ಜೋಳಿಗೆ ಹಾಕಿ ಆನಾಥ ನಿಧಿ ಸಂಗ್ರಹಣೆ ಮಾಡಲು ಮುಂದಾಗುವೆ.
ಬಡವರ ಚಿಕಿತ್ಸೆಗಾಗಿ ಹಣ ವಿನಿಯೋಗಿಸಿ ಕ್ರಾಂತಿ ಮಾಡಲು ಚಿಂತನೆ.
ಶುಕ್ರದೆಸೆ ನ್ಯೂಸ್:-
ಜಗಳೂರು ವಿಧಾನಸಭಾ ಕ್ಷೇತ್ರದ ಅಣಬೂರು ಕ್ಯಾಸೆನಹಳ್ಳಿ. ಹನುಮಂತಪುರ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೂತನ ಶಾಸಕರಿಗೆ ಅಭಿನಂದನ ಸಮಾರಂಭ ಹಾಗೂ ಮತದಾರರಿಗೆ ಕೃತಜ್ಞತೆ ಸಭೆ ಏರ್ಪಡಿಸಲಾಗಿತ್ತು .
ನೂತನ ಶಾಸಕ ಬಿ ದೇವೆಂದ್ರಪ್ಪರವರು ಸಭೆ ಆರಂಭಕ್ಕೂ ಮುನ್ನ ಮೊನ್ನೆ ಅನ್ನ ಬೆಳೆಯುವ ಗೊಲ್ಲರಹಟ್ಟಿ ಗ್ರಾಮದ ರೈತರು ಸಿಡಿಲಿಗೆ ಬಲಿಯಾದ ರೈತರನ್ನು ನೆನೆದು ಸಭೆಯಲ್ಲಿ ಮೌನ ಅಚರಣೆ ಮಾಡಿ ನಂತರ ಅಭಿನಂದನೆ ಸ್ವಿಕರಿಸಿ ಸಭೆಯನ್ನುದ್ದೆಶಿಸಿ ಮಾತನಾಡಿದರು.
ಸಿಡಿಲಿಗೆ ಬಲಿಯಾದ ಇಬ್ಬರು ರೈತ ಬಡ ಕುಟುಂಬದ ಸಂತ್ರಸ್ತರಿಗೆ ನನ್ನ ಸ್ವಂತವಾಗಿ ತಲಾ 25 ಸಾವಿರ ಧನ ಸಹಾಯ ನೀಡಿ ಸಾಂತ್ವನ ಹೇಳಿ ಆ ಕುಟುಂಬದವರಿಗೆ ಆತ್ಮಸ್ಥೈರ್ಯ ಹೇಳಿದಂತೆ ಇದೀಗ ಕುಟುಂಬಂದವರಿಗೆ ಪ್ರಕೃತಿ ವಿಕೋಪದಡಿಯಲ್ಲಿ ತಲಾ 5 ಲಕ್ಷ ಪರಿಹಾರ ಆದೇಶ ಪತ್ರವನ್ನ ಶಾಸಕರು ವಿತರಿಸಿದರು .ತಾವುಗಳು ಈ ಪರಿಹಾರ ಹಣವನ್ನ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಿ ಎಂದು ಕುಟುಂಬದವರಿಗೆ ಸಲಹೇ ನೀಡಿದರು.
ನಾವು ಪರಿಹಾರ ನೀಡಬಹುದು ಆದರೆ ಹೋದ ಪ್ರಾಣ ತಂದು ಕೊಡಲು ಆಗದು ಎಂದು ಶಾಸಕರು ಭಾವುಕರಾದರು .
ಬಿಜೆಪಿಯವರಿಗೆ ಚಾಲಿಸ್ ಅಂದರೆ ಬಾರಿ ಆಸೆ 40 ಪರಿಷಂಟ್ ಸರ್ಕಾರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 40 ಶಿಟು ಅಷ್ಟೇ ಬರುವುವು ಎಂದು ನಮ್ಮ ಕೇಂದ್ರ ರಾಹುಲ್ ಜಿ ಈ ಹಿಂದೆ ಸಭೆಯಲ್ಲಿ ಹೇಳಿದಂತೆ ಈ ಬಾರಿ 65 ಬಿಜೆಪಿ ಶೀಟುಗಳು ಬಂದಿವೆ ಎಂದು ಹಾಸ್ಯಸ್ಪದವಾಗಿ ಆರೋಪಿಸಿದರು.
