:ಶುಕ್ರದೆಸೆ ನ್ಯೂಸ್
ಜಗಳೂರು ತಾಲ್ಲೂಕಿನ ಪ್ರತಿ ಇಲಾಖೆಯಲ್ಲಿಯು ಸಹ ನಮ್ಮ ಲೋಕಾಯುಕ್ತ ಇಲಾಖೆಯ ದೂರವಾಣಿ ನಂಬರ್ ಹೊಂದಿರುವ ನಾಮಫಲಕ ಆಳವಡಿಸುವಂತೆ ಅಧಿಕಾರಿಗಳಿಗೆ ಲೋಕಾಯುಕ್ತಾ ಎಸ್ ಪಿ .
ಎಂ ಎಸ್ ಕೌಲಾಪುರಿ ಸೂಚನೆ .
ತಾಪಂ ಸಭಾಂಗಣದಲ್ಲಿ ಲೋಕಾಯುಕ್ತ ಎಸ್ ಪಿ . ಎಂ ಎಸ್ ಕೌಲಾಪುರಿ ನೇತೃತ್ವದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು
ಸಾರ್ವಜನಿಕ ಇಲಾಖೆಯ ಲೋಪದೋಷಗಳ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸುವಂತೆ ನಮ್ಮ ಲೋಕಾಯುಕ್ತ ಪೊಲೀಸರಿಂದ ಪ್ರತಿ ತಿಂಗಳು ಅಹವಾಲು ಸ್ವೀಕಾರ ಮಾಡಲಿದ್ದೆವೆ.ಸಾರ್ವಜನಿಕರು ನಿಮ್ಮ ಕುಂದುಕೊರತೆಗಳ ಬಗ್ಗೆ ನಮಗೆ ಅರ್ಜಿ ಸಲ್ಲಿಸಿದರೆ ನಮ್ಮ ಇಲಾಖೆಯಿಂದ ಪರಿಶೀಲನೆ ನಡೆಸಿ ಸೂಕ್ತ ನ್ಯಾಯ ಕೋಡಿಸಲು ಅಗತ್ಯ ಸೇವೆ ನೀಡುತ್ತೆವೆ ಸಾರ್ವಜನಿಕರು ನಿರ್ಭಯವಾಗಿ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತ ಹನುಮಂತಾಪುರ ದಾದಪೀರ್ ಲೋಕಾಯುಕ್ತರಿಗೆ ದೂರು ನೀಡಿ ಹನುಮಂತಾಪುರ ಗ್ರಾಮ ಪಂಚಾಯತಿ ಪಿಡಿಓ ಕೊಟ್ರೇಶ್ ರವರು ಕರ್ತವ್ಯಕ್ಕೆ ಸರಿಯಾದ ರೀತಿ ಹಾಜರಾಗುತ್ತಿಲ್ಲ.ಸಾರ್ವಜನಿಕರಿಗೆ ಇಸ್ವತ್ತು ದಾಖಲೆಯನ್ನು ಸರಿಯಾದ ಸಮಯಕ್ಕೆ ನೀಡದೆ ಸತಾಯಿಸುತ್ತಿದ್ದಾರೆ .ಗ್ರಾಪಂ ಕಛೇರಿಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ ಎಂದು ಆರೋಪಿಸಿ ದೂರು ನೀಡಿದರು.
