posted by shukradeshenews July 2 Kannada news jlr

ವಚನಕಾರರ ಸಂದೇಶಗಳು ಈಗಿನ ಯುವಪೀಳಿಗೆಗೆ ಪೂರಕವಾಗಿದ್ದು ಅವರ ವಿಚಾರ ಧಾರೆಗಳು ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕವಾಗಿವೆ . ಶಾಸಕ ಬಿ.ದೇವೆಂದ್ರಪ್ಪ

ಜಗಳೂರು ಸುದ್ದಿ:-

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ. ಏರ್ಪಡಿಸಲಾಗಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಹಾಗೂ ಡಾ.ಫ.ಗು.ಹಳಕಟ್ಟೆಯವರ ಜನ್ಮದಿನ ದ ಕಾರ್ಯಕ್ರಮವನ್ನು ಉದ್ಘಾಟಿಸಿ ವಚನಕಾರರನ್ನು ಕುರಿತು ಮಾತನಾಡಿದರು.

ಫ.ಗು.ಹಳಕಟ್ಟೆ ಅವರಂತಹ ಶ್ರೇಷ್ಠ ವಿದ್ವಾಂಸ ವಚನಕಾರರು ವಚನ ಸಾಹಿತ್ಯಕ್ಕೆ ತನ್ನದೆಯಾದ ಮೆರಗು ನೀಡಿರುತ್ತಾರೆ .ಸರ್ಕಾರ ಕಳೆದ ಎರಡು ವರ್ಷಗಳಿಂದ ವಚನಕಾರರ ಜಯಂತಿ ಆಚರಿಸುವ ಮೂಲಕ ಅವರ ಜೀವನ ಚರಿತ್ರೆಗಳನ್ನು ಮೆಲುಕು ಹಾಕಲು ಸಹಕಾರಿಯಾಗಿದೆ. ವಿದ್ಯಾರ್ಥಿ ಯುವ ಸಮೂಹ ತಮ್ಮ ನಿತ್ಯ ಜೀವನದಲ್ಲಿ ವಚನಕಾರರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ.ಅಲ್ಲದೆ ಡಾ.ಬಿ.ಆರ್. ಅಂಬೇಡ್ಕರ್ ,ಬಸವಣ್ಣ,ಸೇರಿದಂತೆ ಮಹಾನೀಯರ ಜಯಂತಿಗಳನ್ನು ಕೇವಲ ಮೆರವಣಿಗೆಗೆ ಸೀಮಿತಗೊಳಿಸದೆ ಅವರ ವಿಚಾರಧಾರೆಗಳನ್ನು ವಿಷಯಮಂಡನೆಯ ಮೂಲಕ ಸಮಾಜಕ್ಕೆ ಜಾಗೃತಿ ಅಗತ್ಯವಾಗಿದೆ.

ಪುರುಷ ಮತ್ತು ಮಹಿಳೆ‌ ಸಮಾಜದ ಅಭಿವೃದ್ದಿಯ ಎರಡು ಚಕ್ರಗಳಿದ್ದಂತೆ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರವಿರುತ್ತದೆ.ಸರಕಾರಿ ಸೌಲಭ್ಯಗಳನ್ನು ಮಹಿಳೆಯರು ಸದುಪಯೋಗ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ.ಪುರುಷ ಪ್ರಧಾನ ಕುಟುಂಬದಲ್ಲಿ ಪುರುಷ ಶ್ರೇಷ್ಠ ಎಂಬ ಭಾವನೆ ತೊರೆಯಬೇಕು.ಪುರುಷ ಮತ್ತು ಮಹಿಳೆಯ ಬಾಳಿನ ಹೆಜ್ಜೆ ಸಂಸಾರಕ್ಕೆ ಸೀಮಿತವಾಗದೆ ಸಮಾಜದ ಅಭಿವೃದ್ದಿಯ ಎರಡು ಚಕ್ರಗಳಾಗಬೇಕು ಎಂದು ವ್ಯಾಖ್ಯಾನಿಸಿದರು.

