ಜಗಳೂರು ಪಟ್ಟಣದ ನಿವಾಸಿ ಟೈಲ್ಸ್ ಕೆಲಸ ಮಾಡುವ ರಾಜು ಎಂಬುವವರ ಪುತ್ರಿ ದ್ವಿತೀಯ ಪದವಿ ವಿದ್ಯಾರ್ಥಿ ಅಕ್ಷತಾ ಹೃದಯಾಘಾತದಿಂದ ಸಾವು
Posted by shukradeshe news jlr.27

ಜಗಳೂರು ಟೌನ್ ನಿವಾಸಿ ತಂದೆ ರಾಜು ತಾಯಿ ಅನಿತಾ ಎಂಬುವವರ ದಂಪತಿಗಳ ಪುತ್ರಿ ಅಕ್ಷತಾ ಎಂಬ ವಿದ್ಯಾರ್ಥಿ ಇತ್ತೀಚೆಗೆ ಎದೆ ನೋವು ಕಾಣಿಕೊಂಡ ಹಿನ್ನಲೆಯಲ್ಲಿ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮೊನ್ನೆ ಹೃದಯಾಘಾತ ಸಂಭಂಧಿಸಿದಂತ ಕಾಯಿಲೆ ಎಂದು ಕಂಡು ಬಂದ ಹಿನ್ನಲೆಯಲ್ಲಿ ಹೃದಯ ಆಪರೇಷನ್ ಚಿಕಿತ್ಸೆ ಕೋಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುದ್ದಾದ ಮಗಳು ಜಗಳೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಪದವಿ ಓದುವ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ನಿನ್ನೆ ಮಧ್ಯಾಹ್ನ ಸೋಮವಾರ 3 ರ ಸಮಯದಲ್ಲಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ .

ರಾಜುರವರು ಇತ್ತೀಚೆಗೆ ಜಗಳೂರು ಗೊಲ್ಲರಹಟ್ಟಿ ರಸ್ತೆಯ ಮನೆಯೊಂದರಲ್ಲಿ ವಾಸವಾಗಿದ್ದರು ಇವರು ಟೈಲ್ಸ್ ಕೆಲಸ ಮಾಡಿಕೊಂಡು ಕೂಲಿ ನಾಲಿ ಮಾಡಿಕೊಂಡು ತನ್ನ ಮಗಳ ಅಕ್ಷತಾಳ ಉತ್ತಮ ವಿದ್ಯಾಬ್ಯಾಸ ಮಾಡಿಸುವ ಕನಸು ಕಂಡಿದ್ದರು .
ಆದರೆ ಮುದ್ದಾದ ಮಗಳ ಕನಸು ಕಮರಿಹೋಗಿತ್ತು ಎಂದು ಅವರ ತಂದೆ ತಾಯಿ ಬಂಧುಗಳ ಗೋಳಿನ ರೋದನವು ಕರುಳು ಚುರುಕ್ಕೆನ್ನುವಂತಿತ್ತು. ಬಾಳಿ ಬೆಳೆಯಬೇಕಾದ ವಿದ್ಯಾರ್ಥಿ ಜೀವವನ್ನೆ ಬಲಿ ತೆಗೆದುಕೊಂಡ ವಿಧಿ ಹೃದಯಾಘಾತದಿಂದ ಸಾವು ಆಗಿರುವುದು ದುಖದ ಸಂಗತಿಯಾಗಿದೆ.

ಒಟ್ಟಾರೆ ಇತ್ತಿಚಿನ ದಿನಗಳಲ್ಲಿ ವಯಸ್ಸಿಗೆ ಲೆಕ್ಕಾವಿಲ್ಲದಂತೆ ಕಾಯಿಲೆಗಳು ಸರ್ವೆಸಾಮಾನ್ಯವಾಗಿರುವುದು‌ ಯಾವಾಗ ಯಾರಿಗೆ ಬೇಕಾದರು ಯಾವ ಕಾಯಿಲೆಗಳು ಕೂಡ ಬರಬಹುದು ವಯಸ್ಸಿನ ಮಿತಿಯಿಲ್ಲ ಆದರೆ ತಮ್ಮ ಆರೋಗ್ಯ ತಮ್ಮ ಕೈಯಲ್ಲಿ ಸುಧಾರಿಸಿಕೊಳ್ಳುವ ನೀಯಮಗಳುನ್ನು ಎಂದು ಮರೆಯಬಾರದು ಎಂಬುದ ತಜ್ಞರ‌ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *

You missed

error: Content is protected !!