posted by shukradeshenews jlr 4 Kannada news jlr

ಸುದ್ದಿ ಜಗಳೂರು.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ದೋಣಿಹಳ್ಳಿ‌ ಗ್ರಾಮದ ನಾಗರಾಜ್ ಪತ್ನಿ ರತ್ಮಮ್ಮ ಪುತ್ರ ಸಂತೋಷ್ ಈ ಕುಟುಂಬದವರು ರೇಷ್ಮೆ ಕೃಷಿಕರಾಗಿದ್ದು ರೇಷ್ಮೆ ಬೆಳೆಯಲ್ಲಿ ಯಶಸ್ವಿ ರೈತರೆಂದು ರಾಮನಗರ ರೇಷ್ಮೆ ಕೃಷಿ ಮಾರುಕಟ್ಟೆಯಿಂದ ಅಭಿನಂದಿಸಲಾಗಿದೆ.


ಇವರು ಸುಮಾರು 30 ವರ್ಷಗಳಿಂದ ರೇಷ್ಮೆ ಮತ್ತು ಕೃಷಿ ಕ್ಷೇತ್ರದಲ್ಲಿ ಅತ್ಯಂತ ಗುಣಮಟ್ಟದ ರೇಷ್ಮೆ ಬೆಳೆಯನ್ನು ಬೆಳೆದು ಯಶಸ್ವಿಯಾಗಿ ಉತ್ತಮ ಇಳುವರಿ ಗೂಡನ್ನು ಉತ್ಪಾದನೆಯಲ್ಲಿ ತೊಡಗಿದ್ದಾರೆ. ಇವರಿಗೆ ರಾಮನಗರ ರೇಷ್ಮೆ ಕೃಷಿ ಮಾರುಕಟ್ಟೆ ಉಪಾನಿರ್ದೇಶಕರು ಅಭಿನಂದನ ಪತ್ರ ನೀಡಿ ಗೌರವಿಸಿದ್ದಾರೆ. . ರಾಜ್ಯದ ಹೆಸರಾಂತ ಪ್ರಸಿದ್ಧ ಮಾರುಕಟ್ಟೆ ಒಂದಾದ ರಾಮನಗರದಲ್ಲಿ ಈ ಬಾರಿ ಅಧಿಕ ದರ ಪಡೆದಿರುತ್ತಾರೆ. ಮತ್ತು ಈ ಹಿಂದೆ ಸುಮಾರು 40 ಬಾರಿ ಅಧಿಕ ದರ ಪಡೆದ ಹೆಗ್ಗಳಿಕೆಗೂ ಪಾತ್ರರಾಗಿರುತ್ತಾರೆ.


ಇಂತಹ ವೈಜ್ಞಾನಿಕ ಪದ್ಧತಿ ಅನುಸರಿಸಿ ಬೆಳೆ ಬೆಳೆಯುವ ರೈತರು ನಮ್ಮ ಜಗಳೂರು ತಾಲೂಕಿನ ರೈತರ ವಲಯಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ.

.
ಕೃಷಿ ವಲಯದ ರೇಷ್ಮೆ ಗೂಡಿನ ಗುಣಮಟ್ಟದ ಉತ್ಪಾದನಾ ಸಾಮರ್ಥ್ಯವನ್ನು ಸಂಬಂಧಿಸಿದ ಇಲಾಖೆಗಳು ಬೆಳೆ ಬೆಳೆಯುವ ವೈಜ್ಞಾನಿಕ ಪದ್ದತಿ ಮೂಲಕ ಇನ್ನೂ ಹೆಚ್ಚಿನ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ವಹಿಸುವ ಅಗತ್ಯವಿದೆ.


ರೇಷ್ಮೆ ಉಪಾನಿರ್ದೇಶಕರು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ರಾಮನಗರ ಇವರು ಅತ್ಯುತ್ತಮ ರೇಷ್ಮೆ ಬೆಳೆಗಾರರೆಂದು ಅಭಿನಂದನ ಪತ್ರ ನೀಡಿ ಗೌರವಿಸಲಾಗಿದೆ. ತಾಲ್ಲೂಕು ಆಡಳಿತ ಇಂತ ರೇಷ್ಮೆ ಕೃಷಿಕರುನ್ನು ಗುರುತಿಸಿ ಪ್ರೋತ್ಸಾಹ ನೀಡುವ ಅಗತ್ಯವಿದ್ದು ಇನ್ನು ಹೆಚ್ಚಿನ ರೈತರು ರೇಷ್ಮೆ ಕೃಷಿಯಲ್ಲಿ ತೋಡಗಿಸಿಕೊಳ್ಳಲು ಸರ್ಕಾರ ಇಲಾಖೆ ಸೌಲಭ್ಯಗಳನ್ನು ನೀಡುವ ಅಗತ್ಯವಿದೆ ಎಂದು ತಿಳಿಸದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!