ಮನುಷ್ಯನು ಜೀವನದಲ್ಲಿ ಮಾನವೀಯತೆ ಮೈಗೂಡಿಸಿಕೊಳ್ಳಬೇಕು.ವಚನಕಾರರು ಹೇಳಿಕೆಯಂತೆ ಸಕಲ ಜೀವಾತ್ಮಗಳಿಗೆ ಲೇಸು ಬಯಸಬೇಕು.ಮೌಲ್ಯ,ಚಿಂತನೆ,ಗೌರವ ಪ್ರವೃತ್ತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮುಖ್ಯವಾಗಿದೆ.ಆದ್ದರಿಂದ ಪಟ್ಟಣದಲ್ಲಿ ಸುಸಜ್ಜಿತವಾದ ಕಟ್ಟಡದಲ್ಲಿ ಜ್ಞಾನ ಸಂಪಾದನೆಗಾಗಿ ಗ್ರಂಥಾಲಯ ವ್ಯವಸ್ಥೆ ಕಲ್ಪಿಸುವೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

13 ಬಾರಿ ಬಜೆಟ್ ಮಂಡಿಸಿರುವ
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು 12 ನೇ ಶತಮಾನದ ಅನುಭವ ಮಂಟಪದ‌ ಮಾದರಿಯಲ್ಲಿ ಎಲ್ಲಾ ವರ್ಗದವರಿಗೆ ಸಾಮಾಜಿಕ‌ನ‌ ನ್ಯಾಯವನ್ನು ಬಜೆಟ್ ನಲ್ಲಿ ನೀಡಲಿದ್ದಾರೆ ಎಂದು ತಿಳಿಸಿದರು.

ಸಾಹಿತಿ ಎನ್.ಟಿ.ಎರ್ರಿಸ್ವಾಮಿ ಉಪನ್ಯಾಸ ನೀಡಿ,ಸಕಲರ ಲೇಸ ಬಯಸುವವರೇ ಶರಣರು.ವಚನ ಕ್ರಾಂತಿಗೆ ಅನುಭವಮಂಟಪ ಮಾದರಿಯಾಗಿದೆ.ಕನ್ನಡ ನಾಡಿನ ವಚನ ಸಾಹಿತ್ಯದ ಕ್ರಾಂತಿಗಾಗಿ 1880 ರಲ್ಲಿ ಫ.ಗು.ಹಳಕಟ್ಟಿ ಅವರು ಜನಿಸಿದರು.250 ವಚನಕಾರರನ್ನು ಗುರುತಿಸಿ ಅವರ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಲು ಸ್ವತಃ ಮುದ್ರಣ ಮಾಧ್ಯಮ ತೆರದು 170ಕ್ಕೂ ಅಧಿಕ ಪುಸ್ತಕಗಳನ್ನು ಅನಾವರಣಗೊಳಿಸಿದರು.ಇದರಿಂದ ಲಕ್ಷಾಂತರ ವಚನಗಳು ಜನಸಾಮಾನ್ಯರಿಗೆ ಲಭ್ಯವಾದವು ಎಂದು ಸ್ಮರಿಸಿದರು.

ನಿವೃತ್ತ ಪ್ರಾಂಶುಪಾಲ ಡಿ.ಸಿ.ಮಲ್ಲಿಕಾರ್ಜುನ್ ಮಾತನಾಡಿ,12 ನೇ ಶತಮಾನದಲ್ಲಿ ಜಗತ್ತಿಗೆ‌ ಎರಡು ಕಣ್ಣುಗಳು ವಚನ ಮತ್ತು ದಾಸ ಸಾಹಿತ್ಯಗಳಾಗಿವೆ.ಮಹಿಳೆಯರಿಗೆ ವಚನ ಸಾಹಿತ್ಯದಲ್ಲಿ ಮೊದಲ ಪ್ರಾಶಸ್ತ್ಯ ದೊರೆತಿದೆ ಎಂದರು.

ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್,ಸಾಹಿತಿ ಡಿ.ಸಿ.ಮಲ್ಲಿಕಾರ್ಜುನ್,ತಾ.ಪಂ ಇಓ ಚಂದ್ರಶೇಖರ್,ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ಬಿಇಓ ಸುರೇಶ್ ರೆಡ್ಡಿ,ಕಸಾಪ ತಾಲೂಕು ಅಧ್ಯಕ್ಷೆ ಸುಜಾತ,ಪ.ಪಂ ಸದಸ್ಯರಾದ ಲುಕ್ಮಾನ್‌ಖಾನ್,ಮಂಜುನಾಥ್,ಮಹಮ್ಮದ್ ಅಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು,ವಿದ್ಯಾರ್ಥಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *

You missed

error: Content is protected !!