ಜಗಳೂರು ಪಟ್ಟಣದ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ರಾಜಯೋಗ ಭವನದಲ್ಲಿ ವಿಶ್ವ ಮಾದಕ ವಸ್ತು ಸೇವನೆ ನಿಷೇಧ ದಿನಚಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .

ಇದೇ ವೇಳೆ ಕಾರ್ಯಕ್ರಮ ಉದ್ಘಾಟನೆಯನ್ನು ತಹಾಶಿಲ್ದಾರ್ ಸಂತೋಷ ಕುಮಾರ್ ನೆರವೇರಿಸಿ ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದರು ಪ್ರಸ್ತುತ ದಿನಗಳಲ್ಲಿ ಯುವಜನಾಂಗ ಮಾದಕ ವಸ್ತುಗಳಿಗೆ ಮಾರುಹೋಗಿ ತಮ್ಮ ಜೀವನ ಹಾಳುಮಾಡಿಕೊಳ್ಳಬಾರದು ಸಮಾಜದಲ್ಲಿ ತಮ್ಮ ಜೀವನವನ್ನು ಕ್ಷಣಿಕ ಸುಖಬೋಗಕ್ಕೆ ಮಾರುಹೋಗದೆ ತಮ್ಮ ಸುಂದರ ಬದುಕುನ್ನು ರೂಪಿಸಿಕೊಂಡು ಸಮಾಜದಲ್ಲಿ ಮಾದರಿ ಜೀವನ ಸಾರ್ಥಕತೆ ಕಂಡುಕೊಳ್ಳುವಂತೆ ಚಿಂತನೆ ನಡೆಸಿ ಹಿರಿಯ ಆದರ್ಶಗಳು ಯುವಜನಾಂಗಕ್ಕೆ ಸಂದೇಶವಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

, . ಇವತ್ತಿನ ಜಗತ್ತಿನಲ್ಲಿ ಮೊಬೈಲ್ , ಇಂಟರ್ನೆಟ್ ಅತಿ ವೇಗವಾಗಿ ಚಲಿಸುತ್ತಿವೆಯೊ ಅದೇ ರೀತಿ ಮಾದಕ ವಸ್ತು ಕೂಡ ನಮ್ಮ ಜೀವನದಲ್ಲಿ ನಮ್ಮ ಭಾರತದ ಯುವ ಸಮೂಹ ಮಾದಕ ವಸ್ತುಗಳ ಬಳಕೆಯಿಂದ ಕ್ಯಾನ್ಸರ್ ರೋಗಗಳಿಗೆ ಬಲಿಯಾಗುತ್ತಿರುವುದು‌ ವಿಷಾದಕರ ಸಂಗತಿಯಾಗಿದೆ . ಇಂದಿನ ಯುವಕ ಯುವತಿಯರು ಸಮಾಜದ ಸ್ವಾಸ್ಥ್ಯ ವನ್ನು ಕಾಪಡಬೇಕಿದೆ .ತಹಶೀಲ್ದಾರ್ ಜಿ ಸಂತೋಷಕುಮಾರ್

ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಅಕ್ಕ ಭಾರತಿ ಮಾತನಾಡಿದರು ಇತ್ತಿಚಿನ ದಿನಮಾನಗಳಲ್ಲಿ ಯುವ ಸಮೂಹ ಮಾದಕ ವ್ಯಸನಿಗಳಾಗಿ ನಾನಾ ದುಷ್ಚಟಗಳಿಗೆ ಬಲಿಯಾಗುತಿದ್ದಾರೆ. ಮನುಷ್ಯನ ಮಾನಸಿಕ ಹಾಗೂ ದೈಹಿಕ ಸದೃಢವಾಗಿರಲು ಆದ್ಯತ್ಮ ಚಿಂತನೆ ಅಳವಡಿಸಿದರೆ ಸ್ವಾಸ್ಥ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಡಾ. ಅರವಿಂದ್ ಮಾತನಾಡಿದ ಅವರು ಇತ್ತೀಚಿನ ಯುವಕ ಯುವತಿಯರು ಮಾದಕ ವಸ್ತು ಸೇವನೆಯಿಂದ
ಮಾನಸಿಕ ಹಾಗೂ ದೈಹಿಕವಾಗಿ ಕಿನ್ನತೆಗೊಳಗಾಗಿ ಬಲಿಯಾಗುತಿದ್ದಾರೆ , ಈ ನಿಟ್ಟಿನಲ್ಲಿ ಮಾದಕ ವಸ್ತು ಮುಕ್ತ ಮಾಡುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣದಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ತೊರಂಗಲ್ ಸಂಚಾಲಕಿ ಅಕ್ಕ ರಾಜೇಶ್ವರಿ, ಪ್ರೇರಣಾ ಸಮಾಜದ ಸೇವಾ ಸಂಸ್ಥೆ ಸಹ ನಿರ್ದೇಶಕ ಫಾದರ್ ರೊನಾಲ್ಡ್ , ಜನ ಜಾಗೃತಿ ವೇದಿಕೆ ಸದಸ್ಯ ಡಾ. ಪಿ.ಎಸ್. ಅರವಿಂದ್ ಸೇರಿದಂತೆ ಸಿದ್ಧಾರ್ಥ ಬಿಇಡ್ ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಮತ್ತಿತರರಿದ್ದರು.

Leave a Reply

Your email address will not be published. Required fields are marked *

You missed

error: Content is protected !!