ಜಗಳೂರು ತಾಪಂ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನವು ಕಳೆದ ಸುಮಾರು ಒಂದು ವರ್ಷಗಳಿಂದ ಖಾಯಂ ಇಓ ಸ್ಥಾನವು ಖಾಲಿಯಾಗಿತ್ತು. ತಾತ್ಕಾಲಿಕವಾಗಿ ಇಲ್ಲಿನ ಎನ್ ಆರ್ ಇ ಜಿ ಸಹಾಯಕ ನಿರ್ದೇಶಕ ಚಂದ್ರಶೇಖರ್ ರವರನ್ನು ಪ್ರಭಾರೆ ಇಓ ಆಗಿ ನೇಮಿಸಲಾಗಿತ್ತು . ಇದೀಗ ಸರ್ಕಾರದ ನೀಯಮದಂತೆ ರಾಣೆಬೆನ್ನೂರು ತಾಲ್ಲೂಕಿನಿಂದ ಜಗಳೂರಿಗೆ ನೂತನ ತಾಪಂ ಇಓ ಮಲ್ಲಾಡದರವರು ಅಧಿಕೃತವಾಗಿ ತಾಪಂ ಕಛೇರಿಯಲ್ಲಿ ಅಧಿಕಾರ ಸ್ವಿಕಾರಿಸಿದ್ದಾರೆ..ಇವರು ರಾಣೆಬೆನ್ನೂರು ಸೇರಿದಂತೆ ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಜಗಳೂರು ತಾಪಂ ಇಲಾಖೆಯಲ್ಲಿ ಅಧಿಕಾರ ಸ್ವಿಕಾರ ಮಾಡಿಕೊಂಡಿದ್ದಾರೆ.