ಶುಕ್ರದೆಸೆ ನ್ಯೂಸ್:
ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆಬೀಜ ಮತ್ತು ರಸಗೊಬ್ಬರವನ್ನು ಸಮರ್ಪಕವಾಗಿ ವಿತರಣೆ ಮಾಡುವಂತೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಟ್ಟಣದ ಎ ಪಿ ಎಂ ಸಿ ಮಾರುಕಟ್ಟೆಯಲ್ಲಿ ಕೃಷಿ ಇಲಾಖೆ ವತಿಯಿಂದ ಗುರುವಾರ ರೈತರಿಗೆ ಬಿತ್ತನೆ ಬಿಜ , ರಸಗೊಬ್ಬರ ವಿತರಣೆ ಕೇಂದ್ರದಲ್ಲಿ ಬಿಜ ಗೊಬ್ಬರ ವಿತರಿಸಲು ಕ್ಷೇತ್ರದ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ರವರು ಅಧಿಕೃತವಾಗಿ ಚಾಲನೆ ನೀಡಿದರು. ರೈತರಿಗೆ ಲೋಪವಾಗದಂತೆ ಅಧಿಕಾರಿಗಳು ಬಿತ್ತನೆ ಬಿಜ ಗೊಬ್ಬರ ಇನ್ನಿತರೆ ಸೌಲಭ್ಯಗಳನ್ನು ಚಾಚು ತಪ್ಪದೆ ವಿತರಿಸಿ ಎಂದು ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ಸರ್ಕಾರ ರೈತರ ಪರವಾಗಿದ್ದು ಅನ್ನ ಬೆಳೆಯುವ ರೈತ ಸಮುದಾಯಕ್ಕೆ ನ್ಯಾಯೋಚಿತವಾಗಿ
ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಸಲು ಇಲಾಖೆಯಿಂದ ನಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದೆವೆ. ಬಿತ್ತನೆ ಬೀಜಗಳ ಪೂರೈಕೆದಾರರು, ವಿತರಕರು ಕಳಪೆ ಬೀಜ ಸರಬರಾಜು ಮಾಡಿದರೆ ನಾನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಕಡಕ್ ವಾರ್ನಿಂಗ್ ಮಾಡಿದರು.
ಈ ವೇಳೆ ಜಿಲ್ಲಾ ಕೃಷಿ ಇಲಾಖೆ ಉಪಾ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ
ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು ರೈತರು ಸಂಬಂಧಿಸಿದ ಪಹಣಿ ಆಧಾರ ಕಾರ್ಡು ದಾಖಲೆಗಳನ್ನು ರೈತ ಸಂಪರ್ಕ ಕಛೇರಿಯಲ್ಲಿ ನೊಂದಾಯಿಸಿ ಬಿತ್ತನೆ ಬಿಜ ಗೊಬ್ಬರ ಪಡೆಯಬಹುದಾಗಿದೆ.ಎಂದು ತಿಳಿಸಿದರು.
ರೈತರು ಈಗಾಗಲೇ ತಾಲ್ಲೂಕಿನಾದ್ಯಂತ ಜಮಿನುಗಳುನ್ನು ಅಸನು ಮಾಡಿಕೊಂಡು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ ಮುಂಗಾರು ಮಳೆ ಈ ಬಾರಿ ಕೈಕೊಟ್ಟಿದೆ ಈ ತಿಂಗಳ ಕೊನೆ ಅಂತದಲಿ ಮಳೆ ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥನ್ ಕಿಮಾವತ್ ಮಾತನಾಡಿ ತಾಲ್ಲೂಕಿನಲ್ಲಿ ಮುಂಗಾರು ಅಂಗಾಮಿನಲ್ಲಿ ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು ರೈತರು ಈಗಾಗಲೇ ಬಿತ್ತನೆ ಭೂಮಿಯನ್ನು ಹದ ಮಾಡಿಕೊಂಡಿದ್ದಾರೆ ಇದೀಗ ಮಳೆ ಕೈಕೊಟ್ಟಿದೆ ಈಗಾಗಲೇ ಮುಂಗಾರು ಬೆಳೆಗಳಾದ ಮೆಕ್ಕೆಜೋಳ ಜೋಳ, ಹೆಸರು, ಉದ್ದು, ಎಳ್ಳು, ಅಲಸಂದೆ ಹಾಗೂ ಹತ್ತಿ ಬೆಳೆಗಳ ಬಿತ್ತನೆ ಕಾರ್ಯ ಪ್ರಗತಿಯಲ್ಲಿರಬೇಕಾಯಿತು.ಆದರೆ ಮಳೆ ಕೊರತೆಯಿಂದ ಬಿತ್ತನೆ ಅಷ್ಟಾಗಿ ಕಂಡು ಬಂದಿಲ್ಲ.
ರೈತರಿಗೆ ಬಿತ್ತನೆ ಬಿಜ ಕೊರತೆಯಾಗದಂತೆ ಸಾಕಷ್ಟು ದಾಸ್ತುನು ಲಭ್ಯವಿದೆ ಎಂದರು.
ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದ್ದು, ವಿತರಣೆ ಕಾರ್ಯ ಪ್ರಗತಿಯಲ್ಲಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಸಂತೋಷಕುಮಾರ್. ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ. ಮುಖಂಡರಾದ ಕಲ್ಲೇಶ್ ರಾಜ್ ಪಟೇಲ್.ಜಿಲ್ಲಾ ಕಾಂಗ್ರೆಸ್ ಕಾರ್ಯಧರ್ಶಿ ಪಲ್ಲಾಗಟ್ಟೆ ಶೇಖರಪ್ಪ.ರೈತ ಮುಖಂಡ ಲಕ್ಷ್ಮಣ.ಮುಖಂಡ ಆಹಮದ್ ಆಲಿ.ಯುವ ಕಾಂಗ್ರೆಸ್ ವಿಜಯ್ ಕೆಂಚೊಳ್.ಸೇರಿದಂತೆ ಹಾಜರಿದ್ದರು.