ಜಗಳೂರು ವಿಧಾನಸಭಾ ಕ್ಷೇತ್ರದ ವಿಶಿಷ್ಟ ಯೋಜನೆ ನಮ್ಮ ಸರ್ಕಾರದ ಮಹತ್ವದ ಕನಸಿನ ಕೂಸು 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ತ್ವರಿತವಾಗಿ ಮುಗಿಸಿ ಕೆರೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಶಾಸಕ ಬಿ ದೇವೆಂದ್ರಪ್ಪ ಖಡಕ್ ಸೂಚನೆ ನೀಡಿದರು
ಶುಕ್ರದೆಸೆ ನ್ಯೂಸ್ :-
ಶನಿವಾರ ಹರಿಹರ ದಿಟೂರು ಬಳಿ ನಿರ್ಮಾಣವಾಗುತ್ತಿರುವ ಬಿಡ್ಜ್ ಕಮ್ ಬ್ಯಾರೆಜ್ ಜಾಕವಾಲ್ ಗೆ ಜಗಳೂರು ಕ್ಷೇತ್ರದ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಭೇಟಿ ನೀಡಿ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ವೀಕ್ಷಣೆ ನಡೆಸಿ ಅಧಿಕಾರಿಗಳಿಗೆ ಚುರುಕು ಮಟ್ಟಿಸಿದರು
:ಅಧಿಕಾರಿಗಳು ಮತ್ತು ಗುತ್ತಿಗೆದಾರರು ವಿಳಂಬ ಮಾಡದೆ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಿ ಶೀಘ್ರವೇ ಕೆರೆಗಳಿಗೆ ನೀರು ಹರಿಸಬೇಕು ಇಲ್ಲವಾದರೆ ಹೊರಾಟ ನಡೆಸಲು ಮುಂದಾಗುವೆ ಎಂದು ತರಾಟೆಗೆ ತೆಗೆದುಕೊಂಡರು. 650 ಕೋಟಿ ರೂಗಳ ಯೋಜನೆಯು ನಮ್ಮಂತಹ ಬರಪೀಡಿತ ಪ್ರದೇಶಕ್ಕೆ ಅತ್ಯಂತ ವರದಾನವಾಗಿದ್ದು ಇದು ಸಿರಿಗೆರೆ ಶ್ರೀಗಳು ತರಳಬಾಳು ಸವಿ ನೆನಪಿನ ಯೋಜನೆಯಾಗಿದೆ. ಜಗಳೂರಿನಲ್ಲಿ ತರಬಾಳು ಹುಣ್ಣಿಮೆ ನಡೆದ ಸಂದರ್ಭದಲ್ಲಿ ನಮ್ಮ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಈ ಯೋಜನೆಗೆ ಚಾಲನೆ ನೀಡಿದ್ದರು ಪುನ ಅವರಿಂದಲೆ ಉದ್ಗಾಟನೆ ಬಾಗ್ಯ ಕಾಣಲಿದೆ ಎಂದರು
ಅಧಿಕಾರಿಗಳು ನಮಗೆ ನೆಪಾ ಹೇಳದೆ ತುರ್ತಾಗಿ ಕೆರೆಗಳಿಗೆ ನೀರುಣಿಸಬೇಕು .ಸಿರಿಗೆರೆ ಗುರುಗಳು ನಮಗೆ ಕೈ ತೋರಿಸಿದಂತೆ ತಲೆ ಬಾಗಿ ಕೆಲಸ ಮಾಡುವೆ ನಾನು ನಮ್ಮ ರೈತರುನ್ನು ಕರೆ ತಂದು ಇಲ್ಲಿಯೆ ಧರಣಿ ಕೂರಿಸುವೆ ಅಧಿಕಾರಿಗಳು ನೆಪಾ ಹೇಳದಂತೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
57 ಕೆರೆ ನೀರಾವರಿ ಇಲಾಖೆ ಎಇಇ ಶ್ರೀಧರ ಮಾತನಾಡಿ,
ಈಗಾಗಲೇ 57 ಕೆರೆ ನೀರು ತುಂಬಿಸುವ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದ್ದು ಜಗಳೂರು ಕ್ಷೇತ್ರದ ತುಪ್ಪದಹಳ್ಳಿ ಕೆರೆಗೆ ಈಗಾಗಲೇ ಪ್ರಾಯೋಗಿಕವಾಗಿ ನೀರು ತುಂಬಿಸಲಾಗಿದೆ ಇನ್ನುಳಿದ 6 ಕಿಲೋ ಮಿಟರ್ ಉದ್ದಕ್ಕೆ ಬೇಕಾಗುವಷ್ಟು ಪೈಪುಗಳ ಕೊರತೆಯಿದ್ದು ಪೈಪುಗಳುನ್ನು ಸಪ್ಲೈ ಮಾಡಿದ ತಕ್ಷಣ ಕಾಮಗಾರಿ ಸಂಪೂರ್ಣ ಮುಗಿಸಿ 57 ಕೆರೆಗೆ ನೀರುಣಿಸುತ್ತೆವೆ.
