ಮಾರ್ಚ್ 10 ಶುಕ್ರವಾರ ಮಡ್ರಹಳ್ಳಿ ಚೌಡೇಶ್ವರಿ ಜಾತ್ರಾ ಮಹೋತ್ಸವ
ಜಗಳೂರು ಸುದ್ದಿ:ತಾಲೂಕಿನ ಗುರುಸಿದ್ದಾಪುರ ಯಾನೆ ಮಡ್ರಹಳ್ಳಿ ಶಕ್ತಿದೇವತೆ ಚೌಡೇಶ್ವರಿ ದೇವಿ ಗಡ್ಡೆ ತೇರು ಮಾರ್ಚ್ 10 ಶುಕ್ರವಾರದಂದು ಜರುಗಲಿದೆ ಎಂದು ದೇವಸ್ಥಾನ ಪೂಜಾರಿಗಳು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 11 ಶನಿವಾರ ರಂಗಯ್ಯನಬೆಟ್ಟಕ್ಕೆ ಹೋಗಿ ಬರುವುದು.ಮಾರ್ಚ್ 12 ನೇ ಭಾನುವಾರ ಗಂಗಾಪೂಜೆ ನಂತರ ಗುಡಿದುಂಬುವುದು ಮಾರ್ಚ್
13 ನೇ ಸೋಮವಾರ ಶ್ರೀದೇವಿ ಗ್ರಾಮಕ್ಕೆ ಬರುವುದು.
ಮಾರ್ಚ್ 7 ರಂದು ಹಳ್ಳಿಚೌಡೇಶ್ವರಿ ದೇವಿ ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರೆಯಲ್ಲಿ ವಿಶೇಷ ಆಹ್ವಾನಿತರು ಶಾಸಕ ಎಸ್ ವಿ ರಾಮಚಂದ್ರ,ಮಾಜಿ ಶಾಸಕ ಎಚ್.ಪಿ.ರಾಜೇಶ್ ಆಗಮಿಸಲಿದ್ದಾರೆ.
ಭಕ್ತಾದಿಗಳು ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕು.ಆಗಮಿಸುವ ಭಕ್ತಾದಿಗಳಿಗೆ ನೆರಳು,ಕುಡಿಯುವ ನೀರಿನ ಸೌಲಭ್ಯವಿರುತ್ತದೆ.ಜಾನುವಾರುಗಳಿಗೆಕೆರೆಯಲ್ಲಿ ನೀರು ಭರ್ತಿಯಾಗಿವೆ ಎಂದು ದೇವಸ್ಥಾನದ ಪೂಜಾರಿಗಳಾದ ಸಣ್ಣಗೌಡ್ರು ಹಳ್ಳೆಪ್ಪ,ಬೊಮ್ಮಣ್ಣ,ಶ್ರೀನಿವಾಸ್ ,ಮಿಲ್ಟ್ರಿ ಹನುಮಂತಪ್ಪ,ಕಂಚ್ಪಳ ಹನುಮಂತಪ್ಪ,ಎಂ.ಕಾಡಪ್ಪ ಮಾಹಿತಿ ನೀಡಿದ್ದಾರೆ.ಈ ವೇಳೆ ಗ್ರಾಪಂ ಪಿಡಿಓ ಅಧಿಕಾರಿ ಶ್ರೀನಿವಾಸ ಪತ್ರಿಕೆಯೊಂದಿಗೆ ಮಾತನಾಡಿ ಜಾತ್ರಮಹೋತ್ಸದ ಅಂಗವಾಗಿ ಗ್ರಾಮದಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ಸ್ಚಚತೆಗೆ ಆದ್ಯತೆ ನೀಡಿ ಭಕ್ತಾದಿಗಳಿಗೆ ಸೂಕ್ತ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು