ಜಗಳೂರು : ಒತ್ತಡ ಜೀವನದ ಮದ್ಯೆ ಆರೋಗ್ಯದ ಕಡೆ ಗಮನ ಕೊಡದೆ ಗ್ರಾಮೀಣ ಭಾಗದ ನಾಗರೀಕರು ತೊಂದರೆ ಎದುರುಸುತ್ತಿದ್ದಾರೆ ಅಂತವರಿಗೆ ಉಚಿತ ತಪಾಸಣಾ ಶಿಬಿರಗಳು ಸಹಕಾರಿಯಾಗಲಿವೆ ಎಂದು ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅನೂಪ್ ರಾಯಪಾಟಿ ಹೇಳಿದರು
ತಾಲ್ಲೂಕಿನ ಕಮಂಡಲಗೊಂದಿ ಗ್ರಾಮದಲ್ಲಿನ ವಾಸು ದೇವರೆಡ್ಡಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ
ಅರಿವು ನೆರವು ನಗರ ಗ್ರಾಮೀಣಾಭಿವೃದ್ಧಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ರಿ ಸಿದ್ದಮ್ಮನಹಳ್ಳಿ , ದೃಷ್ಟಿ ಕಣ್ಣಿನ ಆಸ್ವತ್ರೆ ಚಿತ್ರದುರ್ಗ , ಮಾನವ ಬಂಧುತ್ವ ವೇದಿಕೆ ಜಗಳೂರು ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಸಯಯೋಗದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಗ್ರಾಮೀಣ ನಗರ ಭಾಗದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಉತ್ತೇಜನಕ್ಕೆ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ ಇಂತಹ ಕಾರ್ಯಕ್ರಮಗಳು ಹೆಚ್ಚು ನೆಡೆಯಬೇಕಿದೆ ಈ ನಿಟ್ಟಿನಲ್ಲಿ ದೃಷ್ಟಿ ಕಣ್ಣಿನ ಆಸ್ವತ್ರೆ ಉಚಿತ ಶಿಬಿರಗಳನ್ನು ಮಾಡುವ ಮೂಲಕ ಸಹಕಾರಿಯಾಗಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಆರೋಗ್ಯ ಮೇಳ ಆಯೋಜಿಸುವ ಮೂಲಕ ಹಲವು ಖಾಯಿಲೆಗಳಿಗೆ ಚಿಕಿತ್ಸೆ ನೀಡಿಸಲಾಗುವುದು ಶಾಸಕರು ಸಹಕಾರದೊಂದಿಗೆ ಹಿಂದುಳಿದ ಶಾಲಾ ಕಾಲೇಜ್ ಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಲವು ಯೋಜನೆಗಳನ್ನ ರೂಪಿಸಿಕೊಂಡು ಬೇಕಾದ ಸಲಕರಣೆ ಗಳನ್ನ ನೀಡಲಾಗುವುದು ಎಂದು ಹೇಳಿದರು
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರವಿಂದ್ ಮಾತನಾಡಿ ಆರೋಗ್ಯ ಸ್ವಚ್ಚತ ದೃಷ್ಟಿಯಿಂದ ನರೇಯಾ ಹಾಗು ಗ್ರಾಮ ಪಂಚಾಯಿತಿ ಯೋಜನೆಯಡಿ ವಯುಕ್ತಿಕ ಶೌಚಾಲಯ ಶಾಲೆ , ಅಂಗನವಾಡಿ ,ಕಾಲೇಜ್ ಗಳಲ್ಲಿ ವಿದ್ಯಾರ್ಥಿ ವಿಧ್ಯಾರ್ಥಿನಿಯರ ಪ್ರತ್ತೇಕ ಶೌಚಾಲಯ ಶುದ್ದ ಕುಡಿಯುವ ನೀರು ಸೇರಿದಂತೆ ಹಲವು ಸೌಲಭ್ಯಗಳನ್ನ ಒದಗಿಸಲು ಜನಪ್ರತಿನಿಧಿಗಳ ಸಹಕಾರದೊಂದಿಗೆ ಕ್ರಿಯಾ ಯೋಜನೆ ತಯಾರಿಸಿ ಸೌಲಭ್ಯ ಕಲ್ಪಸಲಾಗುವುದು ಎಂದು ತಿಳಿಸಿದರು
ಇಂದಿನ ಶಿಬಿರದಲ್ಲಿ ಕಣ್ಣಿನಪೊರೆ , ದೃಷ್ಟಿಮಂದ , ದೂರ ದೃಷ್ಟಿಗೆ ಸಂಬಂದಿಸಿದಂತೆ ಹಲವು ತೊಂದರೆ ಒಳಗಾದ ಸುಮಾರು 83 ಜನರ ಪರೀಕ್ಷೆ ಮಾಡಲಾಯಿತು ಕೆಲವರಿಗೆ ಶಸ್ತ್ರಚಿಕಿತ್ಸೆ ಹಾಗು ಕನ್ನಡಕ ವಿತರಣೆಗಾಗಿ ಚಿತ್ರದುರ್ಗ ದೃಷ್ಟಿ ಕಣ್ಣಿನ ಆಸ್ವತ್ರೆಗೆ ಶಿಪಾರಸ್ಸು ಮಾಡಲಾಯಿತು
ಈ ಸಂದರ್ಭದಲ್ಲಿ ಕಮಂಡಲಗೊಂದಿ ಗ್ರಾ.ಪಂ.ಸದಸ್ಯರ ಪುತ್ರ ಸುದರ್ಶನ್ , ಹಿರೇಮಲ್ಲನಹೊಳೆ ಗ್ರಾ.ಪಂ.ಸದಸ್ಯ ಈರಮ್ಮ ಶಿವಣ್ಣ , ಸಿ.ಎಂ.ಹೊಳೆ ಸೊಸೈಟಿ ಕಾರ್ಯದರ್ಶಿ ಕೃಷ್ಣಪ್ಪ , ಅರಿವು ನೆರವು ಸಂಸ್ಥೆ ಅಧ್ಯಕ್ಷ ಸಿದ್ದಮ್ಮನಹಳ್ಳಿ ಬಿ.ಬಸವರಾಜ್ , ಮಾನವ ಬಂಧುತ್ವ ಸಂಚಾಲಕ ಧನ್ಯಕುಮಾರ್ , ದೃಷ್ಟಿ ಕಣ್ಣಿನ ಆಸ್ವತ್ರೆ ಸಿಬ್ಬಂದ್ದಿ ಶಂಕರಗೌಡ್ರು , ಸಬ್ರೀನಾ , ಕವನ , ಮೋಹನ್ ಕುಮಾರ್ , ಹನುಮಂತಪ್ಪ , ಮೇಘಾ , ಉಪನ್ಯಾಸಕರು ಪ್ರಸನ್ನಕುಮಾರ್ , ರವಿಕುಮಾರ್ , ರಂಗಪ್ಪ ಶ್ರೀನಿವಾಸ್ , ಸೇರಿದಂತೆ ಹಲವರು ಇದ್ದರು