ಶುಕ್ರದೆಸೆ ನ್ಯೂಸ್:-

ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಭಾರತ್ ಗೈಡ್  ತಂಡದಿಂದ ವಿಶ್ವ ಪರಿಸರ ದಿನಾಚರಣೆ

ಕೂಡ್ಲಿಗಿ:- ತಾಲೂಕಿನ ಬಣವಿಕಲ್ಲು ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯ  ಮಾಡುವ ಮೂಲಕ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ದಿನವೇ ವಿಶ್ವ ಪರಿಸರ ದಿನ ಪ್ರತೀ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಮಹತ್ತರವಾದ ದಿನವಿದು.ಪರಿಸರ ಸಂರಕ್ಷಣೆಗೆ ನಾವು ಸ್ವಯಂಪ್ರೇರಿತರಾಗಿ ಗಿಡ ನೆಟ್ಟು, ನೀರು ಹಾಕಿ, ಮರಗಳನ್ನು ಬೆಳೆಸಬೇಕಿದೆ. ಪರಿಸರದ ಮೌಲ್ಯವನ್ನು ಎಲ್ಲರೂ ಅರಿತುಕೊಂಡು ಮಲಿನ ಮಾಡದಂತೆ ಸಂರಕ್ಷಣೆ ಮಾಡುವಲ್ಲಿ ಶ್ರಮವಹಿಸಬೇಕಿದೆ. ಇನ್ನು ನಮ್ಮ ಆಪ್ತರ ಸಂತೋಷದ ಕ್ಷಣಗಳಿಗೆ ಕಾರಣರಾಗಲು ನಾವು ಯಾವುದೋ ಲಕ್ಷಾಂತರ ಮೌಲ್ಯದ ಉಡುಗೂರೆ ನೀಡುವ ಬದಲು ಪರಿಸರಕ್ಕೆ ಪೂರಕವಾಗುವಂತೆ ಒಂದು ಗಿಡ ಕೊಟ್ಟರೆ ಅದು ಎಲ್ಲದಕ್ಕಿಂತಲೂ ಅಮೂಲ್ಯವಾದದ್ದು ಎನಿಸಿಕೊಳ್ಳುತ್ತದೆ. ಹೀಗೇ ಯಾವೊದೋ ಒಂದು ನೆಪದ್ಲಲಿ ಪ್ರತೀ ಮನೆಗಳಲ್ಲಿ ಒಂದು ಗಿಡ ನೆಟ್ಟರೆ ಸಾಕು, ತಾನಾಗಿಯೇ ಊರಿನಲ್ಲಿ ವನ ಸೃಷ್ಟಿಯಾಗುತ್ತದೆ. ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರಿಗೆ ಮರುಜನ್ಮ ನೀಡಿದ ಹಾಗೆ ಆಗುತ್ತದೆ  ಎಂದುರು. ಡಿ ಎಂ ವಾಣಿ.  ಗ್ರಾಮ ಪಂಚಾಯತಿ ಅಭಿರುದ್ದಿ ಅಧಿಕಾರಿಗಳು ಶಾಂತಕುಮಾರಿ. ಧೈಹಿಕ ಶಿಕ್ಷಕಿ ಮಂಜುಳ. ತಸ್ಲೀಮ್. ಉನ್ನಿಸ್. ಶ್ವೇತಾ.  ಸಿಂದು.  ಗ್ರಾ ಪಂ ಕಾರ್ಯದರ್ಶಿ ತಿಪ್ಪೇಸ್ವಾಮಿ ಎಲ್ಲಾ ಸಿಬ್ಬಂದಿಗಳು ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You missed

error: Content is protected !!