ಕಳೆದ ಶಾಸಕರಂತೆ ನಾನು ಆಲ್ಲ ನಾನು ಜನಸೇವೆ ಮಾಡುವ ಸೇವಕ
ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನಾವು ನೀಡಿದ ಪ್ರಣಾಳಿಕೆಯಂತೆ ನುಡಿದಂತೆ ನಡೆದ ಸರ್ಕಾರ ಎಂಬುವಂತೆ ಇದೀಗ ಮೊನ್ನೆ ಮಹಿಳಾ ಶಕ್ತಿ ಯೋಜನೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ್ದೆವೆ.ಅದೆ ರೀತಿಯಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜನತೆಗೆ ಸಮರ್ಪಕವಾಗಿ ಒದಗಿಸಿ .ಕ್ಷೇತ್ರದಲ್ಲಿ ಶಿಕ್ಷಣ ಆರೋಗ್ಯ .ರಸ್ತೆ ಚರಂಡಿ ಅಭಿವೃದ್ಧಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ ಸರ್ವೋತಮುಖ ಅಭಿವೃದ್ಧಿಗೆ ಶ್ರಮಿಸುವೆ .
ನಮ್ಮ ಮೇಲೆ ವಿಶ್ವಾಸವಿರಲಿ ಮತ ಹಾಕಿದ ಮತದಾರರಿಗೂ ಹಾಗೂ 1.ಲಕ್ಷದ 93 ಸಾವಿರ ಮತದಾರರಿಗೂ ಸರ್ವಸಮಾನದ ಆಡಳಿತ ನೀಡಲು ನಾನು ಬದ್ದವಾಗಿದ್ದೆನೆ .
ಅಣಬೂರು ಬಾಗದಲ್ಲಿ ಹೆಚ್ಚಾಗಿ ಕಾಡು ಪ್ರಾಣಿಗಳಿಂದ ರೈತರಿಗೆ ಹೊಲ ಗದ್ದೆಗಳಲ್ಲಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕೆಲ ರೈತರಿಗೆ ಪ್ರಾಣಿಗಳಿಂದ ಹಾನಿಯಾಗಿವೆ ಆದ್ದರಿಂದ ಕಾಡಿಂಚಿನ ಗ್ರಾಮಗಳ ಜನರು ಅರಣ್ಯ ಇಲಾಖೆ ನಿಯಮಗಳನ್ನು ಪಾಲಿಸಬೇಕು. ಈ ಬಾಗದ ಜನರ ಅಗತ್ಯ ಸೇವೆ ನೀಡಲು ನಿಮ್ಮ ಸಹಕಾರ ಅತ್ಯಗತ್ಯ ಎಂದು ಕರೆ ನೀಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಿಡಿಓ ಗೆ ಕ್ಲಾಸ್
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು
ಪೊನ್ ಸುಚ್ ಆಪ್ ಮಾಡಿತ್ತಿರಿ. ಜನರು ಅರ್ಜಿ ಸಲ್ಲಿಸಿ ಮೂರು ನಾಲ್ಕು ತಿಂಗಳಾದರು ಯಾಕೆ ಇಸ್ವತ್ತು ನೀಡುತ್ತಿಲ್ಲ ಏಕೆ ಎಂದು ಶಾಸಕರು ಪ್ರಶ್ನೆಸಿದರು.
ಗ್ರಾಪಂ ಯೋಜನೆಗಳುನ್ನು ಸರಿಯಾದ ರೀತಿಯಾಗಿ ಜನತೆಗೆ ತಲುಪಿಸಿ.ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಡಿ ಬಡವರಿಗೆ ಕೆಲಸ ನೀಡಿ ಇದು ನಮ್ಮ ಕಾಂಗ್ರೆಸ್ ಪಕ್ಷದ ಕನಸಿನ ಕೂಸು ಸಮಸ್ಯೆಯಿದ್ದರೆ ನಮ್ಮ ಗಮನಕ್ಕೆ ತನ್ನಿ ನೀವು ಪ್ರಭಾವಿಗಳಿಗೆ ಎನ್ ಎಂ ಆರ್ ಹಾಕಿ ಉಳಿದವರಿಗೆ ತಾರತಮ್ಯಧೊರಣೆ ಮಾಡಿದರೆ ನಾನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.ಗ್ರಾಪಂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿ ವರ್ಗದವರು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆ ಗ್ಯಾರಂಟಿ ಯೋಜನೆಗಳಿಗೆ ತೊಂದರೆಯಾಗದಂತೆ ಜನತೆಗೆ ಕೆಲ ದಾಖಲೆಗಳುನ್ನು ವಿಳಂಬ ಮಾಡದಂತೆ ಕೋಡಿ ಎಂದು ಸೂಚನೆ ನೀಡಿದರು.
ಜೋಳಿಗೆ ಹಾಕಿ ಆನಾಥ ನಿಧಿ ಸಂಗ್ರಹಣೆ ಮಾಡಲು ಮುಂದಾಗುವೆ.
ಬಡವರ ಚಿಕಿತ್ಸೆಗಾಗಿ ಹಣ ವಿನಿಯೋಗಿಸಿ ಕ್ರಾಂತಿ ಮಾಡಲು ಚಿಂತನೆ.
ಈ ಆನಾಥ ನಿಧಿ ಸಂಗ್ರಹಣೆ ಪ್ರಾಂರಂಭಿಸಿ ಪ್ರಥಮವಾಗಿ ನಾನು ಪ್ರತಿ ತಿಂಗಳು 50.ಸಾವಿರ ನೀಡುವೆ ನಂತರ ಹಣ್ಣವಂತ ಶ್ರೀಮಂತರ ಬಳಿ ಹೋಗಿ ಜೋಳಿಗೆ ಹಾಕಿ ಸಹಾಯ ಬೇಡುವೆ ಆ ನಿಧಿಯಿಂದ ಬಡವರ ಬಳಲಿದವರ ಚಿಕಿತ್ಸೆಗೆ ಹಣ ವಿನಿಯೋಗಿಸುವ ಸಂಕಲ್ಪ ಮಾಡಿದ್ದೆನೆ ಇದರ ಮೂಲಕ ಸಮಾಜದಲ್ಲಿ ಒಂದು ಕ್ರಾಂತಿ ಚಿಂತನೆ ಮಾಡುವೆ ಈ ಮೂಲಕ ಮನುಷ್ಯ ಮನುಷ್ಯನ ಮದ್ಯೆ ಬೆಸುಗೆ ಬೆಸೆಯೊಣ ಭಾರತೀಯರಾದ ನಾವು ನೊಂದವರ ನೋವಿನ ಕಷ್ಟಕ್ಕೆ ಮಿಡಿಯುವ ಶಾಸಕನಾಗುವೆ .ಮೊನ್ನೆ
ತೋರಣಗಟ್ಟೆ ಗ್ರಾಮದ ತುಳುಸಿ ಎಂಬ ಬಾಲಕಿ ಎರಡು ಕಾಲು ಕಳೆದುಕೊಂಡ ಅವರ ತಾಯಿ ನಮ್ಮ ಬಳಿ ಸಹಾಯ ಬೇಡಿ ಪ್ರವಾಸಿ ಮಂದಿರಕ್ಕೆ ಬಂದಂತಹ ಸಂದರ್ಭದಲ್ಲಿ ಈ ರೀತಿ ಎಲ್ಲಾರ ಬಳಿ ಹಣದ ಸಹಾಯ ಮಾಡಿದ ಪರಿಣಾಮ 10 ಸಾವಿರ ಸಂಗ್ರಹಣೆಯಾಗಿತ್ತು .ಸಂಬಂಧಿಸಿದ ಬೆಂಗಳೂರು ವೈದ್ಯರುಗಳೊಂದಿಗೆ ಮಾತನಾಡಿ ಆ ಬಾಲಕಿಗೆ ಕೃತಕ ಕಾಲು ಹಾಕಿಸಿ ಕೊಡುವೆ ಎಂದು ನಾನು ಭರವಸೆ ನೀಡಿದಂತೆ ಕೃತಕ ಕಾಲು ಜೋಡಣೆ ಮಾಡಿಸುವೆ ಎಂದರು.ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆಯಬಾರದು.
ಅಭ್ಯರ್ಥಿಗಳು ಸಾಲ ಸೂಲ ಮಾಡಿ ಚುನಾವಣೆಯಲ್ಲಿ ಅಭ್ಯರ್ಥಿಯಾಗುವರು. ಕಾರ್ಯಕರ್ತರು ಒಗಟ್ಟಿನಿಂದ ಬರುವ ಲೋಕಸಭಾ.ತಾಪಂ.ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕರಿಸಿ ಎಂದರು.
