Shukradeshe- Kannada News
ರಾಜಕಾರಣಿಗಳ ನಿದ್ದೆಗೆಡಿಸಿದ ಎಸ್ಪಿ ರಿಷ್ಯಂತ್ : ಬೆಣ್ಣೆ ನಗರಿಗೆ ನೋವಿನ ವಿದಾಯ ಹೇಳಿದ ಖಡಕ್ ಆಫೀಸರ್
ಭ್ರಷ್ಟರು, ಕ್ರಿಮಿನಲ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಎಸ್‌ಪಿ ರಿಷ್ಯಂತ್, ದಾವಣಗೆರೆ ಕರ್ತವ್ಯಕ್ಕೆ ವಿದಾಯ ಹೇಳಿ ಮಂಗಳೂರಿಗೆ ತೆರಳಿದ್ದಾರೆ. ದಾವಣಗೆರೆಯಲ್ಲಿ ಇದ್ದಷ್ಟು ಸಮಯ ಕರ್ತವ್ಯನಿಷ್ಠೆಗೆ ಹೆಸರಾಗಿದ್ದರು. ದಾವಣಗೆರೆಯಲ್ಲಿ ಕೋಮುಗಲಭೆ ಘಟನೆ ನಡೆದಾಗ ಅವುಗಳಿಗೆ ಸೂಕ್ತಪರಿಹಾರ ನೀಡುತ್ತಿದ್ದರು. ಬದ್ದತೆ ಪ್ರಾಮಾಣಿಕತೆ ಇವರ ಧ್ಯೇಯವಾಗಿದ್ದು, ಯಾರು ಏನೇ ಹೇಳಿದರೂ ಕರ್ತವ್ಯಕ್ಕೆ ಮೋಸ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಮಾನವೀಯತೆ ದೃಷ್ಟಿಯಲ್ಲಿಯೂ ಕೆಲಸ ಮಾಡಿದ ಉದಾಹರಣೆಗಳಿವೆ.
ಹೈಲೈಟ್ಸ್:
ಬೆಂಗಳೂರಿನಲ್ಲಿ ಎಂಕಾಂ ಓದಿ, ದೆಹಲಿಯಲ್ಲಿ ಚಾರ್ಟೆಡ್ ಅಕೌಂಟ್ ವೃತ್ತಿ ಮಾಡಿದ ರಿಷ್ಯಂತ್, ಗೆಳೆಯರೊಬ್ಬರನ್ನು ನೋಡಿ ನಾನು ಕೂಡ ಉನ್ನತ ಹುದ್ದೆಗೆ ಏರುವ ಕನಸು ಕಂಡು ರಾತ್ರಿ-ಹಗಲನ್ನೆದೇ ಓದಿ ಉನ್ನತ ಶ್ರೇಣಿಗೆ ಹೋದವರೇ ಎಸ್ಪಿ ರಿಷ್ಯಂತ್.
ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ತನ್ನದೇ ಸ್ಟೈಲ್‌ನಲ್ಲಿ ಸಮಾಜಘಾತುಕರನ್ನು ಎಡೆಮುರಿಕಟ್ಟಿದವರ ಸಾಲಿಗೆ ಎಸ್ಪಿ ರಿಷ್ಯಂತ್ ಸೇರುತ್ತಾರೆ.
ಇಂಟರ್‌ನ್ಯಾಷನಲ್ ನಟೋರಿಯಸ್ ಇಮ್ರಾನ್ ಸಿದ್ದಿಕ್ ಬಂಧನ. ಈತನಿಗೆ ಅನೇಕ ದೊಡ್ಡ ಅಧಿಕಾರಿಗಳು ಬೆಂಗಾವಲಾಗಿದ್ದರು. ಸಿದ್ದಿಕ್ ದೇಶ ಬಿಡಲು ತಯಾರಾಗಿ ಏರ್‌ಪೋರ್ಟ್‌ಗೆ ಹೋದರೂ ಹಿಡಿದು ತಂದು ರಿಷ್ಯಂತ್ ಜೈಲಿಗೆ ಹಾಕಿದ್ದರು.
!
