ಶುಕ್ರದೆಸೆ ನ್ಯೂಸ್:-

ಪೌರ ಕಾರ್ಮಿಕರನ್ನು ಕೀಳಾಗಿ ಕಾಣದೆ ಗೌರವಿಸೋಣ:ಶಾಸಕ ಬಿ.ದೆವೇಂದ್ರಪ್ಪ

ಜಗಳೂರು ಸುದ್ದಿ: ಪಟ್ಟಣದ ಸಂತೆ ಮೈದಾನದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ ದೇವೇಂದ್ರಪ್ಪ ಇವರು ಪೌರಕಾರ್ಮಿಕರೊಂದಿಗೆ ಕಸಗೂಡಿಸಿ ತಾವೆ ಕಸದ ಪುಟ್ಟಿ ತನ್ನ ತಲೆಯ ಮೇಲೆ ಹೊತ್ತು ಕಸದ ವಾಹನಕ್ಕೆ ಹಾಕುವ ಮೂಲಕ ಜಗಳೂರು ಇತಿಹಾಸದಲ್ಲಿಯೆ ಮಾದರಿ ಶಾಸಕರಾಗಿದ್ದಾರೆ.!

ಭಾನುವಾರ ಬೆಳಿಗ್ಗೆ 6 ಗಂಟೆಗೆ ಜನಸಾಮಾನ್ಯರಂತೆ ಒಬ್ಬ ಶಾಸಕ ಬೈಕ್ ನಲ್ಲಿ ಬಂದು ಜಗಳೂರು ಪಟ್ಟಣದಲ್ಲಿ ಪೌರಕಾರ್ಮಿಕ ರಂತೆ ಕಸಗೂಡಿಸಿ ಕೆಲಸ ಮಾಡುತ್ತಿರುವ ಶಾಸಕ ಬ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪರವರ ಕಡೆಗೆ  ರಾಜ್ಯವೆ ತಿರುಗಿ ನೋಡುವಂತ ಕೆಲಸ ಮಾಡಲಿದ್ದಾರೆ ಎಂದು ಈಗಾಗಲೇ ಇವರು‌  ಮಾಡುವ  ಕೆಲಸವನ್ನ ಕಂಡ ಕ್ಷೇತ್ರದ ಜನತೆ ಅಶಾಭಾವನೆ ವ್ಯಕ್ತಪಡಿಸಿದ್ದಾರೆ..

ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಪೌರಕಾರ್ಮಿಕರನ್ನು ಕೀಳು ದೃಷ್ಠಿಯಲ್ಲಿ ಕಾಣುವುದು ಸರಿಯಲ್ಲ. .ಅವರ ದೈನಂದಿನ ಸ್ವಚ್ಛತಾ ಕಾಯಕಕ್ಕೆ ಸ್ಪೂರ್ತಿ ನೀಡಬೇಕು ನಾನು ಸದಾ ಧ್ವನಿಯಾಗಿ ನಿಲ್ಲುವೆ.

ಸುರಕ್ಷತೆಗಾಗಿ  ಮಳೆಗಾಲದಲ್ಲಿ ರೈನ್ ಕೋಟ್ ಮತ್ತು ಚಳಿಗಾಲದಲ್ಲಿ ಸ್ವೆಟರ್ ಟೋಪಿ ನನ್ನ ಶಾಸಕ ವೇತನದಲ್ಲಿ ಕೊಡಿಸುತ್ತೇನೆ ಅದಲ್ಲದೆ ದಸರಾ ಮತ್ತು ಯುಗಾದಿ ಹಬ್ಬಕ್ಕೆ ವಿಶೇಷವಾಗಿ  ಉಡುಗೊರೆ ಕೊಡುವೆ.

ಪೌರಕಾರ್ಮಿಕರಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸುವೆ.ಸರಕಾರದ ಸೌಲಭ್ಯಗಳನ್ನು ಒದಗಿಸುವೆ ಎಂದು ಪೌರನೌಕರರಿಗೆ ಅಭಯ ಅಸ್ತ ಚಾಚಿರುವ ಮೊಟ್ಟ ಮೊದಲ ಶಾಸಕ ಎಂದರೆ ತಪ್ಪಾಗಲಾರದು. 

ನಾನು ಎಸಿ ರೂಮಿನಲ್ಲಿ ಕುಳಿತುಕೊಳ್ಳುವ ಶಾಸಕನಲ್ಲ:ನಾನು ಶಾಸಕನಾಗಿರುವುದು ಕಿರೀಟಕ್ಕಲ್ಲ.ಎಸಿ ರೂಮಿನಲ್ಲಿ ಕುಳಿತುಕೊಳ್ಳದೆ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡುವೆ.ಕ್ಷೇತ್ರದ ಜನತೆಗೆ ಸೂರು,ನೀರು,ಆರೋಗ್ಯ,ಶಿಕ್ಷಣ‌ಕ್ಷೇತ್ರಕ್ಕೆ ಆಧ್ಯತೆ ನೀಡುವೆ.ಅಧಿಕಾರಿಗಳ ಕಾರ್ಯವೈಖರಿಯನ್ನು  ಗಣನೀಯವಾಗಿ ಪರಿಗಣಿಸುವೆ ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮ ಜರುಗಿಸುವೆ ಎಂದು ಎಚ್ಚರಿಸಿದರು.

ಪಟ್ಟಣದ ಮರೇನಹಳ್ಳಿ ರಸ್ತೆಯಲ್ಲಿ ತ್ಯಾಜ್ಯ ಮಣ್ಣನ್ನು ಹಾಕಿರುವುದನ್ನು ಸ್ವಚ್ಛಗೊಳಿಸಬೇಕು.ವಾಹನ ಸವಾರರಿಗೆ,ವಾಯು ವಿಹಾರಿಗಳಿಗೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು.ಕೊಳಚೆ ನೀರನ್ನು ಕೆರೆಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಚಾಟಿ ಬೀಸಿದರು.

ಜನಸಾಮಾನ್ಯರಂತೆ ಇಂದಿರಾ ಕ್ಯಾಂಟೀನ್ ನಲ್ಲಿ  ಪೌರಕಾರ್ಮಿಕರೊಂದಿಗೆ ತಿಂಡಿ ಸೇವಿಸಿದರು. ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಿಢೀರನೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮವನ್ನು ವಿಚಾರಿಸಿ ಅಲ್ಲಿನ ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಆಸ್ಪತ್ರೆಯನ್ನು ಸ್ವಚ್ಛತೆ ಕಾಪಾಡಲು ಸೂಚಿಸಿದರು.

ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ರಮೇಶ್ ರೆಡ್ಡಿ. ರವಿಕುಮಾರ್. ಮಂಜುನಾಥ್.ಮಹಮದ್ ಅಲಿ. ಲುಕ್ಮಾನ್. ಪ ಪಂ.ಆರೋಗ್ಯ ನಿರೀಕ್ಷಕರಾದ ಕಿಫಾಯಿತ್ ಅಹ್ಮದ್. ಪೌರ ಕಾರ್ಮಿಕರು ಸಂಘದ ತಾಲೂಕು ಅಧ್ಯಕ್ಷ ಎ.ಕೆ ಬಸವರಾಜ್ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ. ಮಹಮ್ಮದ್ ಗೌಸ್. ನಾಗರಾಜ್. ಆದರ್ಶ. ಬಸವರಾಜ್ ಸೇರಿದಂತೆ ಪೌರಕಾರ್ಮಿಕರು ಸಾರ್ವಜನಿಕರು ಇದ್ದರು

Leave a Reply

Your email address will not be published. Required fields are marked *

You missed

error: Content is protected !!