posted by
Shukradeshenews
Kannada News jlr July 2
Published by shukradeshenews Kannada
ಜಾಗತಿಕರಣ ಜಗತ್ತಿನ ಅಭಿವೃದ್ಧಿ ನೆಪದಲ್ಲಿ ಪರಿಸರ ವಿನಾಶ ಶಾಸಕ ಬಿ ದೇವೆಂದ್ರಪ್ಪ ವಿಷಾದ .
ಜಾಗತಿಕರಣ ಜಗತ್ತಿನ ಅಭಿವೃದ್ಧಿ ನೆಪದಲ್ಲಿ ಪರಿಸರ ವಿನಾಶ ಶಾಸಕ ಬಿ ದೇವೆಂದ್ರಪ್ಪ ವಿಷಾದ .
ಸಾಲು ಮರದ ತಿಮ್ಮಕ್ಕ ತಾನು ನೀರು ಹಾಕಿ ಪೋಷಿಸಿ ಬೆಳೆಸಿದ ಮರಗಳನ್ನೆ ಮಕ್ಕಳು ಎಂದು ಭಾವಿಸಿದ ಮಹಾತಾಯಿ.
ಜಗಳೂರು ಪಟ್ಟಣದ ನಾಲಂದ ಕಾಲೇಜು ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಪರಿಸರ ಮತ್ತು ಸಸ್ಯ ಸಂರಕ್ಷಣೆ ವನಮೋತ್ಸವ ಕಾರ್ಯಕ್ರಮದ ಅಂಗವಾಗಿ ಶಾಸಕರು ಸಸಿ ನೆಟ್ಟು ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ಮನುಷ್ಯನು ಗಿಡ ಮರ ಪರಿಸರ ಸಂರಕ್ಷಣೆಗೆ ಮುಂದಾಗುವುದು ಅಗತ್ಯವಾಗಿದೆ.
, ಮಾನವನ ಉಸಿರೆ ಗಿಡ ಮರ ಸಸ್ಯಗಳು ನಮಗೆ ಆಮ್ಲಜನಕ ನೀಡಿ ಹಸಿರೆ ಉಸಿರಾಗಿದ್ದು ಅವುಗಳು ವರದಾನವಾಗಿವೆ. .ಪ್ರಕೃತಿ ಮತ್ತು ಗಿಡ ಮರಗಳು ಮತ್ತು ಸಸ್ಯಗಳು ನಮ್ಮ ಜೀವನದ ಸಮತೋಲನವನ್ನು ಕಾಪಾಡುತ್ತವೆ. ಪ್ರಕೃತಿಯ ಸೌಂದರ್ಯದ ನೋಟವು ಮರಗಳು ಮತ್ತು ಸಸ್ಯಗಳಿಂದ ಮಾತ್ರ ಸಿಗುತ್ತದೆ.ಆದರೆ ಆಧುನಿಕ ಅಭಿವೃದ್ಧಿ ಭರಾಟೆಯಲ್ಲಿ ಮರಗಳು ಕಡಿತಲೆ ಮಾನವ ಮತ್ತು ಜೀವ ಸಂಕುಲಗಳಿಗೆ ಹಾನಿ ಎಂದು ಅತಂಕ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಅರಣ್ಯ ಇಲಾಖೆ ವನಮಹೋತ್ಸವ ಕಾರ್ಯಕ್ರಮದ ಮೂಲಕ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು..
ಮನುಷ್ಯರಾದ ನಮಗೆ ಅರಿವಿಲ್ಲದೆ ಗಿಡ ಮರಗಳುನ್ನು ಮಾರಣಹೋಮ ಮಾಡಿ ಮಳೆಗಾಗಿ ಮುಗಿಲು ನೋಡುವುದಕ್ಕು ಮುನ್ನ ಗಿಡ ಮರ ಸಸ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಿದೆ ಎಂದು ತಿಳಿಯುವುದು ಅಗತ್ಯವಿದೆ ಎಂದು ಕರೆ ನೀಡಿದರು.
ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಆರ್ ಎಪ್ ಶ್ರೀನಿವಾಸ ಮಾತನಾಡಿ ನಾವು ನಮ್ಮ ಇಲಾಖೆಯಿಂದ ಪ್ರತಿ ವರ್ಷ ಅರಣ್ಯ ನೆಡುತೋಪು ಅರಣ್ಯಿಕರಣ ಯೋಜನಡಿಯಲ್ಲಿ ಸಸ್ಯಗಳುನ್ನು ನಾಟಿ ಮಾಡಿ ಸಸಿ ನೆಟ್ಟು ಬೆಳೆಸುತ್ತಿದ್ದೆವೆ.ನೆಟ್ಟ ಸಸಿಗಳುನ್ನು ನಮ್ಮ ಇಲಾಖೆ ಸಿಬ್ಬಂದಿಗಳು ಸಂರಕ್ಷಣೆ ಮಾಡುವುದರ ಜೊತೆಗೆ ಸಾರ್ವಜನಿಕರು ಕೈಜೊಡಿಸಿದರೆ ಇಲಾಖೆ ಗುರಿ ಮತ್ತು ಉದ್ದೇಶ ಸಾರ್ಥಕ . ಈ ಬಾರಿ ಸರ್ಕಾರ ಸುಮಾರು ಒಂದು ಕೋಟಿ ಸಸಿ ನೆಡುವ ಪೂರ್ವ ತಯಾರಿ ನಡೆಸಿದೆ.ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಬಗ್ಗೆ ತಿಳಿಯುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.ಇಲಾಖೆ ವತಿಯಿಂದ ಪಟ್ಟಣದ ವಿವಿಧ ಶಾಲಾ ಕಾಲೇಜುಗಳಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಸಿ ನೆಟ್ಟು ಇನ್ನಿತೆರೆ ಶಾಲೆಗಳಲ್ಲಿ ಸಪ್ತಾಹ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಅಮರ ಭಾರತಿ ವಿದ್ಯಾಕೇಂದ್ರದ ಮುಖ್ಯಸ್ಥರಾದ ಮಧು . ಅಮರ ಭಾರತಿ ವಿದ್ಯಾ ಕೇಂದ್ರದ ಆಡಳಿತಾಧಿಕಾರಿ ಶ್ವೇತಾ.ಉಪವಲಯ ಅರಣ್ಯಾಧಿಕಾರಿ ಚೇತನ್ . ರಶ್ಮಿ ,ನಿಸಾರ್ ಅಹಮ್ಮದ್, ,ಗಸ್ತು ಅರಣ್ಯಾಧಿಕಾರಿಗಳಾದ ರಾಜಣ್ಣ .ಸರ್ಕಾರಿ ಪ್ರೌಢಶಾಲಾ ಮುಖ್ಯಸ್ತರು ಹಾಗೂ ಬಿ ಆರ್ ಸಿ .ಡಿ ಡಿ ಹಾಲಪ್ಪ,ಎಚ್.ನಾಗರಾಜ್, ಮುರಡಿಸ್ವಾಮಿ,ಎನ್.ಎಚ್.ಅಂಜಿನಪ್ಪ .ಸಿಬ್ಬಂದಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮಹಮ್ಮದ್ ಗೌಸ್,ತಮಲೇಹಳ್ಳಿ ತಿಮ್ಮಣ್ಣ.ಶೇಖರಪ್ಪ.ಕಾ ನಿ ಪ ಸ ಅದ್ಯಕ್ಷ ಚಿದಾನಂದ ಸೇರಿದಂತೆ
ವನಮೋತ್ಸವ ಸಸಿ ನೆಡುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಾಗೂ ಪತ್ರಕರ್ತರು ಸಹ ಭಾಗವಹಿಸಿದ್ದರು .
.