ದಾವಣಗೆರೆ : ಅವರು ಕೋಟ್ಯಾಧಿಪತಿ. ಆದ್ರೆ ಕಾಮನ್ ಮ್ಯಾನ್. ತನ್ನ ಸಿಬ್ಬಂದಿಗಳು ಕಷ್ಟ ಅಂತ ಹೋದ್ರೆ ಎಂದಿಗೂ ಕೈ ಬಿಡದ ಅಧಿಕಾರಿ. ನನ್ನ ಜತೆ ನನ್ನ ಸಿಬ್ಬಂದಿಗಳೂ ಸಹ ಚೆನ್ನಾಗಿರಬೇಕೆಂಬ ಮನೋಭಾವ..ಆದ್ರೆ ತಪ್ಪು ಮಾಡಿದ್ರೆ ಅವ್ರ ಎಷ್ಟೇ ಆಪ್ತರಾದರೂ ಪರಪ್ಪನ ಅಗ್ರಹಾರಕ್ಕೆ ಹೋಗಲೇಬೇಕು. ಖಡಕ್ ಆಫೀಸರ್ಸ್ ಅಂತಲೇ ಹೆಸರುವಾಸಿಯಾದ ಇವರು ರೌಡಿಗಳಿಗೆ ಸಿಂಹಸ್ವಪ್ನ, ರೈತರ ಪಾಲಿಗೆ ದೇವರು, ರಾಜಕಾರಣಿಗಳಿಗೆ ವಿಲನ್.
ಸದ್ಯ ಬೆಣ್ಣೆ ನಗರಿಗೆ ನೋವಿನ ವಿದಾಯ ಹೇಳಿರುವ 2013ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಸಿ.ಬಿ.ರಿಷ್ಯಂತ ಕುರಿತು ಸಣ್ಣ ಪರಿಚಯ. ಇದರಲ್ಲಿ ಅತಿಶಯೋಕ್ತಿ ಇಲ್ಲ. ಅವರು ಇದ್ದದ್ದೆ ಹಾಗೆ.
ಇಟ್ಟಿಗೆ ಲಾರಿಗಳ ಧೂಳಿನಿಂದ ಗ್ರಾಮಸ್ಥರು ಸುಸ್ತು; ಲಾರಿ ಚಾಲಕರಿಂದ ಬೇಜವಾಬ್ದಾರಿ ವರ್ತನೆ
Davanagere: ಅಕ್ರಮದಲ್ಲಿ ಭಾಗಿಯಾಗುವ ಖಾಕಿ ಪಡೆಗೆ ನೂತನ ಎಸ್ಪಿ ಡಾ.ಕೆ.ಅರುಣ್ ಖಡಕ್ ವಾರ್ನಿಂಗ್
ಬೆಂಗಳೂರಿನಲ್ಲಿ ಎಂಕಾಂ ಓದಿ, ದೆಹಲಿಯಲ್ಲಿ ಚಾರ್ಟೆಡ್ ಅಕೌಂಟ್ ವೃತ್ತಿ ಮಾಡಿದ ರಿಷ್ಯಂತ್, ಗೆಳೆಯರೊಬ್ಬರನ್ನು ನೋಡಿ ನಾನು ಕೂಡ ಉನ್ನತ ಹುದ್ದೆಗೆ ಏರುವ ಕನಸು ಕಂಡು ರಾತ್ರಿ-ಹಗಲನ್ನೆದೇ ಓದಿ ಉನ್ನತ ಶ್ರೇಣಿಗೆ ಹೋದವರೇ ಎಸ್ಪಿ ರಿಷ್ಯಂತ್.
ಎಸ್ಪಿ ರಿಷ್ಯಂತ್ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಚಿಕ್ಕನಾಯಕನಹಳ್ಳಿಯಲ್ಲಿ ಪ್ರೋಬೇಷನರ್ ಆಗಿ ಸೇವೆ ಸಲ್ಲಿಸಿದ ಅವರು ಮಂಗಳೂರಿನಲ್ಲಿ ಎಎಸ್ಪಿಯಾಗಿ ಚೊಚ್ಚಲ ಪೋಸ್ಟಿಂಗ್ ಪಡೆದರು. ಮೈಸೂರಿಗೆ ವರ್ಗಾವಣೆಯಾಗುವ ಮುನ್ನ ಬಾಗಲಕೋಟೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದರು. ಬಳಿಕ ದಾವಣಗೆರೆ ಬಂದ ಎಸ್ಪಿ ರಿಷ್ಯಂತ್ ಪ್ರಸ್ತುತ ಕಡಲಕಿನಾರೆ ಮಂಗಳೂರಿಗೆ ಹೋಗಿದ್ದಾರೆ. ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ತನ್ನದೇ ಸ್ಟೈಲ್‌ನಲ್ಲಿ ಸಮಾಜಘಾತುಕರನ್ನು ಹೆಡೆಮುರಿಕಟ್ಟಿದವರ ಸಾಲಿಗೆ ಎಸ್ಪಿ ರಿಷ್ಯಂತ್ ಸೇರುತ್ತಾರೆ.
ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ತನ್ನ ಮಾವ ಮುನಿರತ್ನ ಚುನಾವಣೆಗೆ ನಿಂತ ಕಾರಣ ರಿಷ್ಯಂತ್ ಅವರನ್ನು ದಾವಣಗೆರೆಯಿಂದ ಸ್ಥಳ ನಿಯುಕ್ತಿಗೊಳಿದೇ ವರ್ಗಾವಣೆ ಮಾಡಲಾಗಿತ್ತು. ನಂತರ ಮಂಗಳೂರಿನಲ್ಲಿ ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಕ್ರಮ್ ಅಮತೆ ಅವರು ವೈದ್ಯಕೀಯ ರಜೆಯಲ್ಲಿ ತೆರಳಿದ ಹಿನ್ನಲೆಯಲ್ಲಿ ಸಿ.ಬಿ ರಿಷ್ಯಂತ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು. ಬಳಿಕ ಮಂಗಳೂರು ಎಸ್ಪಿಯಾಗಿ ಅಧಿಕೃತ ಸ್ಥಳ ನಿಯೋಜನೆ ಮಾಡಲಾಗಿದೆ.
ನಾನು ಮಂಗಳೂರಿನಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿದ್ದೇನೆ, ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಬಾಗಲಕೋಟೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದೇನೆ. ಪ್ರತಿಯೊಂದು ಜಿಲ್ಲೆ ವಿಶಿಷ್ಟವಾಗಿದೆ. ಎಲ್ಲಿಯೇ ಆಗಲಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವುದು ನನ್ನ ಮೊದಲ ಆದ್ಯತೆ ಎನ್ನುತ್ತಾರೆ ಎಸ್ಪಿ ರಿಷ್ಯಂತ್.
ಕರ್ನಾಟಕದಲ್ಲಿ ಉತ್ತಮ ಅಧಿಕಾರಿಯೆಂದೇ ಖ್ಯಾತ ನಾಮ ಪಡೆದಿರುವ ಎಸ್ಪಿ ಸಿ.ಬಿ.ರಿಷ್ಯಂತ್ ಸರ್ಕಾರಿ ಸೇವೆ ನಿಮಿತ್ತ ಸುಮಾರು 12 ವರ್ಷಗಳ ಕಾಲ ಕುಟುಂಬ ಬಿಟ್ಟು ಹೊರಗೇ ಇರುತ್ತಾರೆ. ಅವರಿಗೆ ಅಮ್ಮ ಪತ್ನಿ ಜತೆ ಇಲ್ಲದೇ ಇರುವ ಒಂಟಿತನ ಆಗಾಗ ಕಾಡುತ್ತಿರುತ್ತದೆ. ತಾಯಿ ಸಿ.ಭಾನುಮತಿ ಎಸ್ಪಿ ರಿಷ್ಯಂತ್‌ಗೆ ಮೊದಲ ಗುರು. ತಂದೆ ಕೃಷ್ಣ ಚೇತನ್ಯ ಸಾಧನೆಗೆ ನೀರೆರದವರು. ಪತ್ನಿ ಎನ್.ಭಾರತಿ ಬಿಬಿಎಂ ಓದಿದ್ದಾರೆ. ಈಗ ಎಲ್ಎಲ್‌ಬಿ ಮಾಡುತ್ತಿದ್ದಾರೆ. ಮಗಳು ತ್ರಿಶತಿಗೆ ಅಪ್ಪ ಎಂದರೆ ಪಂಚಪ್ರಾಣ. ಐಪಿಎಸ್ ಅಥವಾ ಐಎಎಸ್ ಓದುವ ಆಸೆ ಹೊಂದಿದ್ದಾಳೆ. ಇದು ಎಸ್ಪಿ ರಿಷ್ಯಂತ್ ಕುಟುಂಬದ ಚಿತ್ರಣ.
