Posted by shukradeshenews Kannada news July 2

ವಿಜಯನಗರ ಜಿಲ್ಲೆ ಕೂಡ್ಲಿಗಿ / ಕೊಟ್ಟೂರು : ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಗೈದ ಶಿಕ್ಷಕ ಕೆ.ಎಂ.ವಾಸುದೇವ ಅವರಿಗೆ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಲಭಿಸಿದೆ

ಇವರ ಸಾಧನೆ ಗುರುತಿಸಿ “ಸುಜ್ಞಾನ ವಿಧ್ಯಾಪೀಠ ಮತ್ತು ಸಾಂಸ್ಕೃತಿಕ ಕಲಾವಿದರ ಸಾಧಕರ ಶ್ರೀ ಮಾತ ಪ್ರಕಾಶನ ಕರ್ನಾಟಕ”
ಹಾಗು ದಿ ಜರ್ನಿ ಆಪ್ ಸೊಸೈಟಿ ನೊಂದಾಯಿತ ಸಂಸ್ಥೆ ದೆಹಲಿ
ಇವರ ವತಿಯಿಂದ ದಾರವಾಡದಲ್ಲಿನ ರಂಗಾಯಣ ಸಾಂಸ್ಕೃತಿಕ ಸಭಾ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕವಿಗೋಷ್ಠಿ ಸಮ್ಮೇಳನದಲ್ಲಿ ಶಿಕ್ಷಕ ವಾಸುದೇವ ಅವರಿಗೆ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ

ಮೂಲತಹ ಕೊಟ್ಟೂರು ತಾಲ್ಲೂಕಿನ ತೂಲಹಳ್ಳಿ ಗ್ರಾಮದವರಾದ ವಾಸುದೇವ್ ಅವರು ಬಳ್ಳಾರಿ ಜಿಲ್ಲೆಯ ಸಿದ್ದರಾಮಪುರ , ಯರ್ರಮ್ಮನಹಳ್ಳಿ ಯಲ್ಲಿ 27 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ ಪ್ರಸ್ತುತ ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ರಾಮನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

ಸೇವೆ ಪೂರ್ವದಿಂದಲೂ ಸದಾ ಶಿಸ್ತು ಬದ್ದ ಜೀವನ ಹಾಗು ಮಾನವೀಯ ಮೌಲ್ಯಗಳನ್ನ ಮೈಗೂಡಿಸಿಕೊಂಡಿಎಉವ ಇವರು ತಾವು ಕಾರ್ಯ ನಿರ್ವಹಿಸಿದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಾಹಿತ್ಯ ಜೊತೆಗೆ ಕಲಿಕಾ ಪೂರಕ ಚಟುವಟಿಕೆ ವಿಶೇಷ ಬೋಧನೆ ಹಾಗು ಮೌಲ್ಯ ಶಿಕ್ಷಣ ನೀಡುವ ಮೂಲಕ ಸಾವಿರಾರು ವಿಧ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ

ಕರ್ತವ್ಯ ನಿರ್ವಹಿಸಿದ ಎಲ್ಲಾ ಶಾಲೆಗಳಲ್ಲೂ ಸಹ ವಿಶೇಷ ಚಟುವಟಿಕೆ ನೆಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಹಾಗು ಪೋಷಕರಿಗೆ ಮೆಚ್ಚಿನ ಶಿಕ್ಷಕರೆನಿಸಿದ್ದಲ್ಲದೆ ಸಾಹಿತ್ಯ ಚಟುವಟಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಚುಟುಕು ಕವನ , ಪದ್ಯಗಳು , ಕವನ ಸಂಕಲನಗಳನ್ನ ರಚಿಸಿ ಮಕ್ಕಳ ಪೂರಕ ಚಟುವಟಿಕೆಗೆ ಸಹಕಾರಿಯಾಗಿದ್ದಾರೆ

ಶಿಕ್ಷಕರ ಸಾಧನೆಗೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳು ಪೋಷಕರು ಹಾಗು ಸ್ನೇಹಿತರು ಬಂಧುಗಳು ಶುಭ ಹಾರೈಸಿದ್ದಾರೆ

Leave a Reply

Your email address will not be published. Required fields are marked *

You missed

error: Content is protected !!