posted by shukradeshenews Kannada jlr. D 3 News

ತಾಲ್ಲೂಕಿನ ಪ್ರತಿ ಹಳ್ಳಿಗೂ ಸಹ ಕೆಂಪು ಬಿಳಿ ಬಸ್ ಬಿಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ಬಣ ತಹಶೀಲ್ದಾರ್ ರವರಿಗೆ‌ ಮನವಿ ಸಲ್ಲಿಸಿ ಆಗ್ರಹ.

ಜಗಳೂರು ಪಟ್ಟಣದ ತಾಲ್ಲೂಕು ಕಛೇರಿಗೆ ರೈತ ಸಂಘದ ಪದಾಧಿಕಾರಿಗಳು ಸೋಮವಾರ ತೆರಳಿ ಜಗಳೂರು ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಸರ್ಕಾರಿ ಬಸ್ ಕಲ್ಪಿಸುವಂತೆ ತಾಲ್ಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಹಶೀಲ್ದಾರ್ ಜಿ ಸಂತೋಷಕುಮಾರ್ ರವರಿಗೆ ರೈತ ಸಂಘದ ಪದಾಧಿಕಾರಿಗಳು ಮನವಿ ಪತ್ರ ನೀಡಿ ನಮ್ಮ ಬೇಡಿಕೆಗಳುನ್ನು ಹಿಡೇರಿಸುವಂತೆ ಒತ್ತಾಯಿಸಿ ಕೆಲ ಹೊತ್ತು ತಾಲ್ಲೂಕು ಕಛೇರಿ ಮುಂಬಾಗದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.ಈ ವೇಳೆ ರೈತ ಸಂಘದ ಮುಖಂಡ ಗೌಡಗೊಂಡನಹಳ್ಳಿ ಸತೀಶ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಹ ನಮ್ಮ ಹಿಂದೂಳಿದ ತಾಲ್ಲೂಕು ಕೇಂದ್ರದ ವಿವಿಧ ಹಳ್ಳಿಗಳಿಗೆ ಸರ್ಕಾರಿ ಬಸ್ ಸೌಲಭ್ಯಗಳಿಲ್ಲದೆ ಈಗಿನ ಸರ್ಕಾರದ ಮಹತ್ವದ ಶಕ್ತಿ ಯೋಜನೆಯ ಸೌಲಭ್ಯವು ನಮ್ಮ ಮಹಿಳೆಯರಿಗೆ ವಂಚಿತವಾದಂತಾಗಿದೆ. ‌.ರಾಜ್ಯದಲ್ಲಿ ಈ ಸೌಲಭ್ಯವನ್ನ ಪಡೆಯುತ್ತಿದ್ದು ನಮ್ಮ ತಾಲ್ಲೂಕಿನಲ್ಲಿ ಸರ್ಕಾರಿ ಬಸ್ ಸೌಲಭ್ಯಗಳಿಲ್ಲದೆ ಉಚಿತ ಪ್ರಯಾಣದ ಸೌಲಭ್ಯ ಮರೀಚಿಕೆಯಾಗಿದೆ .ಈಗಿರುವ ಮೂರು ನಾಲ್ಕು ಸರ್ಕಾರಿ ಬಸ್ ಗಳು ಕೇವಲ ದಾವಗೆರೆ ಟು ಜಗಳೂರು ಮಾರ್ಗಕ್ಕೆ ಸೀಮಿತವಾಗಿವೆ. ಶೀಘ್ರವೆ ತಾಲ್ಲೂಕಿನ ಪ್ರತಿ ಹಳ್ಳಿಗಳಿಗೂ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು..

ರಾಜ್ಯ ರೈತ ಸಂಘದ ತಾಲ್ಲೂಕು ಪ್ರದಾನ ಕಾರ್ಯಧರ್ಶಿ ರಾಜು ಮತನಾಡಿ ತಾಲ್ಲೂಕಿನ ಚಿಕ್ಕಬನ್ನಿಹಟ್ಟಿ ಸೇರಿದಂತೆ ವಿವಿಧ ಕೆಲ ಗ್ರಾಮೀಣ ರಸ್ತೆಗಳು ತಗ್ಗು ಗುಂಡು ಬಿದ್ದು ರಸ್ತೆಗಳು ಹಾಳಾಗಿವೆ. ಗ್ರಾಮೀಣ ಬಾಗದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಸಂಚಾರಿಸುವುದೇ ಒಂದು ಸಾಹಸವಾಗಿದೆ. ಇನ್ನು ವೃದ್ದರು ಮಹಿಳೆಯರು ಪಟ್ಟಣಕ್ಕೆ ಕೆಲಸ ನಿಮಿತ್ತ ಬರಲು ದಿನವೀಡಿ ಆಟೋಗಳಿಗೆ ಕಾಯಬೇಕಾದ ಪರಿಸ್ಥಿತಿಯಿದೆ ಸರ್ಕಾರ ಈ ಹಿಂದೆ ಜಗಳೂರು ಪಟ್ಟಣದಲ್ಲಿ ಕೆ ಎಸ್ ಆರ್ ಟಿ ಸಿ ಡಿಪೋ ಸ್ಥಾಪನೆ ಮಾಡಲು ಜಾಗ ಗುರುತಿಸಿದೆ ಆದರೆ ಇದುವರೆಗೂ ಅದರ ಬಗ್ಗೆ ಅಧಿಕಾರಿಗಳ ಚಕಾರ ಎತ್ತಿಲ್ಲ .ನಮ್ಮಗಳ ನಿರಂತರ ಹೋರಾಟಕ್ಕೆ ನಾಮಕವ್ಯವಸ್ಥೆಗೆ ಬೆರಳಿಕೆಯಷ್ಟು ಕೆಂಪು ಬಿಳಿ ಬಸ್ ಬಿಟ್ಟು ಕೈತೊಳೆದುಕೊಳ್ಳುವುದು ಯಾವ ಪುರಷರ್ಥಕ್ಕೆ ಎಂದು ಪ್ರಶ್ನೆಸಿದರು. ಶೀಘ್ರವೆ ಗ್ರಾಮೀಣ ಬಾಗಗಳಿಗೆ ಸರ್ಕಾರಿ ಬಸ್ ಕಲ್ಪಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ದಿಬ್ಬದಹಳ್ಳಿ ಗಂಗಾಧರಪ್ಪ..ಜಿಲ್ಲಾ ರೈತ ಸಂಘದ ಕಾರ್ಯಧರ್ಶಿ ಚಿಕ್ಕಮಲನಹೊಳೆ ಚಿರಂಜೀವಿ. ಶರಣಪ್ಪ.ಯರ್ಲಕಟ್ಟೆ ಕೆಂಚಪ್ಪ ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!