ಸದಾ ಲವಲವಿಕೆಯಿಂದ ಇರುವ ಎಸ್ಪಿ ರಿಷ್ಯಂತ್ ಸಿಬ್ಬಂದಿಗಳಿಗೆ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದರು. ಸಾರ್ವಜನಿಕರು ಎಂತಹದ್ದೇ ಕಷ್ಟ ಹೇಳಿದರೂ ಅದನ್ನು ಸಮಧಾನವಾಗಿ ಕೇಳಿ ಅದಕ್ಕೆ ಪರಿಹಾರ ನೀಡುವುದು ಅವರ ಹವ್ಯಾಸ. ಇನ್ನು ಮಾನವೀಯತೆವುಳ್ಳ ಎಸ್ಪಿ ರಿಷ್ಯಂತ್ ತನ್ನ ಸಿಬ್ಬಂದಿ ಕಷ್ಟ ಎಂದು ಬಂದಾಗ ಆರ್ಥಿಕವಾಗಿ ಕೈ ಹಿಡಿಯುತ್ತಿದ್ದರು.
ದಾವಣಗೆರೆಯಲ್ಲಿ ಕಮ್ಯೂನಿಯಲ್ ಘಟನೆ ನಡೆದಾಗ ಅವುಗಳಿಗೆ ಸೂಕ್ತಪರಿಹಾರ ನೀಡುತ್ತಿದ್ದರು. ಬೆಳ್ಳಗ್ಗೆ 10 ಕ್ಕೆ ಕಚೇರಿ ಆಗಮಿಸುತ್ತಿದ್ದ ಎಸ್ಪಿ ಸಂಜೆ ಆರುಗಂಟೆ ತನಕ ಕೆಲಸ ಮಾಡುತ್ತಿದ್ದರು. ಬದ್ದತೆ ಪ್ರಾಮಾಣಿಕತೆ ಇವರು ಧ್ಯೇಯವಾಗಿದ್ದು, ಯಾರು ಏನೇ ಹೇಳಿದರೂ ಕರ್ತವ್ಯಕ್ಕೆ ಮೋಸ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಮಾನವೀಯತೆ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದರು. ಸಮಯ ಬಂದಾಗ ಕೋಪಿಸಿಕೊಳ್ಳುತ್ತಿದ್ದರು. ನೋವಾದಾಗ ವೌನವಹಿಸುತ್ತಿದ್ದರು. ಸಮಸ್ಯೆ ಹೇಳಿಕೊಂಡು ಎಷ್ಟೇ ಜನರೂ ಬಂದ್ರೂ ಅಷ್ಟೇ ತಾಳ್ಮೆಯಲ್ಲಿ ಕೆಲಸ ಮಾಡುತ್ತಿದ್ದರು. ಇದಿಷ್ಟು ಎಸ್ಪಿ ಸಿ.ಬಿ.ರಿಷ್ಯಂತ್‌ರ ಒಂದಿಷ್ಟು ಕಥೆ-ವ್ಯಥೆ. ಇನ್ನು ಎಸ್ಪಿ ರಿಷ್ಯಂತ್ ಬೆಣ್ಣೆ ನಗರಿ ಬಿಟ್ಟು ಕಡಲನಾರೆಗೆ ಹೋಗಿದ್ದಾರೆ. ಅಲ್ಲಿನ ಸಮಾಜಘಾತುಕ ಅಲೆಗಳ ರುದ್ರತನಕ್ಕೆ ಪುಲ್‌ಸ್ಟಾಪ್ ಹಾಕುವ ಶಕ್ತಿ ಎಸ್ಪಿ ರಿಷ್ಯಂತ್‌ಗೆ ಇದ್ದು, ಜನ ನೋವಿನಿಂದ ಕಳುಹಿಸಿಕೊಡುತ್ತಿದ್ದಾರೆ.
ದಾವಣಗೆರೆಯಲ್ಲಿ ಎಸ್ಪಿ ರಿಷ್ಯಂತ್ ಮಾಡಿದ ಕೆಲಸವೇನು
*ಐಪಿಎಸ್ ಅಧಿಕಾರಿ ಕೃಪಾಕಟಕ್ಷವಿದ್ದ ಇಂಟರ್‌ನ್ಯಾಷನಲ್ ನಟೋರಿಯಸ್ ಇಮ್ರಾನ್ ಸಿದ್ದಿಕ್ ಬಂಧನ, ಈತ ಅಕ್ರಮ ಮರಳು ದಂಧೆಯಲ್ಲಿ ಪೊಲೀಸರಿಂದಲೇ ಹಣ ವಸೂಲಿ ಮಾಡುತ್ತಿದ್ದ. ಈತನಿಗೆ ಅನೇಕ ದೊಡ್ಡ ಅಧಿಕಾರಿಗಳು ಬೆಂಗಾವಲಾಗಿದ್ದರು. ಸಿದ್ದಿಕ್ ದೇಶ ಬಿಡಲು ತಯಾರಾಗಿ ಏರ್‌ಪೋರ್ಟ್‌ಗೆ ಹೋದರೂ ಹಿಡಿದು ತಂದು ರಿಷ್ಯಂತ್ ಜೈಲಿಗೆ ಹಾಕಿದ್ದರು.
