ಮೊಳಕಾಲ್ಮೂರು ತಾಲ್ಲೂಕಿನ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಟಿ ಆರ್ ಪ್ರಕಾಶ ನಿನ್ನೆ ತಡ ರಾತ್ರಿ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಜರುಗಿದೆ .
ಈ ಹಿಂದೆ ಇವರು ಜಗಳೂರು ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಜನಮನ್ನಣೆ ಸೇವೆ ಮಾಡಿ ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕಳೆದ ಸುಮಾರು ಎರಡು ವರ್ಷಗಳ ಹಿಂದೆ ವರ್ಗಾವಣೆಗೊಂಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪ್ರಾದೇಶಿಕ ವಲಯದಲ್ಲಿ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ 34 ವರ್ಷದ ಟಿ ಆರ್ ಪ್ರಕಾಶರ್ ರವರು ತನ್ನ ವಾಸವಿರುವ ಸರ್ಕಾರಿ ವಸತಿ ಗೃಹದಿಂದ ನಿನ್ನೆ ರಾತ್ರಿ 8.30 ರ. ಸಮಯದಲ್ಲಿ ಪ್ರಾದೇಶಿಕ ಕಛೇರಿ ವಲಯದಲ್ಲಿರುವ ನರ್ಸರಿ ಕಡೆಗೆ ತೆರಳಿದ್ದಾರೆ .ಆ ಸಂದರ್ಭದಲ್ಲಿ ನರ್ಸರಿಯಲ್ಲಿ ವಿಷ ಜಂತು ಹಾವು ಕಚ್ಚಿದ ಪರಿಣಾಮ ಗಾಬರಿಗೊಂಡು ಮನೆಗೆ ಬಂದು ಕುಟುಂಬದವರಿಗೆ ತಿಳಿಸಿ ಸ್ಥಳದಲ್ಲಿಯೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.
ಇದೀಗ ಇವರ ಮರಣತ್ತೊರ ಪರೀಕ್ಷೆ ನಡೆಸಿ ದಾವಣಗೆರೆ ಜಿಲ್ಲೆಯ ರೆಡ್ಡಿಹಳ್ಳಿ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೇರವೇರಿಸಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ..
ಮೃತರ ಕುಟುಂಬದ ಪತ್ನಿ .ಒಂದು ಗಂಡು ಮಗು ಹಾಗೂ ಆಪಾರ ಬಂಧು ಬಳಗವನ್ನು ಬಿಟ್ಟು ಆಗಲಿದ್ದಾರೆ. ಇನ್ನು ಸಂಬಂಧಿಕರ ಗೋಳು ಮುಗಿಲು ಮುಟ್ಟುವಂತಿತ್ತು .ಒಟ್ಟಾರೆ ಕರ್ತವ್ಯವದಲ್ಲಿ ಸಾವನ್ನಪ್ಪಿದ ಟಿ ಆರ್ ಪ್ರಕಾಶ್ ರವರ ಸಾವು ವಿಷ ಜಂತು ಬಲಿಯಾಗಿರುತ್ತಾರೆ.ಶ್ರೀಯತರ ಪತ್ನಿ ಹಾಗೂ ತಂದೆ ತಾಯಿಯರು ಮತ್ತು ಆಪ್ತ ಅಧಿಕಾರಿಗಳು ಸಂಬಂಧಿಕರು. ಸ್ನೇಹಿತರು ಸಿಬ್ಬಂದಿಗಳು ಉತ್ತಮ ಅಧಿಕಾರಿಯನ್ನು ಕಳೆದುಕೊಂಡು ಅವರ ಸೇವಾ ಅವಧಿಯಲ್ಲಿ ಮಾಡಿದ ಕಾರ್ಯ ನೆನೆದು ಕಣ್ಣಿರಿಟ್ಟಿದ್ದಾರೆ.