ದಾವಣಗೆರೆ ಜಿಲ್ಲೆ ಎರಡನೇ ಅವಧಿ ಗ್ರಾಮ ಪಂಚಾಯಿತಿ ಅಧ್ಯ ಕ್ಷ ಉಪಾಧ್ಯಕ್ಷರ ಹುದ್ದೆ ಮೀಸಲಾತಿ ಹಂಚಿಕೆ ಸಭೆ.
ಶುಕ್ರದೆಸೆ ನ್ಯೂಸ್:-
ದಾವಣಗೆರೆ :- ರಾಜ್ಯ ಚುನಾವಣಾ ಆಯೋ ಗದ ಸೂಚನೆಯಂತೆ ಜಿಲ್ಲೆಯ, (ಚುನಾವಣೆ ನಡೆದಿರುವ ಮತ್ತು ಅವಧಿ ಮುಗಿಯದ) ಆರು ತಾಲೂಕುಗಳಲ್ಲಿರುವ ಗ್ರಾಮ ಪಂಚಾ ಯಿತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರ
ಹುದ್ದೆಗಳ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯನ್ನು ಜಿಲ್ಲಾಡ ಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶಿಸಿರುತ್ತಾರೆ.
ಜೂನ್ 22 ರಂದು 10 ಗಂಟೆಗೆ ಚನ್ನಗಿರಿ ತಾ; ಗ್ರಾಮ ಪಂಚಾ ಯಿತಿ ಗ್ರಾ.ಪಂ ಸಂಖ್ಯೆ 61, ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾ; ಗ್ರಾಮ ಪಂಚಾಯಿತಿ ಗ್ರಾ.ಪಂ. ಸಂಖ್ಯೆ 17, ಸಂಜೆ 4 ಗಂಟೆಗೆ ಹರಿಹರ ಗ್ರಾಮ ಗ್ರಾ.ಪಂ ಸಂಖ್ಯೆ 23 ಗೆ ಮೀಸಲು ನಿಗದಿ ಮಾಡಲಾಗುತ್ತದೆ.
ಜೂನ್ 23 ರಂದು ಬೆಳಗ್ಗೆ 10 ಗಂಟೆಗೆ ದಾವಣಗೆರೆ ತಾ; ಗ್ರಾಮ ಪಂಚಾಯತಿ ಗ್ರಾ.ಪಂ ಸಂಖ್ಯೆ 42, ಮಧ್ಯಾಹ್ನ 2 ಗಂಟೆಗೆ ಹೊನ್ನಾಳಿ ತಾ; ಗ್ರಾಮ ಪಂಚಾಯಿತಿ ಗ್ರಾ.ಪಂ ಸಂಖ್ಯೆ 29, ಹಾಗೂ ಸಂಜೆ 4 ಗಂಟೆಗೆ ಜಗಳೂರು ತಾ; ಗ್ರಾಮ ಪಂಚಾಯತಿ ಗ್ರಾ.ಪಂ ಸಂಖ್ಯೆ 22 ಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ಪ್ರಕ್ರಿಯೆ ಕೈಗೊಂಡಿರುವುದರಿಂದ ಸಂಬಂಧಿಸಿದ ಗ್ರಾಮ ಪಂಚಾಯಿತಿ ಸದಸ್ಯರು ನಿಗಧಿತ ದಿನಾಂಕದಂದು ಸಮಯಕ್ಕೆ ಹಾಜರಾಗಲು ಅವರು ತಿಳಿಸಿದ್ದಾರೆ.
ಉಪಾಧ್ಯಕ್ಷರ ಹುದ್ದೆ ಮೀಸಲಾತಿ ಹಂಚಿಕೆ ಸಭೆ., ದಾವಣಗೆರೆ ಜಿಲ್ಲೆಯ ಎರಡನೇ ಅವಧಿ ಗ್ರಾಮ ಪಂಚಾಯಿತಿ ಅಧ್ಯಕ್ಷ