*ರೈತರಿಂದ ಮತ್ತು ವರ್ತಕರಿಂದ ಮೆಕ್ಕೆಜೋಳ ಖರೀದಿ ಮಾಡಿ ಹಣ ಕೊಡದೇ ಮೋಸ ಮಾಡಿದ ಆರು ಆರೋಪಿಗಳನ್ನು ಬಂಧಿಸಿ ಸುಮಾರು ಎರಡು ಕೋಟಿ ಆರವತ್ತೇಂಟು ಲಕ್ಷದ 91 ಸಾವಿರ ಹಣವನ್ನು ಅನ್ನದಾತರಿಗೆ ವಾಪಸ್ ಕೊಡಿಸಿದ್ದರು. ಬ್ಯಾಂಕ್ ಉದ್ಯೋಗಿಯೊಬ್ಬ ಇದರಲ್ಲಿ ಭಾಗಿಯಾಗಿದ್ದ. ಈ ಪ್ರಕರಣವನ್ನು ಡಿಸಿಆರ್‌ಬಿ ಬಿ.ಎಸ್.ಬಸವರಾಜ್ ಭೇದಿಸಿದ್ದರು.
*ಅಂತರಾಜ್ಯ ಕಳ್ಳರಾದ ಓಜಿ ಕುಪ್ಪಂ ಗ್ಯಾಂಗ್‌ನ್ನು ಭೇದಿಸುವಲ್ಲಿ ಎಸ್ಪಿ ರಿಷ್ಯಂತ್ ಯಶಸ್ವಿಯಾಗಿದ್ದುಘಿ, 4 ಪ್ರಕರಣಗಳಲ್ಲಿ 21 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದರು.
*ಕೇರಳ ಮೂಲದ ವ್ಯಕ್ತಿಗೆ ನಕಲಿ ಚಿನ್ನ ನೀಡಿ 22 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದರು. ತರೀಕೆರೆ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದರು.
*ಎಲೆಬೇತೂರಿನಲ್ಲಿ ವೃದ್ಧ ದಂಪತಿಯ ಡಬಲ್ ಮರ್ಡರ್ ಮಾಡಿದ ಕೊಲೆಗಾರರನ್ನು ಹಿಡಿದು ಜೈಲಿಗಟ್ಟಿದ್ದರು.
*ದಾವಣಗೆರೆಯಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಒತ್ತು, ನಗರದಲ್ಲೇಡೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಸಿಸಿ ಕ್ಯಾಮೆರಾ, ಸಿಟಿ ವ್ಯಾಪ್ತಿಯಲ್ಲಿ ಎಲ್ಲೆ ಕ್ರೈಂ ನಡೆದರೂ ಕುಳಿತಲ್ಲೇ ವೀಕ್ಷಣೆ ಮಾಡುವ ವ್ಯವಸ್ಥೆ
*ಹಲವು ದಿನಗಳಿಂದ ಸ್ಥಳೀಯ ಠಾಣೆಗಳಲ್ಲಿ ಠಿಕಾಣಿ ಹೂಡಿದ್ದ ಕಾನ್‌ಸ್ಟೇಬಲ್‌ಗಳನ್ನು ಬೇರೆ ಕಡೆ ಎತ್ತಿ ಹಾಕಿದ ಕೀರ್ತಿ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದ ಎಸ್ಪಿ ರಿಷ್ಯಂತ್.
