ದಾವಣಗೆರೆ: ಸ್ನಾನ ಮಾಡಲು ಬಿಸಿನೀರಿಗಾಗಿ ಗ್ಯಾಸ್ ಗೀಸರ್ ಆನ್ ಮಾಡಿದ ವೇಳೆ ಗೀಸರ್ ಸ್ಫೋಟಗೊಂಡ ಪರಿಣಾಮ ಗಾಯಗೊಂಡಿದ್ದ ರಾಘವೇಂದ್ರ(42) ಇಂದು ಮೃತಪಟ್ಟಿದ್ದಾರೆ.
ಶನಿವಾರ ಈ ದುರ್ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇಂದು (ಮಾ.2) ಮುಂಜಾನೆ ಮೃತಪಟ್ಟಿದ್ದಾರೆ. ಹರಿಹರ ವಿದ್ಯಾನಗರ ನಿವಾಸಿಯಾದ ಅವರು ಅರೆಕಾಲಿಕ ಪತ್ರಕರ್ತರಾಗಿದ್ದು, ಇತ್ತೀಚೆಗೆ ಹೋಟೆಲ್ ಆರಂಭಿಸಿದ್ದರು. ಮೃತರು ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.