ಉರ‍್ಲುಕಟ್ಟೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ
: ಜಗಳೂರು ತಾಲೂಕಿನ ಉರ‍್ಲುಕಟ್ಟೆ ಗ್ರಾಮದಲ್ಲಿ ಶ್ರೀಬಸವೇಶ್ವರಸ್ವಾಮಿ ರಥೋತ್ಸವ ಜರುಗಿತು.
ಉರ‍್ಲುಕಟ್ಟೆ ಗ್ರಾಮದಲ್ಲಿ ನಡೆದ ರಥೋತ್ಸವದ ಭಕ್ತಿ ಭಾವುಟವನ್ನು ಮಡ್ರಹಳ್ಳಿ ಮಹಾಲಿಂಗಪ್ಪರ ಮಗನಾದ ರಾಜು ಎಂಬುವರು 2.30000 ರೂ.ಗಳಿಗೆ ಶ್ರೀ ಬಸವೇಶ್ವರ್ ಸ್ವಾಮಿಯ ಭಾವುಟವನ್ನು ಬಹಿರಂಗ ಹರಾಜಿನಲ್ಲಿ ಸ್ವರ್ದಿ ಪ್ರತಿಸ್ವರ್ಧಿಗಳ ಕೂಗುವ ಮೂಲಕ ರಾಜುರವರಿಗೆ ಒಲಿದು ಬಂತು ಶ್ರೀಬಸವೇಶ್ವರ್ ಭಾವುಟ. ನಂತರ ನಾಲ್ಕು ಹೂವಿನ ಹಾರವೂ ತಲಾ 25000 ಸಾವಿರದಂತೆ ಗ್ರಾಮದ ವಿವಿಧ ಭಕ್ತರು ಹರಾಜು ಮಾಡಿಕೊಂಡರು. ಒಟ್ಟು ಬಾವುಟ, ಹೂವಿನ ಸೇರಿದಂತೆ ಒಟ್ಟು 3.30 ಲಕ್ಷ ರೂ. ಹರಾಜು ಪ್ರಕ್ರಿಯೆಯಿಂದ ದೇವರಿಗೆ ಹಣ ಬಂದಿದೆ ಎಂದು ಗ್ರಾಮದ ಪೂಜರಿಗಳಿಂದ ತಿಳಿದು ಬಂದಿದೆ.
ಇನ್ನು ಬಸವೇಶ್ವರ ರಥೋತ್ಸವಕ್ಕೆ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ತಾಲ್ಲೂಕಿನಿಂದ ವಿವಿಧ ವಾಹನಗಳೊಂದಿಗೆ ಆಗಮಿಸಿದ ಭಕ್ತರು ರಥೋತ್ಸವದ ಗಾಲಿಗೆ ಕಾಯಿ ಒಡೆದು, ಕಳಸ ಹಾಗೂ ರಥೋತ್ಸವಕ್ಕೆ ಬಾಳೆ ಹಣ್ಣು ಪೂಜೆ ಪುನಸ್ಕಾರಗಳೊಂದಿಗೆ ಭಕ್ತಿಭಾವದಿಂದ ಪೂಜಾಕೈಂಕಾರ್ಯದಲ್ಲಿ ತೋಡಗಿಕೊಂಡಿದ್ದರು ರಥೋತ್ಸವದ ಸಾಗುತ್ತಿದ್ದಂತೆ ಭಕ್ತರು ಬಾಳೆ ಹಣ್ಣೆ ಎಸೆಯುತ್ತಿದ್ದಂತೆ ಶ್ರೀ ಬಸವೇಶ್ವರ ಸ್ವಾಮಿಯ ಘೋಷಣೆಯೊಂದಿಗೆ ರಥೋತ್ಸವ ಜರುಗಿತು ಆಪಾರ ಭಕ್ತಸಮೂಹ ಭಾಗಿಯಾಗಿದ್ದರು