ದಿದ್ದಿಗೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ರೇಖಾ ರಾಜ್ ಕುಮಾರ್ ಅವಿರೋಧ ಆಯ್ಕೆ.
ಜಗಳೂರು ಸುದ್ದಿ:ತಾಲೂಕಿನ ದಿದ್ದಿಗಿ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ರೇಖಾ ರಾಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ತೆರವಾದ ಸಾಮಾನ್ಯ ಮೀಸಲು ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆಂಚಮ್ಮನಾಗ್ತಿಹಳ್ಳಿ ಗ್ರಾಮದ ರೇಖಾ ರಾಜ್ ಕುಮಾರ್ ಅವರು ಒಬ್ಬರೇ ನಾಮಪತ್ರಸಲ್ಲಿಸಿದ್ದು.ಒಟ್ಟು 18 ಜನ ಸದಸ್ಯರ ಸರ್ವಾನುಮತದಿಂದ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ಹಿಸಿದ ಲೊಕೋಪಯೋಗಿ ಎಇಇ ರಾಮಚಂದ್ರಪ್ಪ ಘೋಷಿಸಿದ್ದಾರೆ.
ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ವೀರಭದ್ರಯ್ಯ,ಜಯ ಶೀಲಾ ಪ್ರಕಾಶ ,ಪ್ರಶಾಂತ್ , ನಾಗಪ್ಪ , ರಾಧಮ್ಮ,ಪವಿತ್ರ ಆನಂದ್, ಮಹೇಶಪ್ಪ , ಬಾಲರಾಜ್,ವೆಂಕಟೇಶ್ ,ಗುತ್ತೆಮ್ಮ,ಸಾವಿತ್ರ ಶೇಖರ್ ,ಮುಕುಂದಪ್ಪ,ಮಾರಮ್ಮ , ಹೇಮಕ್ಕ ರಾಮಣ್ಣ, ಸೌಭಾಗ್ಯಮ್ಮ,ನೀಲಮ್ಮ,ರೇಣುಕಮ್ಮ,ಪ್ರಕಾಶ್ , ಮುಖಂಡರಾದ ಬಸವರಾಜ್ ದಿದ್ದಿಗೆ ,ಟಿ.ಪಿ.ನಾಗರಾಜ್,ಉರ್ಲುಕಟ್ಟೆ ಆನಂದ್ ,ಸೇರಿದಂತೆ ಇದ್ದರು.