ಶುಕ್ರದೆಸೆ ನ್ಯೂಸ್:-
ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಸೇವೆ ಮೈಗೂಡಿಸಿಕೊಳ್ಳಿ:ಪ್ರಾಂಶುಪಾಲ ಡಾ.ಶಿವಾಜಿ ಕಟ್ಟಿ ಸಲಹೆ
ಜಗಳೂರು ಸುದ್ದಿ:ವಿದ್ಯಾರ್ಥಿದೆಸೆಯಿಂದಲೇ ಸಾಮಾಜಿಕ ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ.ಶಿವಾಜಿ ಕಟ್ಟಿ ಸಲಹೆ ನೀಡಿದರು.
ತಾಲೂಕಿನ ಅಣಬೂರು ಗ್ರಾಮದಲ್ಲಿ ಜಗಳೂರು ಪಟ್ಟಣದ ರಾಜರಾಜೇಶ್ವರಿ ಪ್ರಥಮದರ್ಜೆ ಕಾಲೇಜುವತಿಯಿಂದ ಹಮ್ಮಿಕೊಂಡಿರುವ ಎನ್ ಎಸ್ ಎಸ್ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ಪಠ್ಯೇತರ ಚಟುಟಿಕೆಗಳಾದ ಕ್ರೀಡೆ,ಎನ್ ಎಸ್ ಎಸ್,ಎನ್ ಸಿಸಿ,ಸ್ಕೌಟ್ ಅಂಡ್ ಗೈಡ್ಸ್ ,ಗಳಲ್ಲಿ ತೊಡಗಿಕೊಂಡರೆ ನಾಯಕತ್ವ ಗುಣ ಬೆಳೆಯುವುದು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಎನ್ ಎಸ್ ಎಸ್ ಶಿಬಿರದಿಂದ ಗ್ರಾಮೀಣ ಭಾಗದಲ್ಲಿನ ಜನಜೀವನ,ಗ್ರಾಮಗಳಲ್ಲಿನ ಕುಂದುಕೊರತೆಗಳ ಬಗ್ಗೆ ಮಾಹಿತಿ ಲಭ್ಯ ನಂತರ ಅವುಗಳನ್ನು ಕುರಿತು ಉನ್ನತ ವ್ಯಾಸಂಗದಲ್ಲಿ ಪ್ರಾಯೋಗಿಕ ಕಾರ್ಯಗಳನ್ನು ತಯಾರಿಸಲು, ಪ್ರಬಂಧಮಂಡನೆಗೆ ಅನುಕೂಲವಾಗಲಿದೆ ಎಂದರು.
ಗ್ರಾ.ಪಂ ಸದಸ್ಯ ಸೋಮಶೇಖರ್ ಮಾತನಾಡಿ,ಎನ್ ಎಸ್ ಎಸ್ ಶಿಬಿರಾರ್ಥಿಗಳು
ಗ್ರಾಮನೈರ್ಮಲ್ಯ,ಇತರೆ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮಸ್ಥರಿಗೆ ಮನವರಿಕೆಮಾಡುತ್ತಾರೆ.ಗ್ರಾಮಕ್ಕೂ ಸಹಕಾರಿ ಅವರ ಶಿಸ್ತು ಪ್ರತಿನಿತ್ಯದ ದಿನಚರಿ ಇತರರಿಗೆ ಮಾದರಿಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ಉಪನ್ಯಾಸಕ ಅರುಣ್ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.
ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಪತಿ ರೇಣುಕೇಶ್,ಶಿಕ್ಷಕ ಮಾರೇಂದ್ರ,ಉಪನ್ಯಾಸಕ ಕೃಷ್ಣಮೂರ್ತಿ,ಸೇರಿದಂತೆ ಶಿಬಿರಾರ್ಥಿಗಳು ಇದ್ದರು.