಂಪತ್ತಿನ ಬಗ್ಗೆ ಪ್ರತಿಯೊಬ್ಬ ಮಾನವನ ಜವಬ್ದಾರಿಯಾಗಿದೆ. ಶಾಲೆಯ ಅಂಗಳದಲ್ಲಿ ಪರಿಸರವನ್ನು ಶುಚಿತ್ವದಿಂಡುವುದು ವಿದ್ಯಾರ್ಥಿಗಳು ಕರ್ತವ್ಯವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ನೆನಪಿಗಾಗಿ ಗಿಡವನ್ನು ನೆಟ್ಟು ಬೆಳೆಸಬೇಕು. ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಿಸಿ, ವಿದ್ಯಾರ್ಥಿ ಜೀವನದಿಂದಲೇ ಪರಿಸರ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!