ಮೆದಗಿನಕೆರೆ ಬಳಿಯಿರುವ ಗ್ಯಾಸ್ ಲೈನ್ ನ ಮೇಲೆ ನೆಪಾ ಹೇಳಿ ಕಾಮಗಾರಿ ವಿಳಂಬಧೊರಣೆ ಕಾಣುತ್ತಿದೆ.ಎಂದು ಪತ್ರಕರ್ತರು ಪ್ರಶ್ನೆಸಿದರು
.ಅಧಿಕಾರಿ ಉತ್ತರ:- ತಾಲ್ಲೂಕಿನ ಮೆದಗಿನಕೆರೆ ಗ್ಯಾಸ್ ಲೈನ್ ಕಾಮಗಾರಿಗೆ ₹ 2 ಕೋಟಿ ಬೃಹತ್ ಮೊತ್ತದ ವಿಮೆ ಅಗತ್ಯವಿದೆ.ಯಾವುದೇ ಇನ್ಸೂರೆನ್ಸ್ ಕಂಪನಿಗಳು ಮುಂದಾಗುತ್ತಿಲ್ಲ.ಶೀಘ್ರ ಸರಿಪಡಿಸಿ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಿ ಜುಲೈ ವೇಳೆಗೆ 17 ಕೆರೆಗಳಿಗೆ ನೀರು ಭರ್ತಿಮಾಡಲಾಗುವುದು ನಾವು ಇದೀಗ ಪರವಾನಿಗೆ ಅರ್ಜಿ ಸಲ್ಲಿಸಿದ್ದು ಪರವಾನಿಗೆ ಸಿಕ್ಕ ತಕ್ಷಣ ಅಲ್ಲಿ ಸ್ಥಗಿತವಾಗಿರುವ ಕಾಮಗಾರಿ ಪ್ರಾರಂಭಿಸಲಾಗುವುದು ಇನ್ನು 15 ದಿನದೊಳಗೆ ಪರವಾನಿಗೆ ಸಿಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
57 ಕೆರೆ ನೀರು ತುಂಬಿಸುವ ಕಾಮಗಾರಿ ನಿರ್ಮಿಸುವ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಶಾಸಕರು ನೇರವಾಗಿ ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಿದರು.
ತಾಲ್ಲೂಕಿನ. ರಸ್ತೆ ಮಾಚಿಕೆರೆ ಬಳಿಯಿರುವ 57 ಕೆರೆ ತುಂಬಿಸುವ ಪೈಪ್ ಗಳು ಮೇಲೆ ಕಾಂಕ್ರೀಟ್ ಹಾಕಿ ಪಿನಿಷಿಂಗ್ ಮಾಡುವ ಸ್ಥಳಕ್ಕೆ ಶಾಸಕರು ಬೇಟಿ ನೀಡಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹಲವು ಕಾರಣಗಳು ನೆಪಾ ಹೇಳಬೇಡಿ ನಿಮ್ಮ ಸಮಸ್ಯೆಗಳಿದ್ದರೆ ತಿಳಿಸಿ ಸುಖ ಸುಮ್ಮನೆ ಕಾಮಗಾರಿ ವಿಳಂಬ ಮಾಡದಂತೆ ಕೆಲಸ ಮಾಡಿ ಎಂದು ಮೇಲಾಧಿಕಾರಿಗಳಿಗೆ ಪೋನ ಕರೆ ಮೂಲಕ ನೇರವಾಗಿ ಶಾಸಕರು ಕ್ಲಾಸ್ ತೆಗೆದುಕೊಂಡರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಪಿ ಎಸ್ ಸುರೇಶ್ ಗೌಡ್ರು.ಹಾಲಿ ಅಧ್ಯಕ್ಷರಾದ ಷಂಷೀರ್ ಅಹಮ್ಮದ್,ಎಸ್.ಮಂಜುನಾಥ್,ಕೆಪಿಸಿಸಿ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,,ಗೋಡೆ ಪ್ರಕಾಶ್,ಗೌಸ್ ಪೀರ್,ಗುರುಸಿದ್ದನಗೌಡ,ಸಿ.ತಿಪ್ಪೇಸ್ವಾಮಿ,ಪ್ರಕಾಶ್ ರೆಡ್ಡಿ,ಸುಧೀರ್ ರೆಡ್ಡಿ,ಓಮಣ್ಣ,ವಿಜಯ್ .,ಗುತ್ತಿದುರ್ಗ ರುದ್ರೇಶ್,ಪ.ಪಂ ಸದಸ್ಯರಾದ ಶಕೀಲ್ ಅಹಮ್ಮದ್,ರಮೇಶ್ ರೆಡ್ಡಿ,ರವಿಕುಮಾರ್, ಸಣ್ಣ ತಾನಾಜಿ ಗೋಸಾಯಿ ಸೇರಿದಂತೆ ಹಾಜರಿದ್ದರು