*ರಾತ್ರಿ ವೇಳೆ ವಸೂಲಿ, ಜೂಜು, ಅಕ್ರಮ ಮರಳು ದಂಧೆಗೆ ತಡೆ, ಕೆಳ ಹಂತದ ಪೊಲೀಸರಿಗೆ ಆಗಾಗ ಎಚ್ಚರಿಕೆ, ಆರೋಪವಿದ್ದರೇ ಸಂಪೂರ್ಣ ತನಿಖೆ ನಂತರ ಅಮಾನತು
*ಸೈಬರ್ ಕ್ರೈಂ, ಡ್ರಗ್ಸ್ ಜಾಗೃತಿ, ಗಾಂಜಾ ದಂಧೆಕೋರರ ವಶ
*ಮಾಜಿ ಸಚಿವ ರೇಣುಕಾಚಾರ್ಯ ತಮ್ಮನ ಮಗನ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ರಾತ್ರಿ-ಹಗಲು ಕೆಲಸ, ನಿದ್ದೆಯಿಲ್ಲದೇ ತನಿಖೆ
ಗಣ್ಯರ ಮೇಲೆ ಕೇಸ್
*ಬೆಟ್ಟಿಂಗ್ ಪ್ರಕರಣದಲ್ಲಿ ಹಾಲಿ ಚಿತ್ರದುರ್ಗ ಶಾಸಕ ವೀರೆಂದ್ರ ಪಪ್ಪಿ ಮೇಲೆ ಕೇಸ್
*ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಮೇಲೆ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆಂದು ಕೇಸ್
*ಅಕ್ರಮ ಮರಳು ದಂಧೆ ಆರೋಪ ಮಾಜಿ ಶಾಸಕ ರೇಣುಕಾಚಾರ್ಯ ವಿರುದ್ಧ ಕೇಸ್
*13 ರೌಡಿಗಳ ಗಡಿಪಾರು, ರೌಡಿ ಶೀಟರ್‌ಗಳಾದ ಮೊಟ್‌ಬೇಳ್ ಸೀನಾ, ಕಣುಮಗೆ ಚಳಿಬಿಡಿಸಿದ್ದ ಎಸ್ಪಿ
ಎಸ್ಪಿ ಎದುರಿಸಿದ್ದ ಸವಾಲು
*ಸಿದ್ದರಾಮೋತ್ಸವದ ವೇಳೆ ಬೈಪಾಸ್‌ನಲ್ಲಿ ಐದು ಕಿ.ಲೋ.ಮೀಟರ್‌ನಷ್ಟು ಟ್ರಾಫಿಕ್ ಜಾಮ್, ನಡೆದುಕೊಂಡು ಬಂದ ಗಣ್ಯರು, ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪ
*ಪ್ರಧಾನಿ ನರೇಂದ್ರಮೋದಿ ದಾವಣಗೆರೆಗೆ ಬಂದ ವೇಳೆ ಎಲ್ಲಿಯೂ ತೊಂದರೆಯಾಗದಂತೆ ಭದ್ರತೆ, ಆದರೂ ಪ್ರಧಾನಿ ಬರುವ ವೇಳೆ ಭದ್ರಾತಾ ಲೋಪವಾಗಿದೆಯೆಂಬ ಆರೋಪ
*ಶಿವಮೊಗ್ಗದಲ್ಲಿ ಪ್ರಧಾನಿ ಬಂದ ವೇಳೆ ಪತ್ರಕರ್ತರೊಬ್ಬರ ವಶ, ರಾಜ್ಯಾದ್ಯಂತ ಎಸ್ಪಿ ರಿಷ್ಯಂತ್ ವಿರುದ್ಧ ಪತ್ರಕರ್ತರ ಪ್ರತಿಭಟನೆ
*ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಬಳಿ ವಿಜಯಪುರ ಜೈಲಿನಿಂದ ಬಿಡುಗಡೆಯಾಗಿದ್ದ ಹಂದಿ ಅಣ್ಣಿ ಕೊಲೆಯ ಆರೋಪಿಗಳಾದ ಮಧು ಮತ್ತು ಆಂಜನೇಯ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಸ್ಕಾರ್ಪಿಯೋದಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಣಾಂತಿಕ ಆಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿತ್ತು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಪತ್ರಕರ್ತನೊಬ್ಬನ ಬಂಧನ, ಪತ್ರಕರ್ತರ ಆಕ್ರೋಶ.
*ಆಟೋಗೆ ಮೀಟರ್ ಅಳವಡಿಕೆ, ಭಾರೀ ವಾಹನ ಬರೋದನ್ನು ತಡೆಯೋದಕ್ಕೆ ಸಾಧ್ಯವಾಗದೇ ಇದ್ದದ್ದು.
*ಗಣ್ಯರನ್ನು ಅರೆಸ್ಟ್ ಮಾಡಿದ ವೇಳೆ ಪದೇ, ಪದೇ ರಾಜಕಾರಣಿಗಳ ಒತ್ತಡ