By shukradeshe news Editor m rajappa Vyasagondanahalli
ಶುಕ್ರದೆಸೆ ನ್ಯೂಸ್ ಸಂಪಾದಕ ರಾಜಪ್ಪ ವ್ಯಾಸಗೊಂಡನಹಳ್ಳಿ
July 9, 2023,
ಬಸವರಾಜಪ್ಪ ಎಂಬ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಜರುಗಿದೆ. . ಶವಗಾರ ಕೊಠಡಿಗೆ ಶಾಸಕ ಬಿ ದೇವೆಂದ್ರಪ್ಪ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಜಗಳೂರು ತಾಲ್ಲೂಕಿನ ಹನುಮಂತಾಪುರ ಗ್ರಾಮದ 52 ವರ್ಷದ ಬಸವರಾಜ ತಂದೆ ಈಶ್ವರಪ್ಪ ಎಂಬ ವ್ಯಕ್ತಿ ಜಮೀನಿನಲ್ಲಿ ಹಸುಗಳಿಗಳಿಗೆ ಹುಲ್ಲು ತರಲು ಶನಿವಾರ ಸಾಯಂಕಾಲ 5.30 ಕ್ಕೆ ಜಮಿನಿಗೆ ಹೋದ ಸಂದರ್ಭದಲ್ಲಿ ಭೋರವೆಲ್ ಗೆ ಸಂಪರ್ಕವಿರುವ ವಿದ್ಯುತ್ ವಯರ್ ತಗುಲಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜರುಗಿದೆ.
ಸಂತ್ರಸ್ತ ಕುಟುಂಬಕ್ಕೆ ಶಾಸಕರು ಸಾಂತ್ವನ
ವಿಷಯ ತಿಳಿಯುತಿದ್ದಂತೆ ಶವಗಾರ ಕೊಠಡಿಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸ್ವಾಂತನ ಹೇಳಿ ಸಂತ್ರಸ್ತರಿಗೆ 20.000 ಧನಸಹಾಯ ನೀಡಿ ಸ್ವಾಂತ್ವನ ಹೇಳಿದರು. ವೈದ್ಯರುಗಳಿಗೆ ತುರ್ತು ಶವ ಪರೀಕ್ಷೆ ನಡೆಸಿ ಕುಟುಂಬದವರಿಗೆ ಅಸ್ತಂತರ ಮಾಡುವಂತೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಷಂಷೀರ್ ಆಹಮದ್.ಟೌನ್ ಪಂಚಾಯತಿ ಕೌನ್ಸಿಲ್ ರಾದ ರಮೇಶ್ ರೆಡ್ಡಿ .ರವಿಕುಮಾರ್.ಮಂಜನಾಥ.ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಟಿ ಎಚ್ ಓ ನಾಗರಾಜ್.ಉಪನ್ಯಾಸಕರಾದ ತಿಪ್ಪೇಸ್ವಾಮಿ..ಮುಖಂಡ ನಾಗರಾಜ್.ಸೇರಿದಂತೆ ಹಾಜರಿದ್ದರು.