ಶುಕ್ರದೆಸೆ ನ್ಯೂಸ್ :-

ಜಗಳೂರು ಸುದ್ದಿ


ಜಗಳೂರು ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಭಾನುವಾರ ಮುಸ್ಲಿಂ ಸಮಾಜದ ವತಿಯಿಂದ ನೂತನ ಶಾಸಕರಿಗೆ ಅಭಿನಂದನ ಸಮಾರಂಭ ಏರ್ಪಡಿಸಲಾಗಿತ್ತು .

ಭವ್ಯ ಅಭಿನಂದನ ಸಮಾರಂಭದಲ್ಲಿ ಶಾಸಕ ಬಿ ದೇವೆಂದ್ರಪ್ಪ ಸನ್ಮಾನ ಸ್ವಿಕರಿಸಿ ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದರು. ಮುಸ್ಲಿಂ ಸಮಾಜದವರು ಹಾಗೂ ನಮ್ಮ ಹಿಂದುಗಳು ಒಟ್ಟು ಒಟ್ಟಿಗೆ ಭಾವೈಕ್ಯತೆಯಿಂದ ಜೀವನ ಮಾಡುವಂತ ಕರ್ನಾಟಕ ರಾಜ್ಯ ಶಾಂತಿಯ ನೆಲೆಯಾಗಿದೆ. ದೇಶದಲ್ಲಿ ಶಾಂತಿ ನೆಲೆಯಾಗಿರುವ ಭಾರತದಲ್ಲಿ ಪ್ರಸ್ತುತದಲ್ಲಿ ಈ ಬಿ ಜೆ ಪಿ ಪಕ್ಷದವರು ಕೋಮುವಾದ ಸೃಷ್ಠಿಸಿ ಸಮಾಜವನ್ನ ಒಡೆದು ಆಳುವ ನೀತಿಗೆ ಈಗಾಗಲೇ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಕಟ್ ಆಗಿದೆ ಮುಂದಿನ ದಿನಗಳಲ್ಲಿ‌ ಕೇಂದ್ರ ಸರ್ಕಾರ ಪಥನವಾಗುವುದು ಖಚಿತ .ಕರ್ನಾಟಕ ಕುವೆಂಪು ಕಂಡ ಕನಸಿನ ಶಾಂತಿಯ ತೋಟದಂತೆ ಸಾಮರಸ್ಯದಂತೆಯಿರುವ ಕನ್ನಡ ನಾಡಿಗೆ ಭಂಗ ತರುವಂತ ಸೂಲಿಬೆಲೆ ಹೇಳಿಕೆಗಳು ತರವಲ್ಲ .

ನಾನು ಸದಾ ಮುಸ್ಲಿಂ ಸಮಾಜದ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ಶಾಸಕನಾಗಿ ಅವರಿಗೆ ಸಿಗುವ ಸಂವಿಧಾನಿಕ ಹಕ್ಕುಗಳಿಗೆ ನಮ್ಮ ಬೆಂಬಲವಿದೆ. ಮುಸ್ಲಿಂ ಜನಾಂಗ ವಾಸಿಸುವ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುವೆ ಎಂದು ಭರವಸೆ ನೀಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತ ಮತ್ತು ದಲಿತ ಹಿಂದೂಳಿದವರ ಮತ ಬ್ಯಾಂಕ್ ನಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ.ನಮ್ಮ ಪಕ್ಷಕ್ಕೆ ಆತ್ಯಂತ ಬಹುಮತ ನೀಡಿ ಸಹಕರಿಸಿರುವ ಮತದಾರರ ಹಿತಾ ಕಾಪಾಡುವಂತ ಆಡಳಿತ ನೀಡಿ ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳುನ್ನು ಜನತೆಗೆ ಸಮರ್ಪಕವಾಗಿ ನೀಡುವುದು ಶತಸಿದ್ದ . ನಮ್ಮ ತಾಲ್ಲೂಕಿನ ಮುತ್ಸದಿ ರಾಜಕಾರಣಿ ರಾಜರ ಕಾಲಾವಧಿಯಲ್ಲಿ ಮಂತ್ರಿಯಾಗಿ ದೇಶಕ್ಕೆ ಮಾದರಿ ಆಡಳಿತಕ್ಕೆ ನಮ್ಮ ಕ್ಷೇತ್ರದ ನಾಯಕನ ಸೇವೆ ಅಜರಾಮರ ಎಂದು ಶ್ಲಾಘಿಸಿದರು.

ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಅಸಗೋಡು ಜಯಸಿಂಹ, ಮಾತನಾಡಿ ಬಿಜೆಪಿ ಆಡಳಿತಕ್ಕೆ ಬೇಸತ್ತು ಮತದಾರರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತಂದಿದ್ದಾರೆ.ಕ್ಷೇತ್ರದಲ್ಲಿ ಶಾಸಕ ದೆವೇಂದ್ರಪ್ಪ ಅವರು ತಮ್ಮ ಮೂಲ ವೃತ್ತಿ ಜವಾನರಾಗಿ ಕಸಗುಡಿಸಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು.ರಾಜ್ಯದ ಇತರೆ ಶಾಸಕರುಗಳಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ‌ವ್ಯಕ್ತಪಡಿಸಿದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಮಾತನಾಡಿ,ಕಾಂಗ್ರೆಸ್ ಪಕ್ಷದ ಗೆಲುವಿಗೆ ಕ್ಷೇತ್ರದಲ್ಲಿನ ಮುಸ್ಲಿಂ ಸಮುದಾಯದವರು ಸ್ವಯಂಪ್ರೇರಿತವಾಗಿ ಬೆಂಬಲಿಸಿದ್ದಾರೆ.ಕಾಂಗ್ರೆಸ್ ಪಕ್ಷದ ಆಡಳಿತದಿಂದ ಮಾತ್ರ ಮುಸ್ಲಿಂ ಸಮಾಜದ ಅಭಿವೃದ್ದಿ ಸಾಧ್ಯ.ಪರಿಶಿಷ್ಟ ಸಮುದಾಯ,ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸಂವಿಧಾನದ ಉಳಿವಿಗಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಬೇಕಿದೆ ಎಂದು ಹೇಳಿದರು.

ಮೌಲನಾ ಹಜರತ್ ಇಬ್ರಾಹಿಂ ಶಕಾಜಿ ಮಾತನಾಡಿ,ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಮಹಮ್ಮದ್ ಅಲಿ ಜಿನ್ಹಾ ರಂತಹ ಮಹಾನ್ ನಾಯಕರುಗಳಿಗೆ ಸೂಕ್ತ ಸ್ಥಾನಮಾನ ನೀಡಿತ್ತು. ವಿವಿಧತೆಯಲ್ಲಿ ಏಕತೆ ಸಾರುವ ದೇಶದಲ್ಲಿ ಸಂವಿಧಾನಬದ್ದ ಹಕ್ಕುಗಳನ್ನು ಮುಸ್ಲಿಂ ಸಮಾಜಕ್ಕೆ ಒದಗಿಸಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ‌.ಅಹಿಂದ್ ಸಮುದಾಯಗಳ ಒಗ್ಗಟ್ಟು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.

ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ದೇಶದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ರಾಜೇಂದ್ರ ಸಹಚಾರ್ ಆಯೋಗ ರಚಿಸಿ ಮುಸ್ಲಿಂ ಸಮುದಾಯವನ್ನು ಆರ್ಥಿಕ,ಶೈಕ್ಷಣಿಕೆ ಸ್ಥಾನಮಾನ ಕಲ್ಪಿಸುವ ಉದ್ದೇಶ ಇದುವರೆಗೂ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಮುಸ್ಲಿಂ ನಾಯಕರುಗಳು ಅಧಿಕಾರ ಅನುಭವಿಸಿದ್ದಾರೆ.ರಾಜ್ಯದಲ್ಲಿ ಸಚಿವ ಜಮೀರ್ ಅಹಮ್ಮದ್ ಅವರಂತಹ ಪ್ರಭಾವಿ ರಾಜಕಾರಣಿಗಳು ಇದ್ದಾರೆ ಆದ್ದರಿಂದ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ ಪಕ್ಷ ಕೈಬಿಡಬಾರದು ಎಂದು ಮನವಿ ಮಾಡಿದರು.

ಉಪನ್ಯಾಸಕ ಷಂಷುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಹನುಮಂತಾಪುರ ನಬಿವುಲ್ಲಾ,ಸಿ‌.ತಿಪ್ಪೇಸ್ವಾಮಿ,ಇಬ್ರಾಹಿಂ ಶಹಾಜಿ,ಇಮಾಂಮ್ ಅಲಿ ಸಾಹೇಬ್,ಅಕ್ತರ್ ಸಾಹೇಬ್,
ಗೌಸ್ ಪೀರ್,ವಾಸಿಮ್ ಸಾಹೇಬ್,ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಕೆಳಗೋಟೆ ಅಹಮ್ಮದ್ ಅಲಿ,ಟೀಪುಸಾಹೇಬ್,ಫರವೀಜ್ ಸಾಹೇಬ್,ಗುರುಸಿದ್ದಪ್ಪ,ಹೈದರಾಲಿ,ಗುರುಮೂರ್ತಿ,ಸುರೇಶ್ ಗೌಡ,ದಾದಪೀರ್ ಸಾಹೇಬ್,ವಕೀಲ ಪ್ರಕಾಶ್ ,ಸನಾವುಲ್ಲಾ ಸಾಹೇಬ್,ಸುಧೀರ್ ರೆಡ್ಡಿ. ಮುಖಂಡ ಪಲ್ಲಾಗಟ್ಟೆ ಶೇಖರಪ್ಪ,ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ,ಮಂಜುನಾಥ್,ಸೇರಿದಂತೆ ಇದ್ದರು‌.

Leave a Reply

Your email address will not be published. Required fields are marked *

You missed

error: Content is protected !!