posted by shukradeshenews jul 2 at jlr news press meet that sang

———

ಸರಕಾರಿ ಬಸ್ ಸೌಕರ್ಯಕ್ಕಾಗಿ ರೈತ ಸಂಘಟನೆಯಿಂದ ಜು.3 ರಂದು ಪ್ರತಿಭಟನೆ.ಕರ್ನಾಟಕ ರಾಜ್ಯ ರೈತ ಸಂಘ (ಹುಚ್ಚವ್ವನಹಳ್ಳಿ‌ಮಂಜುನಾಥ್  ಬಣ) ದ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಸಿ.ಎಂ.ಹೊಳೆ

ಜಗಳೂರು ಸುದ್ದಿ:ತಾಲೂಕಿನ ಗ್ರಾಮೀಣ ಭಾಗಗಳಿಗೆ ಸರಕಾರಿ ಸಾರಿಗೆ ಸೌಕರ್ಯ ಒದಗಿಸಲು ಒತ್ತಾಯಿಸಿ ಜು.3 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ (ಹುಚ್ಚವ್ವನಹಳ್ಳಿ‌ಮಂಜುನಾಥ್  ಬಣ) ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಸಿ.ಎಂ.ಹೊಳೆ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಕಳೆದರೂ ಸಮರ್ಪಕ ಸಾರಿಗೆ ಸೌಕರ್ಯವಿಲ್ಲದೆ ತಾಲೂಕಿನ ಬಹುತೇಕ ಗ್ರಾಮಗಳು ವಂಚಿತವಾಗಿವೆ.ಅದರಲ್ಲಿ ಚಿಕ್ಕಬನ್ನಿಹಟ್ಟಿ,ಕೆಳಗೋಟೆ,ಮಾಗಡಿ,ಗೋಪಾಲಪುರ,ಕಟ್ಟಿಗೆಹಳ್ಳಿ,ಸೇರಿದಂತೆ ವಿವಿಧ ಗ್ರಾಮಗಳು ಸರಕಾರಿ ಬಸ್ ಗಳನ್ನೇ ಕಂಡಿಲ್ಲ.ಮುಖ್ಯ ರಸ್ತೆಗಳಿಗೆ‌ ಆಗಮಿಸಿ ಬಸ್ ಗಳಲ್ಲಿ ಸಂಚರಿಸಲು ಹದಗೆಟ್ಟ ರಸ್ತೆಗಳಲ್ಲಿ 1ಕಿಮೀ ಗೂ ಅಧಿಕವಾಗಿ ಕಾಲ್ನಡಿಗೆಯಲ್ಲಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ.ಇದರಿಂದ ರೈತಕಾರ್ಮಿಕರ,ವಿದ್ಯಾರ್ಥಿಗಳ,ಮಹಿಳೆ,ವಯೋವೃದ್ದರ ಗೋಳು ಹೇಳತೀರದಾಗಿದೆ.ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಬೇಡಿಕೆ ಈಡೇರಿಲ್ಲ.ಸಂಬಂಧಿಸಿದ ಅಧಿಕಾರಿಗಳು ಕೆಎಸ್ ಆರ್ ಟಿಸಿ ಡಿಪೋ ನೆಪಯೊಡ್ಡಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸ್ವಾತಂತ್ರ್ಯ ಬಂದು ಸುಮಾರು 75 ವರ್ಷ ಕಳೆದರೂ ಕೂಡ ನಮ್ಮ ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಬಸ್ ಸೌಕರ್ಯ ಮರೀಚಿಕೆಯಾಗಿದೆ.ಸರ್ಕಾರ ನೂತನವಾಗಿ ಗ್ಯಾರಂಟಿ ಶಕ್ತಿ ಯೋಜನೆಯಿಂದ ನಮ್ಮ ಬಾಗದ ಅತಿ ಹೆಚ್ಚು ಮಹಿಳೆಯರು ಸಮರ್ಪಕ ಸಾರಿಗೆ ಸೌಕರ್ಯವಿಲ್ಲದೆ ವಂಚಿತವಾಗಿವೆ‌. ಶೀಘ್ರವೆ ಡಿಪೋ ಆರಂಭ ಮಾಡಲು ಮುಂದಾಗುವಂತೆ ಒತ್ತಾಯಿಸಿದ್ದಾರೆ.

ರೈತ ಮುಖಂಡ ಚಿಕ್ಕಬನ್ನಿಹಟ್ಟಿ ವಿರೇಶ್ ಮಾತನಾಡಿ,ತಾಲೂಕಿನ ಚಿಕ್ಕಬನ್ನಿಹಟ್ಟಿ,ಖಿಲಾಕಣ್ಣಕುಪ್ಪೆ,ಸೇರಿದಂತೆ ಅರಣ್ಯ ಭಾಗದಲ್ಲಿರುವ ಗ್ರಾಮಗಳಲ್ಲಿ ಸೂಕ್ತ ಸಂಚಾರಕ್ಕೆ‌ ಸರಕಾರಿ ಬಸ್ ಗಳಿಲ್ಲದೆ ಆಟೋಗಳನ್ನೇ ಅವಲಂಬಿಸಿದ್ದಾರೆ.ಇನ್ನು ಕಾಲ್ನಡಿಗೆ ಮೂಲಕ ತೆರಳಲು ಕರಡಿ,ಕಾಡು ಪ್ರಾಣಿಗಳ ಹಾವಳಿಗೆ ಜನತೆ ತತ್ತರಿಸಿದ್ದಾರೆ ಕೂಡಲೇ ಬಸ್ ಸಂಪರ್ಕ‌ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂದರ್ಭದಲ್ಲಿ ರೈತ ಸಂಘಟನೆ‌ ಪದಾಧಿಕಾರಿಗಳಾದ ರಾಜನಹಟ್ಟಿ ರಾಜು,ಶರಣಪ್ಪ,ಇದ್ದರು. 

Leave a Reply

Your email address will not be published. Required fields are marked *

You missed

error: Content is protected !!