ಕಾಂಗ್ರೆಸ್ ರಾಜ್ಯ ಎಸ್ಟಿ ಘಟಕದ ರಾಜ್ಯಾಧ್ಯಕ್ಷ.ಕೆಪಿ ಪಾಲಯ್ಯ ಮಾತನಾಡಿದರು ದೇಶದಲ್ಲಿ ವಿಶೇಷವಾದ ಯೋಜನೆ ಉದ್ಯೋಗ ಖಾತ್ರಿ ಯೋಜನೆ ಬಡವರಿಗೆ ಯುಪಿಐ ಸರ್ಕಾರ ಮಾನ್ಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ಅವಧಿಯಲ್ಲಿ ಜಾರಿಗೆ ತಂದ ಕೇಂದ್ರದ ಸೋನಿಯ ಗಾಂಧಿಯವರ ಕನಸಿನ ಯೋಜನೆ ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವಿದ್ದಾಗ 60 ಸಾವಿರ ಕೋಟಿ ಹಣವನ್ನ ಈ ಯೋಜನೆಗೆ ಮೀಸಲಿಟ್ಟು ಬಡವರಿಗೆ ಹಿಂದೂಳಿದ ಎಸ್ಸಿ ಎಸ್ಟಿ ಜನರಿಗೆ ಬಹಳ ಉಪಯೋಗವಾಗಿತ್ತು.
ಆದರೆ ಬಿಜೆಪಿ ಸರ್ಕಾರ ದೇಶದಲ್ಲಿ ಕಳೆದ 9 ವರ್ಷಗಳಿಂದ ಆಡಳಿತ ನಡೆಸಿರುವ ಈ ಯೋಜನೆಡಿಯಲ್ಲಿ ಬಡವರು ಕೆಲಸ ಮಾಡುವುದೆ ದುಸ್ತರವಾಗಿ ಕಠಿಣ ನೀಯಮದ ಮೂಲಕ ಖಾತ್ರಿ ಯೋಜನೆಗೆ ಬಿಜೆಪಿ ಆಡಳಿತದಿಂದ ಬಡ ಖಾತ್ರಿಕೂಲಿಕಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಆದ್ದರಿಂದ ಶಾಸಕರು ರಾಜ್ಯಮಟ್ಟದ ಆರ್ ಡಿಪಿ ಅರ್ ಅಧಿಕಾರಿಗಳೊಂದಿಗೆ ಮಾತನಾಡಿ ಈ ಯೋಜನೆ ಸುಲಭವಾಗಿ ಸಿಗುವಂತೆ ಶಾಸಕರು ಮಾಡಬೇಕಾಗಿದೆ ಎಂದು ಸಲಹೇ ನೀಡಿದರು.ಈ ಬಾಗದಲ್ಲಿ ಮತದಾರರ ಹೆಚ್ವು ಮತ ನೀಡಿದ್ದಾರೆ.ಅವರಿಗೆ ಅಭಿನಂದನೆಗಳು ತಿಳಿಸಿದ ಅವರು
.ನಮ್ಮ ಶಾಸಕರಾದ ಬಿ ದೇವೆಂದ್ರಪ್ಪ ರವರು ಕೂಡ ಬಡ ಕುಟುಂಬದಲ್ಲಿ ಜನಿಸಿದ ಅವರಿಗೆ ವೈಬೋಗದ ಜೀವನ ಬೇಕಾಗಿಲ್ಲ ರೈತರು ಕೂಲಿಕಾರ್ಮಿಕರು ಕಷ್ಟಗಳ ಬಗ್ಗೆ ಅರಿತಿದ್ದಾರೆ.ಅವರ ತಂದೆಯವರು ಅಂದಿನ ದಿನಮಾನಗಳಲ್ಲಿ ಮಾವಿನ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸಿದ್ದುಂಟು ಆದ್ದರಿಂದ ಶಾಸಕರು ಬಡಜನರ ಕಷ್ಟಗಳಿಗೆ ಮಿಡಿಯುವರು .ಜನತೆ ಸಹಕಾರ ನೀಡಿದ ರೆ ಉತ್ತಮ ಕೆಲಸ ಮಾಡುವರು.
