ಶುಕ್ರದೆಸೆ ನ್ಯೂಸ್:-

ಸಿದ್ದಾಪುರ ಗ್ರಾಮದಲ್ಲಿ ದಲಿತ ಸಭೆ
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ
ಕಾನ ಹೊಸಹಳ್ಳಿ :- ಸಮೀಪದ ಸಿದ್ದಾಪುರ ಗ್ರಾಮದಲ್ಲಿ ದಲಿತ ಸಮುದಾಯಗಳ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಭಾನುವಾರ ಸಿದ್ದಾಪುರ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕಾನ ಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಹೆಚ್ ನಾಗರತ್ನಮ್ಮ ಇವರ ಅಧ್ಯಕ್ಷತೆಯಲ್ಲಿ ದಲಿತ ಸಮುದಾಯಗಳ ಕುಂದು ಕೊರತೆ ಸಭೆ ಜರುಗಿತು. ಹೋಟೆಲ್ ಪ್ರವೇಶ ದೇವಸ್ಥಾನ ಪ್ರವೇಶ ಇನ್ನು ಅನೇಕ ರೀತಿಯ ಸಮಸ್ಯೆಗಳ ಬಗ್ಗೆ ಮಾನ್ಯ ಪಿಎಸ್ಐ ಹೆಚ್ ನಾಗರತ್ನಮ್ಮನವರು ದಲಿತ ಸಮುದಾಯದವರನ್ನು ವಿಚಾರಿಸಿದರು. ಸಿದ್ದಾಪುರ ಗ್ರಾಮದಲ್ಲಿ ನಮ ಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ನಾವು ಗ್ರಾಮಸ್ಥರೆಲ್ಲರೂ ಒಳ್ಳೆಯ ಭಾವನೆ ಸಹಕಾರದಿಂದ ಒಗ್ಗಟ್ಟಿನಿಂದ ಜೀವನ ಮಾಡುತ್ತಿದ್ದೇವೆ ನಮಗೆ ಯಾವ ತೊಂದರೆ ಈ ಗ್ರಾಮದಲ್ಲಿ ಇಲ್ಲ ಎಂದು ದಲಿತ ಮುಖಂಡರು ತಿಳಿಸಿದರು.


ಪಿಎಸ್ಐ ನಾಗರತ್ನಮ್ಮ( ಅಪರಾಧ ವಿಭಾಗ ) ಅಧಿಕಾರಿಗಳು ಮಾತನಾಡಿ ನಿಮ್ಮ ಗ್ರಾಮದಲ್ಲಿ ನಿಮ್ಮ ಸಮುದಾಯಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದರೆ ತಕ್ಷಣ ಪೊಲೀಸ್ ಠಾಣೆಗೆ ಬಂದು ದೂರು ನೀಡಿ ಅಥವಾ ಫೋನ್ ಕರೆ ಮಾಡಿ ತಿಳಿಸಿ. ದಿನದ 24 ಗಂಟೆಗಳ ಕಾಲ ಸಾರ್ವಜನಿಕರ ಸೇವೆಗಾಗಿ ನಮ್ಮ ಪೊಲೀಸ್ ಇಲಾಖೆ ಇರುತ್ತದೆ. ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ, ಓಸಿ ಇಸ್ಪೇಟ್ ಕಾನೂನು ಬಾಹಿರ ಚಟುವಟಿಕೆಗಳು ಆಪಾರಧಂತ ಚಟುವಟಿಕೆಗಳು ಏನಾದರೂ ಇದ್ದರೆ ನಮಗೆ ತಿಳಿಸಿ.
ಯಾರಾದರೂ ಇಂಥ ಚಟಗಳಿಗೆ ದಾಸರಾಗಿದ್ದರೆ ಕೈಬಿಟ್ಟು ತಮ್ಮ ಕುಟುಂಬವನ್ನು ಜವಾಬ್ದಾರಿಯಿಂದ ನೋಡಿಕೊಳ್ಳಿ. ನಿಮ್ಮ ಮಕ್ಕಳನ್ನು ಒಳ್ಳೆಯ ಶಾಲೆ ಹಾಸ್ಟೆಲಿಗೆ ಸೇರಿಸಿ ಉನ್ನತ ಶಿಕ್ಷಣ ಕೊಡಿಸಿ ಎಂದು ಹೇಳಿದರು
ಸರ್ಕಾರದಿಂದ ಅನೇಕ ಸೌಲಭ್ಯಗಳು ಇದ್ದಾವೆ ಅವುಗಳನ್ನು ಉಪಯೋಗ ಮಾಡಿಕೊಳ್ಳಿ ಒಂದು ಒಳ್ಳೆಯ ಜೀವನವನ್ನು ಕಲ್ಪಿಸಿಕೊಳ್ಳಿ ಸಮಾಜದಲ್ಲಿ ಒಳ್ಳೆಯ ಉತ್ತಮ ಪ್ರಜೆಗಳಾಗಿ ಉನ್ನತ ಹುದ್ದೆಗಳನ್ನು ಪಡೆದುಕೊಂಡು ತಮ್ಮ ಗ್ರಾಮಕ್ಕೆ ನಿಮ್ಮ ಹೆತ್ತ ತಂದೆ ತಾಯಿಗಳಿಗೆ ಒಳ್ಳೆ ಹೆಸರನ್ನು ತರುವ ಮಕ್ಕಳಾಗಿರಿ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಎ ಎಸ್ ಐ ಗೋಪಾಲ್, ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ವೆಂಕಟೇಶ್ ಬಸವರಾಜ್.
ಗ್ರಾಪಂ ಮಾಜಿ ಅಧ್ಯಕ್ಷರಾದ ಗಾಣದ ಬಸವರಾಜ್. ದಲಿತ ಮುಖಂಡರಾದ ಮಲ್ಲಿಕಾರ್ಜುನ್ ಶ್ರೀನಿವಾಸ್. ಬಸವರಾಜ ದೊಡ್ಡದುರಗಪ್ಪ, ಸಿದ್ದೇಶ್. ಗ್ರಾಮಸ್ಥರಾದ ಶರಣೆಶ್, ಜನಾರ್ದನ ಸ್ವಾಮಿ ತಿಪ್ಪೇಸ್ವಾಮಿ, ಸೇರಿದಂತೆ ದಲಿತ ಸಮುದಾಯದವರು ಗ್ರಾಮಸ್ಥರು ಇತರರು ಇದ್ದರು

Leave a Reply

Your email address will not be published. Required fields are marked *

You missed

error: Content is protected !!