ಶುಕ್ರದೆಸೆ ವೆಬ್ ನ್ಯೂಸ್:-
ಚಿತ್ರನಟ ಗೊಲ್ಡನ್ ಸ್ಟಾರ್ ಗಣೇಶ್ ರವರ ಹುಟ್ಟು ಹುಟ್ಟು ಹಬ್ಬದ ಅಂಗವಾಗಿ ಕಣ್ವಕುಪ್ಪೆ ಗವಿ ಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಹಾಗೂ ಹಿಮವತ್ ಕೇದಾರ ಜಗದ್ಗುರು ಸ್ವಾಮೀಜಿ ಅವರ ಅಶಿರ್ವಾದ ಪಡೆದರು. ಜುಲೈ 2 ರಂದು ಅವರ ಹುಟ್ಟುಹಬ್ಬದ ಸಂಭ್ರಮದ ಅಂಗವಾಗಿ ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಗಳನ್ನು ಭೇಟಿ ಮಾಡಿ ಅಶಿರ್ವಾದ ಪಡೆದರು. ಎಂದು ಅಭಿಮಾನಿ ಮೂಲಗಳಿಂದ ತಿಳಿದು ಬಂದಿದೆ.
‘
ಗೋಲ್ಡನ್ ಸ್ಟಾರ್ ’ ಎಂದೇ ಖ್ಯಾತಿ ಪಡೆದಿರುವ ಗಣೇಶ್ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. 43ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಯುಕ್ತ ಅವರ ಚಿತ್ರಗಳು ಮತ್ತೂಷ್ಟು ಸಮಾಜಮುಖಿಯಾಗಿ ಯಶಸ್ವಿ ಕಾಣಲಿ ಎಂದು ಸ್ವಾಮೀಜಿಗಳು ಹಾರೈಸಿದ್ದಾರೆ.