ಪ್ರಭಾರ ಸಾರ್ವಜನಿಕ ಕ್ಷೇತ್ರ ಶಿಕ್ಷಣ ಅಧಿಕಾರಿ ಸುರೇಶರೆಡ್ಡಿಗೆ ಲೋಕಾಯುಕ್ತ ಎಸ್ ಪಿ ಕ್ಲಾಸ್
.ಜಗಳೂರು ತಾಲೂಕಿನ ಚದರಗೋಳ ಸೇರಿದಂತೆ ವಿವಿಧ ಗ್ರಾಮದಲ್ಲಿ ಶಾಲಾ ಕೊಠಡಿಗಳು ಶಿಥಿಲವಾಗಿ ಕುಸಿಯುವ ಸ್ಥಿತ್ಥಿಯಲ್ಲಿದ್ದರು ಕೂಡ ಸಂಬಂಧಿಸಿದ ಕ್ಷೇತ್ರ ಶಿಕ್ಷಧಿಕಾರಿಗಳು ಮಾಹಿತಿ ಕಲೆ ಹಾಕಿ ನೂತನ ಕೊಠಡಿಗಳುನ್ನು ನಿರ್ಮಿಸಲು ಸರ್ಕಾರಕ್ಕೆ ವರದಿ ನೀಡುವ ಮೂಲಕ ಕೊಠಡಿ ಸ್ಥಾಪನೆಗೆ ಮುಂದಾಗದೆಯಿರುವುದು ನಿಮ್ಮ ಬೆಜವಾಬ್ದರಿತ ಮೇಲ್ನೋಟಕ್ಕೆ ಕಂಡು ಬರಲಿದೆ .
ನಮಗೆ ಸಾರ್ವಜನಿಕರಿಂದ ದೂರು ಬಂದ ಮೇಲೆ ನೀವು ಸ್ಥಳಕ್ಕೆ ಹೋಗಿ ಮಾಹಿತಿ ಕ್ರೂಡಿಕರಿಸುತ್ತೆವೆ ಎಂದು ನಮಗೆ ಹೇಳುತ್ತಿರಿ ಎಂದರೆ ತಮ್ಮ ಪ್ರಮಾಣಿಕ ನಿಷ್ಠೆ ಬಗ್ಗೆ ಯಾವ ರೀತಿ ಸೇವೆ ಮಾಡುತ್ತಿರಿ ಎಂದು ಪ್ರಭಾರ ಬಿಇಓ ಸುರೇಶ ರೆಡ್ಡಿಯವರಿಗೆ ತರಾಟೆ ತೆಗೆದುಕೊಂಡರು.
ಅಹವಾಲು ಸ್ವಿಕಾರ ಸಭೆಯಲ್ಲಿ ಮೊಬೈಲ್ ಪೋನ್ ಬಳಕೆಯಲ್ಲಿ ತಲೀನರಾಗಿದ್ದ ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದ ಪಿಡಿಓ ಗೆ ಲೋಕಾಯುಕ್ತರು ಗರಂ ಆಗಿ ಸಭೆಯಲ್ಲಿ ಶಿಸ್ತು ಕಾಪಾಡದೆ ಬೇಕಾಬಿಟ್ಟಿಯಾಗಿ ಹೊರಗಡೆ ಎದ್ದು ಹೋಗುವುದು ಹಾಗೂ ನೀವು ಪೋನ್ ನಲ್ಲಿ ತಲೀನರಾಗಿ ಸಭೆಯ ಗಾಂಬೀರ್ಯತೆಗೆ ನಡವಳಿಕೆ ಅಸಭ್ಯ ವರ್ತನೆ ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಕರ್ತವ್ಯವನ್ನು ಪ್ರಮಾಣಿಕವಾಗಿ ಸೇವೆ ಮಾಡಿದರೆ ನಿಮ್ಮ ನಿಷ್ಠೆ ಕರ್ತವ್ಯಕ್ಕೆ ಸಾರ್ವಜನಿಕರು ಕೋಡುವಂತ ಗೌರವ ಸಮಾಜದಲ್ಲಿ ಮತ್ತೊಂದಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಸಂತೋಷಕುಮಾರ್ .ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್.ತಾಪಂ ಇಓ ಚಂದ್ರಶೇಖರ್.ಲೋಕಾಯುಕ್ತ ಡಿವೈಎಸ್ಪಿ , ರಾಮಕೃಷ್ಣ. ಸಿಪಿಐ, ಇನ್‌ಸ್ಪೆಕ್ಟರ್ ಪ್ರಭುಸೂರಿನ, ಲೋಕಾಯುಕ್ತ ಪೊಲೀಸ್ ಸಿಬ್ಬಂದಿಗಳಾದ ಲಿಂಗರಾಜ್ ಸೇರಿದಂತೆ ಹಾಜರಿದ್ದರು.