ಕಳೆದ ಮಾಜಿ ಶಾಸಕ ಎಸ್ ವಿ ರಾಮಚಂದ್ರ ಶುದ್ದ ನೀರಿನ ಘಟಕ ರಿಪೇರಿ ಮಾಡಲಿಲ್ಲ .ತಿಂಗಳಗೊಂದು ಸುಳ್ಳು ಹೇಳಿ ಹೋದರು . ದೊಡ್ಡ ಯೋಜನೆ ತಂದಿದ್ದೆನೆ ಎಂದು ಕೇವಲ 57 ಕೆರೆ ಅಪ್ಪರ್ ಭದ್ರ ಎಂದೆ ಬಿಟ್ಡಿ ಪ್ರಚಾರ ಭಾಷಣದಲ್ಲಿ ಜೂನ್ ಜುಲೈ ಜನವರಿ ಎಂದು ಸುಳ್ಳು ಹೇಳಿ ಸುಳ್ಳಿನ ಸರದಾರರಾಗಿದ್ದರು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್.ಮಾತನಾಡಿ ಸರ್ಕಾರದ ಐದು ಗ್ಯಾರಂಟಿಗಳುನ್ನು ಪರಿಣಾಮಕಾರಿಯಾಗಿ ಜನತೆಗೆ ತಲುಪಿಸುವಂತ ಪ್ರಮಾಣಿಕ ಸೇವೆಯನ್ನು ನಮ್ಮ ಶಾಸಕರು ಒದಗಿಸಲಿದ್ದಾರೆ. ಈ ಬಾಗದಲ್ಲಿ ಅತಿ ಹೆಚ್ಚು ಮತಗಳನ್ನು ಕಾಂಗ್ರೆಸ್ ಬಹುಮತ ನೀಡಿರುವ ಮತದಾರರಿಗೆ ಅತ್ಯಂತ ಕೃತಜ್ಞತೆ ಸಲ್ಲಿಸಿದರು.
ಕಾನನಕಟ್ಟೆ ಕೆ ಎಸ್ ಪ್ರಭು ಮಾತನಾಡಿ ಯಾರಿಂದಲೂ ಕದಿಯದ ವಸ್ತು ಶಾಸಕರಿಗೆ ನೀಡಿದ ಕೆ ಎಸ್ ಪ್ರಭು. ಪುಸ್ತಕ ಪ್ರೇಮಿ ಅಂಬೇಡ್ಕರ್ ಮಹತ್ವದಂತೆ ಪಾಲಿಸೊಣ ಎಂದ ಅವರು
ಇದುವರೆಗೂ ಕ್ಷೇತ್ರದಲ್ಲಿ ಆಡಳಿತ ನಡೆಸಿದ ಶಾಸಕರುಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಹಣ ತರುವಂತೆ ಹಣಪೀಡನೆಯಾಗಿದ್ದರಿಂದ ಅಧಿಕಾರಿಗಳು ಕೂಡ ಒತ್ತಡದ ಮದ್ಯದಲ್ಲಿ ನೌಕರಿ ಮಾಡುವಂತ ಪರಿಸ್ಥಿತಿಯಿತ್ತು ಆದರೆ ಅದು ತೊಲಗಿದೆ ಎಂದು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು. . ಈ ಸಂದರ್ಭದಲ್ಲಿ
ಕಾಂಗ್ರೆಸ್ ಪಕ್ಷದ ಅದ್ಯಕ್ಷ ಷಂಷೀರ್ ಆಹಮದ್ ಗ್ರಾಪಂ ಅದ್ಯಕ್ಷೆ ಕವಿತಾ ರೇಣುಕೇಶ್..ಗ್ರಾಪಂ ಉಪಾಧ್ಯಕ್ಷೆ ಸಣ್ಷ ನಾಗಮ್ಮ.ಮುಖಂಡ
ಬರ್ಕತ್ ಹಾಲಿ. ನಾಗರಾಜ್.ಗುರುಮೂರ್ತಿ .ಆಹಮದ್ ಆಲಿ.ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ. ತಿಪ್ಪೇಸ್ವಾಮಿ .ಯುವ ಮುಖಂಡ ವಿಜಯ್ ಕೆಂಚೊಳ್.ಅಣಬೂರು ರಾಜು ರೇಣುಕೇಶ್.. ಸೇರಿದಂತೆ ಹಾಜುರಿದ್ದರು.