posted by shukradeshenews Kannada jlr July 7

ಜಗಳೂರು ಸುದ್ದಿ.

ಪ್ಲಾಸ್ಟಿಕ್ ‌ಮುಕ್ತ ಪಟ್ಟಣವನ್ನಾಗಿ ಮಾಡಲು ನಗರದ ಜನತೆ ಸಹಕರಿಸುವಂತೆ ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್ ತಿಳಿಸಿದ್ದಾರೆ.

ಜಗಳೂರು ಪಟ್ಟಣದ ನೂತನ ಪಪಂ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್ ಮಾತನಾಡಿದರು

ದಿ.1 -7- 2023 ರಿಂದ ಜುಲೈ 28 ರವರೆಗೆ ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ .ಸಾರ್ವಜನಿಕರು ಆಕ್ರಮವಾಗಿ ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಪ್ಲಾಸ್ಟಿಕ್ ಮಾರಾಟ ಮಾಡುವುದನ್ನ ತಡೆಯಲು ಸರ್ಕಾರದ ನೀಯಮವಳಿಯಂತೆ ಕಿರಾಣಿ ಅಂಗಡಿ ಸೇರಿದಂತೆ ದೊಡ್ಡ ಮಳಿಗೆ ಬೀದಿ ವ್ಯಾಪಾರಿಗಳು .

ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದರೆ 5000 ಸಾವಿರ ದಂಡ ವಿಧಿಸಲು ನಮ್ಮ ಇಲಾಖೆಯಿಂದ ರಚಿರುವ ತಂಡದವರ ಮೂಲಕ ದಾಳಿ ನಡೆಸಿ ದಂಡ ವಿಧಿಸಲಾಗುವುದು.


ಪ್ರಥಮದಲ್ಲಿ ಇದೀಗ ಪ್ಲಾಸ್ಟಿಕ್ ಮುಕ್ತ ಮಾಡಿ ಹಸಿರುಕರಣ ಮಾಡುವ ಸಂಕಲ್ಪದಂತೆ ಸಮಾಜದಲ್ಲಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬೀದಿ ಅಂಗಡಿ ಮುಗ್ಗಟುಗಳಲ್ಲಿ ಜಾಗೃತಿ ಮೂಡಿಸುಲಿದ್ದು ನಾಗರೀಕರು ಪ್ಲಾಸ್ಟಿಕ್ ನಿಷೇಧಿಸಲು ಕೈಜೊಡಿಸಬೇಕು .ಎಂದು ಹೇಳಿದರು.
ಪಪಂ ಆರೋಗ್ಯ ಅಧಿಕಾರಿ ಕಿಪಾಯತ್ ಮಾತನಾಡಿ ಪ್ಲಾಸ್ಟಿಕ್ ಬಳಕೆಯಿಂದ ನಗರ ಅಶುಚಿತ್ವ ಮತ್ತು ಪ್ರಾಣಿಗಳಿಗೆ ವಿಷಪಾಶನದಂತೆ ಪ್ರಾಣಿಪಕ್ಷಿಗಳ ಆರೋಗ್ಯ ದ ಮೇಲೆ ದುಷ್ಪರಿಣಾಮ ಬೀರುವುದು. ಪ್ಲಾಸ್ಟಿಕ್ ನಿಂದ ಹಲವು ಕಾಯಿಲೆಗಳು ಸೃಷ್ಠಿಯಾಗುವುವು. ಆದ್ದರಿಂದ ಮನುಷ್ಯರಾದ ನಾವು ಪ್ಲಾಸ್ಟಿಕ್ ನಿಷೇಧಿಸಿ ಆರೋಗ್ಯವಂತ ಹಾಗೂ ಸುಂದರ ಪಟ್ಟಣವನ್ನಾಗಿ ಮಾಡಲು ಸಾರ್ವಜನಿಕರ ಸಹಕಾರ ಬಹುಮುಖ್ಯವೆಂದು ತಿಳಿಸಿದರು.

Leave a Reply

Your email address will not be published. Required fields are marked *

You missed

error: Content is protected !!